Money Management: ಬರುವ ಸಂಬಳ ತಿಂಗಳ ಕೊನೆಗೆ ಉಳಿಯುತ್ತಾ ಇಲ್ಲವೇ ? ಹೆತ್ತವರ ನಡತೆ, ಬಾಲ್ಯದ ದಿನಗಳು ಇದಕ್ಕೆ ಈ 7 ಕಾರಣವಾಗುತ್ತವೆಯೆ?
ನಾಳೆಯ ಬಗ್ಗೆ ಯಾವುದೇ ಚಿಂತೆ ಇಲ್ಲದೆಯೇ ನಾಳೆ. ಏನಾದರೂ ಪರ್ವಾಗಿಲ್ಲ . ಇವತ್ತಿನ ಬದುಕನ್ನು ಚೆನ್ನಾಗಿ ಬದುಕಬೇಕು ಎಂಬ ಮನೋಭಾವ ಇದ್ದರೆ ನಾಳಿನ ಬದುಕಿಗೆ ಕಷ್ಟ ಬಂದಾಗ ನಿಮ್ಮ ಬಳಿ ಯಾವುದೇ ಹಣ ಇರುವುದಿಲ್ಲ.
Money Management: ತಿಂಗಳಿಗೆ ಲಕ್ಷ ಸಂಬಳ ಬಂದರೂ ತಿಂಗಳ ಕೊನೆಯಲ್ಲಿ ಗೆಳೆಯರ ಬಳಿ ಸಾಲ ಕೇಳುವ ಅನೇಕ ಮಂದಿ ಇದ್ದಾರೆ. ಹಾಗೆಯೇ ಹತ್ತು ಸಾವಿರದಲ್ಲಿ ಇಡೀ ತಿಂಗಳು ಮನೆ, ಮಕ್ಕಳು ಎಂದು ಎಲ್ಲಾ ರೀತಿಯ ಖರ್ಚುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವವರು ಇದ್ದಾರೆ. ಆದರೆ ನಾವು ಈಗ ಹೇಳಲು ಹೊರಟಿರುವುದು ತಿಂಗಳ 30 ದಿನವೂ ದುಡಿದು ಕೈ ಸೇರುವ ಸಂಬಳ ಅರಿಯದೆ ಇದ್ದಂತೆ ಖಾಲಿ ಆಗುವ ಬಗ್ಗೆ, ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೈ ಸೇರಿದ ಸಂಬಳದ ಹಣ ಅರಿಯದೆ ಖಾಲಿ ಆಗಿ ಮತ್ತೆ ಎಲ್ಲಿಯಾದರೂ ಸಾಲ ಮಾಡುತ್ತಾ ಇದ್ದರೆ ಅಥವಾ ನಿಮ್ಮ ಜೀವನದಲ್ಲಿ ಹಣವನ್ನು ಯಾವುದೇ ಬ್ಯಾಂಕ್ ಗಳಲ್ಲಿ ಹೂಡಿಕೆ (Money Investment) ಮಾಡದೆಯೇ , ಯಾವ ರೀತಿಯಲ್ಲಿಯೂ ಕಷ್ಟಕ್ಕೆ ಎಂದು ಹಣವನ್ನು ಕೂಡಿ ಇಡಲು (Money Saving) ಆಗದೆ ಇದ್ದರೆ ನೀವು ನಿಮ್ಮ ಸಮಸ್ಯೆಯೇ ಮೂಲದ ಬಗ್ಗೆ ಯೋಚಿಸಲೇ ಬೇಕು .
