Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ನೀವು ಉತ್ತಮವಾದ ಆದಾಯ ಪಡೆಯಬಹುದು. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡಬಹುದು. 1, 2, 3 ಮತ್ತು 5 ವರ್ಷಕ್ಕೆ

ಹೂಡಿಕೆಗೆ ಸರಿಯಾದ ಆದಾಯ ಬರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರ ಜೊತೆಗೆ ನೀವು ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿರುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗೆ ಹಣಕ್ಕೆ ಭದ್ರತೆ ಜೊತೆಗೆ ಸುರಕ್ಷತೆ ಇರುವ ಹೂಡಿಕೆಗೆ ಪೋಸ್ಟ್ ಆಫೀಸ್ ಉತ್ತಮ ಆಯ್ಕೆ. ಇಲ್ಲಿ ಎಲ್ಲರಿಗೂ ಸರಿ ಹೊಂದುವಂತೆ ಅನೇಕ ಯೋಜನೆಗಳಿವೆ. ಇಂಥದ್ದೊಂದು ಯೋಜನೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್. ಇದರಲ್ಲಿ ನೀವು 4.5 ಲಕ್ಷ ಬಡ್ಡಿಯನ್ನೇ ಪಡೆಯುತ್ತೀರಿ. ಹಾಗಿದ್ದಲ್ಲಿ ಈ ಸ್ಕೀಮ್ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಸುತ್ತೇವೆ ನೋಡಿ..

Post Office Time Deposit Scheme:

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ನೀವು ಉತ್ತಮವಾದ ಆದಾಯ ಪಡೆಯಬಹುದು. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡಬಹುದು. 1, 2, 3 ಮತ್ತು 5 ವರ್ಷಕ್ಕೆ ಹೂಡಿಕೆ ಮಾಡುವ ಆಯ್ಕೆ ಇರುತ್ತದೆ.

  • ಈ ಸ್ಕೀಮ್ ನಲ್ಲಿ ಮಿನಿಮಮ್ 1000 ರೂಪಾಯಿ ಹೂಡಿಕೆ ಮಾಡಬಹದು
  • ಮ್ಯಾಕ್ಸಿಮಮ್ ಹೂಡಿಕೆಗೆ ಲಿಮಿಟ್ ಇಟ್ಟಿಲ್ಲ
  • ಒಬ್ಬರು ಸಿಂಗಲ್ ಖಾತೆ ತೆರೆಯಬಹುದು ಅಥವಾ ಇಬ್ಬರು ಮೂವರು ಸೇರಿ ಜಾಯಿಂಟ್ ಅಕೌಂಟ್ ತೆರೆಯಬಹುದು.

ಟೈಮ್ ಡೆಪಾಸಿಟ್ ಸ್ಕೀಮ್ ಬಡ್ಡಿದರ:

ಈ ಸ್ಕೀಮ್ ನ ಬಡ್ಡಿದರ ಫೆಬ್ರವರಿ 5ರಂದು ಜಾರಿಗೆ ಬಂದಿದೆ..

  1. 1 ವರ್ಷಕ್ಕೆ 6.9%
  2. 2 ವರ್ಷಕ್ಕೆ 7%
  3. 3 ವರ್ಷಕ್ಕೆ 7.1%
  4. 5 ವರ್ಷಕ್ಕೆ 7.5% ಬಡ್ಡಿದದ ನಿಗದಿಯಾಗಿದೆ.
  • ಈ ಸ್ಕೀಮ್ ನಲ್ಲಿ ಬಡ್ಡಿದರವನ್ನು ತ್ರೈಮಾಸಿಕ ಸಮಯಕ್ಕೆ ಲೆಕ್ಕ ಹಾಕಿ, ವಾರ್ಷಿಕವಾಗಿ ನೀಡಲಾಗುತ್ತದೆ.
  • ಈಗಿನ ಬಡ್ಡಿದರ ಜಾರಿಯಲ್ಲಿರುವುದು 2024ರ ಮಾರ್ಚ್ 31ರವರೆಗು.
  • ಈ ಯೋಜನೆಯ ಪ್ರಮುಖ ವಿಶೇಷತೆ ಇಲ್ಲಿ ನಿಮಗೆ 5 ವರ್ಷಗಳ ಅವಧಿಯ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಪ್ರಯೋಜನ ಸಿಗುತ್ತದೆ.

10 ಲಕ್ಷ ಹೂಡಿಕೆಗೆ ಸಿಗುವ ಲಾಭವೆಷ್ಟು?

  • ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ 10 ಲಕ್ಷ ರೂಪಾಯಿಗಳನ್ನು 1 ವರ್ಷಕ್ಕೆ ಹೂಡಿಕೆ ಮಾಡಿದರೆ 6.9% ಬಡ್ಡಿದರದಲ್ಲಿ 70,806 ರೂಪಾಯಿ ಬಡ್ಡಿ ಸಿಗುತ್ತದೆ. ಮೆಚ್ಯುರಿಟಿ ಬಳಿಕ ₹10,70,806 ರೂಪಾಯಿ ಸಿಗುತ್ತದೆ.
  • 10 ಲಕ್ಷ 2 ವರ್ಷದ ಹೂಡಿಕೆಗೆ 7.0% ಬಡ್ಡಿದರಲ್ಲಿ ₹1,42,882 ಬಡ್ಡಿ ಪಡೆಯುತ್ತೀರಿ.ಮೆಚ್ಯುರಿಟಿ ನಂತರ ನಿಮಗೆ ₹11,42,882 ರೂಪಾಯಿ ಸಿಗುತ್ತದೆ..
  • 10 ಲಕ್ಷ ರೂಪಾಯಿ 3 ವರ್ಷದ ಹೂಡಿಕೆಗೆ 7.1% ಬಡ್ಡಿದರದಲ್ಲಿ ₹2,35,075 ರೂಪಾಯಿ ಬಡ್ಡಿದರವೇ ಸಿಗುತ್ತದೆ. ಮೆಚ್ಯುರಿಟಿ ನಂತರ ನಿಮ್ಮ ಕೈಗೆ ₹12,35,075 ರೂಪಾಯಿ ಸಿಗುತ್ತದೆ.
  • 10 ಲಕ್ಷ ರೂಪಾಯಿ 5 ವರ್ಷ ಹೂಡಿಕೆಗೆ 7.5% ಬಡ್ಡಿದರದಲ್ಲಿ ₹4,49,948 ರೂಪಾಯಿ ಬಡ್ಡಿ ಬರುತ್ತದೆ. ಮೆಚ್ಯುರಿಟಿ ನಂತರ ನಿಮ್ಮ ಕೈಗೆ ₹14,49,948 ರೂಪಾಯಿ ಸಿಗುತ್ತದೆ.

Post Office Time Deposit Scheme

Leave a comment