Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

EPFO forms: ಪಿಎಫ್ ಹಣ ಡ್ರಾ ಮಾಡೋದು ಹೇಗೆ ಅಂತ ಗೊತ್ತಿಲ್ವಾ? ಇಲ್ಲಿದೆ ನೋಡಿ 7 ಹಂತಗಳ ಸುಲಭವಾದ ವಿಧಾನ, ಇಷ್ಟು ಮಾಡಿ ಸಾಕು.

EPFO ನಲ್ಲಿ ಪೆನ್ಶನ್, ಲೈಫ್ ಇನ್ಷುರೆನ್ಸ್ ಸೇರಿದಂತೆ ಇನ್ನು ಕೆಲವು ಸೌಲಭ್ಯಗಳು ಸಿಗುತ್ತದೆ. ಒಂದು ವೇಳೆ ನೀವು ಈ EPFO ಇಂದ ಹಣ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದರೆ, 7 ಹಣ ವಿತ್ ಡ್ರಾ ಮಾಡುವ 7 ವಿಧಾನಗಳನ್ನು ತಿಳಿಸಿಕೊಡುತ್ತೇವೆ.

EPFO forms: ಕೆಲಸ ಮಾಡುತ್ತಿರುವ ಎಲ್ಲರೂ ಕೂಡ ನಿವೃತ್ತಿ ನಂತರ ತಮ್ಮ ಬದುಕು ಚೆನ್ನಾಗಿರಬೇಕು ಎಂದು ಸಂಬಳದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಉಳಿಸುತ್ತಾರೆ. ಇದು ಪಿಎಫ್ ಯೋಜನೆಯಲ್ಲಿ ಉಳಿಸಿ, ನಿವೃತ್ತಿ ಬಳಿಕ ಅದರ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಯನ್ನು ನಿಭಾಯಿಸುವುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO). EPFO ಸಂಸ್ಥೆಯು EPFO ​​EPF ಯೋಜನೆ 1952, ನೌಕರರ ಪಿಂಚಣಿ ವ್ಯವಸ್ಥೆ 1995, ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ಈ ಯೋಜೆನಗಳ ಮೂಲಕ ಸಿಬ್ಬಂದಿಗಳಿಗೆ ಸಾಕಷ್ಟು ಅನುಕೂಲಗಳನ್ನು ಒದಗಿಸುತ್ತದೆ.

EPFO ನಲ್ಲಿ ಪೆನ್ಶನ್, ಲೈಫ್ ಇನ್ಷುರೆನ್ಸ್ ಸೇರಿದಂತೆ ಇನ್ನು ಕೆಲವು ಸೌಲಭ್ಯಗಳು ಸಿಗುತ್ತದೆ. ಒಂದು ವೇಳೆ ನೀವು ಈ EPFO ಇಂದ ಹಣ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದರೆ, 7 ಹಣ ವಿತ್ ಡ್ರಾ ಮಾಡುವ 7 ವಿಧಾನಗಳನ್ನು ತಿಳಿಸಿಕೊಡುತ್ತೇವೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

1. ಫಾರ್ಮ್ 13 :- ಒಂದು ಕಂಪನಿಯಲ್ಲಿ ಕೆಲಸ ಬಿಟ್ಟು ಇನ್ನೊಂದು ಕಂಪನಿಗೆ ಹೊಸದಾಗಿ ಕೆಲಸಕ್ಕೆ ಸೇರಿದಾಗ, ಫಾರ್ಮ್ 13 ಬಳಸಿ EPFO ಇಂದ ಹಣವನ್ನು ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಾ ಸಿಬ್ಬಂದಿಗಳು ಈ ಒಂದು ಕೆಲಸ ಮಾಡಬೇಕು. ಹಳೆಯ ಕಂಪನಿಯ ಖಾತೆಯಲ್ಲೇ ಹಣವನ್ನು ಬಿಟ್ಟರೆ, ಒಂದೇ ಕಡೆ ನೀವು ಹೂಡಿಕೆ ಮಾಡಿರುವ ಹಣ ಕಾಣಿಸಿಕೊಳ್ಳುತ್ತದೆ.

