Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Money Saving: 5 ವರ್ಷಗಳ ಕಾಲ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿ, ಲಕ್ಷಗಳ ಆದಾಯದ ಜೊತೆಗೆ ಪಡೆಯಿರಿ ತೆರಿಗೆ ವಿನಾಯತಿ!

Invest under this scheme for 5 years, get income of lakhs plus tax exemption!

Get real time updates directly on you device, subscribe now.

Money Saving: ಎಲ್ಲರೂ ಸಹ ತಮ್ಮ ಹಣವನ್ನು ಕೆಲವು ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ಆದಾಯ ಪಡೆಯಲು ಯೋಚಿಸುತ್ತಾರೆ. ಯಾವುದೇ ಹೂಡಿಕೆಯಾದರು ಸಹ ನಾವು ಈ ಎರಡು ವಿಷಯಗಳನ್ನು ಗಮನಿಸಬೇಕು. ಹೂಡಿಕೆ ಮಾಡುವ ಮೊತ್ತ ಹಾಗೂ ನಿಮ್ಮ ಹೂಡಿಕೆಯ ಅವಧಿಯ ಮೇಲೆ ನಿಮ್ಮ ಆದಾಯ ನಿರ್ಧಾರವಾಗಿರುತ್ತದೆ. ನೀವು ಹೆಚ್ಚು ಮೊತ್ತವನ್ನು ದೀರ್ಘಕಾಲದವರೆಗೆ ಹೂಡಿಕೆ ಮಾಡಿದರೆ ನೀವು ಹೆಚ್ಚಿನ ಲಾಭ ಪಡೆಯಬಹುದು. ಇನ್ನು ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹೂಡಿಕೆದಾರರ ಸಹಾಯಕ್ಕೆ ನಿಂತಿದೆ.

ಬೇರೆ ಹೂಡಿಕೆ ಸಂಸ್ಥೆಗಳಿಗೆ ಹೋಲಿಸಿದರೆ, ಪೋಸ್ಟ್ ಆಫೀಸ್ ನ ಕೆಲವು ಯೋಜನೆಗಳಲ್ಲಿ ಹೆಚ್ಚಿನ ಆದಾಯ ಪಡೆಯುವ ಜೊತೆಗೆ ನೀವು ಹೂಡಿಕೆ ಮಾಡಿದ ಮೊತ್ತ ಸುರಕ್ಷಿತವಾಗಿರುತ್ತದೆ. ಇನ್ನು ಇಂದು ಪೋಸ್ಟ್ ಆಫೀಸ್ ನ ಕೆಲವು ಹೂಡಿಕೆ ಯೋಜನೆಗಳ ಬಡ್ಡಿ ದರ ಹಾಗೂ ಅವುಗಳ ಅವಧಿ ಈ ಎಲ್ಲಾ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ…

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ;(Post Office Recurring Deposit Scheme) ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದ ಉತ್ತಮ ರಿಟರ್ನ್ಸ್ ಪಡೆಯಬಹುದು. ನೀವು ಈ ಯೋಜನೆಯಲ್ಲಿ ಕನಿಷ್ಟ 5 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಇನ್ನು ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಶೇಕಡಾ 5.8% ಬಡ್ಡಿ ದರವನ್ನು ನೀಡಲಾಗುತ್ತದೆ. ಇನ್ನು ನೀವು ತಿಂಗಳಿಗೆ ಸುಮಾರು 100 ರೂಪಾಯಿಗಳಿಗೆ ಹೂಡಿಕೆ ಪ್ರಾರಂಭಿಸಬಹುದು.

ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆ; (Post Office Time Deposit Scheme), ಇನ್ನು ಈ ಯೋಜನೆಯ ಅಡಿಯಲ್ಲಿ ಹೂಡಿಕೆದಾರರು 1 ಅಥವಾ 2 ಅಥವಾ 3 ವರ್ಷಗಳಿಗೆ ಹೂಡಿಕೆ ಮಾಡಿದರೆ, ಸುಮಾರು 5.5% ಬಡ್ಡಿ ದರವನ್ನು ಪಡೆಯುತ್ತಾರೆ. ಇನ್ನು ಐದು ವರ್ಷಗಳವರೆಗೂ ಹೂಡಿಕೆ ಮಾಡುವ ಮೂಲಕ ಸುಮಾರು 6.7% ಬಡ್ಡಿ ದರವನ್ನು ಪಡೆಯುತ್ತಾರೆ. ಇನ್ನು ಈ ಯೋಜನೆಯ ಅಡಿಯಲ್ಲಿ 1000 ರೂಗಳನ್ನು ಪಾವತಿಸುವ ಮೂಲಕ ಹೂಡಿಕೆ ಆರಂಭಿಸಬಹುದು. ಅಲ್ಲದೆ 80C ಕಾಯ್ದೆಯ ಅನುಸಾರ ತೆರಿಗೆ ವಿನಾಯಿತಿ ಲಾಭವನ್ನು ಸಹ ಪಡೆಯಲಿದ್ದೀರಿ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ;(National Savings Certificate Scheme), ಈ ಯೋಜನೆಯ ಅಡಿಯಲ್ಲಿ ನೀವು ದೊಡ್ಡ ಮೊತ್ತದ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭ ಪಡೆಯಬಹುದು. ಇನ್ನು ಈ ಯೋಜನೆಯ ಬಡ್ಡಿ ದರವನ್ನು 7 ರಿಂದ 7.7%ಕ್ಕೆ ಹೆಚ್ಚಿಸಲಾಗಿದೆ. ಇನ್ನು ಯಾರಾದರೂ 5 ಲಕ್ಷ ಹಣವನ್ನು ಐದು ವರ್ಷಗಳಿಗೆ ಹೂಡಿಕೆ ಮಾಡಿದರೆ, ಸ್ಕೀಮ್ ನ ಕೊನೆಯಲ್ಲಿ 7,24517 ರೂಗಳನ್ನು ಪಡೆಯುತ್ತೀರಿ.

Invest under this scheme for 5 years, get income of lakhs plus tax exemption!
Invest under this scheme for 5 years, get income of lakhs plus tax exemption! Image Credit to Original Source.

Get real time updates directly on you device, subscribe now.

Leave a comment