ಸಂಬಳದ ಹಣವೂ ಅರಿಯದೆ ಖಾಲಿ ಆಗಲೂ ಇರುವ ಕೆಲವು ಕಾರಣಗಳು :- (Money Management)
1. ತಂದೆ ತಾಯಿಯೂ ಕಲಿಸುವ ಸಂಸ್ಕಾರ ಒಂದು ಕಡೆ ಆದರೆ ಅವರು ಹೇಳಿಕೊಡುವ ಹಣದ ಮೌಲ್ಯ ವೂ ಸಹ ಒಂದು ಪಾಠ , ಮನೆಯಲ್ಲಿ ಮಕ್ಕಳಿಗೆ ಹಣದ ಮೌಲ್ಯದ ದ (Value of Money) ಬಗ್ಗೆ ಹಣ ಪೋಲು ಆಗದಂತೆ ಬಳಸುವ ವಿಧಾನಗಳ ಬಗ್ಗೆ ಚಿಕ್ಕಂದಿನಿಂದ ತಿಳುವಳಿಕೆ ನೀಡದೆ ಇದ್ದಲ್ಲಿ ಅವರ ಹಣ ನೀರಿನಂತೆ ಖಾಲಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
2. ತಮಗೆ ಬರುವ ಸಂಬಳದಲ್ಲಿ ಏಷ್ಟು ಹಣವನ್ನು ಯಾವುದಕ್ಕೆ ವಿನಿಯೋಗಿಸಬೇಕು ಎಂಬುದನ್ನು ಅರಿಯದೆ ಎಲ್ಲೆಂದರಲ್ಲಿ ದುಡ್ಡು ಖರ್ಚು ಮಾಡಿದರೆ ಹಣ ಕೂಡಿಡುವುದು ಕಷ್ಟ
3. ಹಣ ಹೂಡಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಇರುವ ಅರಿವಿನ ಕೊರತೆಯಿಂದ ಸಹ ದುಡಿದ ಹಣವೆಲ್ಲ ಖಾಲಿ ಆಗುತ್ತದೆ.
4. ನಾಳೆಯ ಬಗ್ಗೆ ಯಾವುದೇ ಚಿಂತೆ ಇಲ್ಲದೆಯೇ ನಾಳೆ. ಏನಾದರೂ ಪರ್ವಾಗಿಲ್ಲ . ಇವತ್ತಿನ ಬದುಕನ್ನು ಚೆನ್ನಾಗಿ ಬದುಕಬೇಕು ಎಂಬ ಮನೋಭಾವ ಇದ್ದರೆ ನಾಳಿನ ಬದುಕಿಗೆ ಕಷ್ಟ ಬಂದಾಗ ನಿಮ್ಮ ಬಳಿ ಯಾವುದೇ ಹಣ ಇರುವುದಿಲ್ಲ.
5. ಸ್ನೇಹಿತರು ಅಥವಾ ನೆಂಟರು ಬದುಕುವ ಸಿರಿವಂತಿಕೆಯ ಬದುಕನ್ನು ನಮ್ಮ ಜೀವನಕ್ಕೆ ಹೋಲಿಸಿಕೊಂಡು ಅದರಂತೆ ಬದುಕುವ ಆಸೆಯಿಂದ ಶೋಕಿ ಜೀವನ ನಡೆಸಿದರೆ ನಿಮ್ಮ ಬಳಿ ಇರುವ ಹಣಕ್ಕಿಂತ ಸಾಲವೆ ಜಾಸ್ತಿ ಆಗಿ ಹಣವೂ ತಿಂಗಳ ಕೊನೆಯಲ್ಲಿ ಇರುವುದಿಲ್ಲ.
6. ಜೀವನ ನಡೆಸಲು ಅಗತ್ಯ ಇರುವುದು ಯಾವುದು ಎಂಬ ಅರಿವು ಇಲ್ಲದೆ ಕಂಡಿದ್ದು ಇಷ್ಟ ಆಗಿದ್ದು ಎಲ್ಲದಕ್ಕೂ ಹಣವನ್ನು ಖರ್ಚು ಮಾಡಿದರೆ ದುಡಿದ ಹಣ ಸುಮ್ಮನೆ ವ್ಯಯ ಆಗುತ್ತದೆ.
7. ಆದಾಯ ಅರಿಯದೆ ಮೀತಿ ಮೀರಿ ಸಾಲ ಮಾಡಿದರೆ ಅದರ ಬಡ್ಡಿ ಅಸಲು ಕಟ್ಟಲು ಹೋಗಿ ಇರುವ ಹಣವೆಲ್ಲ ಖಾಲಿ ಆಗುವುದು.
Money management tips in Kannada
ಓದಲು ಹೆಚ್ಚಿನ ಸುದ್ದಿಗಳು:
Business Ideas: ಬೇರೆ ಏನು ಬೇಡಾ ಕೇವಲ ಈ ಮರಗಳ ಹೊಸ ಬ್ಯುಸಿನೆಸ್ ಆರಂಭ ಮಾಡಿದರೆ ಸಾಕು ನೀವು ಕೋಟ್ಯಧಿಪತಿ ಆಗಬಹುದು.