2. ಫಾರ್ಮ್ 20 :- ಕೆಲಸ ಮಾಡುತ್ತಿರುವ ಸಿಬ್ಬಂದಿ ಮರಣ ಹೊಂದಿದರೆ ಅವರ ಕುಟುಂಬದವರು ಈ ಹಣವನ್ನು ಕ್ಲೇಮ್ ಮಾಡಿಕೊಳ್ಳಲು ಫಾರ್ಮ್ 20 ಸಲ್ಲಿಸಬೇಕಾಗುತ್ತದೆ. ಸಿಬ್ಬಂದಿ ಕಡಿಮೆ ವರ್ಷಗಳ ಕಾಲ ಕೆಲಸ ಮಾಡಿದ್ದರು ಸಹ, ಈ ಫಾರ್ಮ್ ಸಲ್ಲಿಸಬೇಕಾಗುತ್ತದೆ.

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

3. ಫಾರ್ಮ್ 51B :- ಕೆಲಸ ಮಾಡುತ್ತಿರುವ ಸಿಬ್ಬಂದಿ ಮರಣ ಹೊಂದಿದಾಗ ಆತನ ಮನೆಯವರು ಅಥವಾ ನಾಮಿನಿ ಮಾಡಿರುವ ವ್ಯಕ್ತಿ ಆತನ ಠೇವಣಿ ಲಿಂಕ್ಡ್ ಇನ್ಷುರೆನ್ಸ್ ಕ್ಲೇಮ್ ಮಾಡುವುದಕ್ಕೆ ಈ ಫಾರ್ಮ್ ಬೇಕಾಗುತ್ತದೆ.

4. ಫಾರ್ಮ್ 10C :- ಕೆಲಸ ಮಾಡುತ್ತಿರುವವರು ಇಪಿಎಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ದರೆ, ಅದರ ಶೇರ್ ಹಣವನ್ನು ವಿತ್ ಡ್ರಾ ಮಾಡಲು ಫಾರ್ಮ್ 10C ಬೇಕಾಗುತ್ತದೆ.

5. ಫಾರ್ಮ್ 10D :- ಕೆಲಸದಿಂದ ನಿವೃತ್ತಿ ಆದ ನಂತರ ತಿಂಗಳಿಗೆ ಒಮ್ಮೆ ಪೆನ್ಶನ್ ಪಡೆಯುವುದಕ್ಕೆ ಈ ಫಾರ್ಮ್ ಸಲ್ಲಿಸಬೇಕು.

6. ಫಾರ್ಮ್ 19 :- ನಿಮ್ಮ ಪಿಎಫ್ ಅಕೌಂಟ್ ಗೆ ಸಂಬಂಧಿಸಿದ ಹಾಗೆ ಎಲ್ಲವನ್ನು ಇತ್ಯರ್ಥ ಮಾಡುವುದಕ್ಕಾಗಿ ಈ ಫಾರ್ಮ್ ಸಲ್ಲಿಸಬೇಕಾಗುತ್ತದೆ.

7. ಫಾರ್ಮ್ 31 :- ನೀವು ಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಮುಂಚಿತವಾಗಿಯೇ ವಿತ್ ಡ್ರಾ ಮಾಡಲು ಈ ಫಾರ್ಮ್ ಸಲ್ಲಿಸಬೇಕು.

Money in Dream: ಹಣದ ಕನಸುಬಿದ್ದರೆ ನೀವು ಶ್ರೀಮಂತರಾಗುವಿರೇ ಅಥವಾ ಬಡವರಾಗಿರುವಿರೇ?! ಲಕ್ಷ್ಮೀದೇವಿಯ ಸ್ವರೂಪವಾಗಿರುವ ನಾಣ್ಯ ಕನಸಿನಲ್ಲಿ ಬಂದರೆ ತಪ್ಪದೇ ಈ ಒಂದು ಕೆಲಸವನ್ನು ಮಾಡಿ!!

ಈ 7 ರೀತಿಯ ಹಣ ವರ್ಗಾವಣೆ ವಿಧಾನಗಳಲ್ಲಿ ನೌಕರರು ಹೆಚ್ಚಾಗಿ
ಫಾರ್ಮ್ 10 ಸಿ, ಫಾರ್ಮ್ 31, ಫಾರ್ಮ್ 19 ಮೂಲಕ ಹೆಚ್ಚಾಗಿ ಹಣ ವರ್ಗಾವಣೆ ಮಾಡುತ್ತಾರೆ.

Types of EPFO forms and how to withdraw them Here are the complete details explained.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment