Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PMUY New Update: ಸಿಲೆಂಡರ್ ಗ್ಯಾಸ್ ಬಳಸುವವರಿಗೆ ಗುಡ್ ನ್ಯೂಸ್! ಉಜ್ವಲ ಯೋಜನೆಯ ಸಬ್ಸಿಡಿ ದರವನ್ನು ಹೆಚ್ಚಿಸಿದ ಸರ್ಕಾರ.

ಭಾರತದಲ್ಲಿ ಪ್ರತಿ ಸಿಲೆಂಡರ್ ಬೆಲೆ 900 ರೂಪಾಯಿ ಇಂದ 950 ರೂಪಾಯಿಯ ವರೆಗೆ ಇದೆ. ಕೆಲವು  ರಾಜ್ಯಗಳಲ್ಲಿ ಅಲ್ಲಿನ ಟ್ರಾನ್ಸ್ಪೋರ್ಟ್ ಚಾರ್ಜ್ (Transport Charges) ಟ್ಯಾಕ್ಸ್ ( tax) ಎಲ್ಲವೂ ಸೇರಿ ಸ್ವಲ್ಪ ಹೆಚ್ಚು ಕಡಿಮೆ ಇದೇ.

PMUY New Update: ಪ್ರತಿ ಮನೆಯಲ್ಲಿ ಅಡುಗೆ ಮಾಡಲು ಸಿಲೆಂಡರ್ ಗ್ಯಾಸ್ ಬಳಸುತ್ತಾರೆ. ಕಟ್ಟಿಗೆ ಒಲೆ ನಂತರ ಹಳ್ಳಿಗಳಲ್ಲಿ ಗೋಬರ್ ಗ್ಯಾಸ್ ಬಳಸಲಾಗುತ್ತಿತ್ತು ಈಗ ಪ್ರತಿ ಹಳ್ಳಿಯಲ್ಲಿ ಸಿಟಿಯಲ್ಲಿ ಸಿಲೆಂಡರ್ ಗ್ಯಾಸ್ ಬಳಸುತ್ತಾರೆ. ಸಾವಿರ ರೂಪಾಯಿಗೂ ಹೆಚ್ಚಿನ ದರ ಸಿಲೆಂಡರ್ ಗೆ ಇದ್ದಿತ್ತು. ಈಗ ಸ್ವಲ್ಪ ಕಡಿಮೆ ಆಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ದರದಲ್ಲಿ (Subsidy Rate) ಸಿಲೆಂಡರ್ ಗ್ಯಾಸ್ ನೀಡುತ್ತಿದೆ ಕೇಂದ್ರ ಸರಕಾರ. ಈಗ ಸಬ್ಸಿಡಿ ಪಡೆಯುವ ಫಲಾನುಭವಿಗಳಿಗೆ ಇನ್ನಷ್ಟು ಅನುಕೂಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಬ್ಸಿಡಿ ಪಡೆಯುವವರಿಗೆ ಸರ್ಕಾರದಿಂದ ಹೊಸದೊಂದು ಅಪ್ಡೇಟ್ :-

ಭಾರತದಲ್ಲಿ ಪ್ರತಿ ಸಿಲೆಂಡರ್ ಬೆಲೆ 900 ರೂಪಾಯಿ ಇಂದ 950 ರೂಪಾಯಿಯ ವರೆಗೆ ಇದೆ. ಕೆಲವು  ರಾಜ್ಯಗಳಲ್ಲಿ ಅಲ್ಲಿನ ಟ್ರಾನ್ಸ್ಪೋರ್ಟ್ ಚಾರ್ಜ್ (Transport Charges) ಟ್ಯಾಕ್ಸ್ ( tax) ಎಲ್ಲವೂ ಸೇರಿ ಸ್ವಲ್ಪ ಹೆಚ್ಚು ಕಡಿಮೆ ಇದೇ. ಕೇಂದ್ರ ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯ ಅಡಿಯಲ್ಲಿ 300 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಪೂರ್ಣ ಹಣವನ್ನು ಮೊದಲು ನೀಡಬೇಕು. ನಂತರ ನಿಮ್ಮ ಸಬ್ಸಿಡಿ ಹಣವೂ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಅಂದರೆ ಸರಾಸರಿ 600 ರೂಪಾಯಿ ಪಾವತಿಸಿ ಸಿಲೆಂಡರ್ ಪಡೆಯಬಹುದು. ಕಳೆದ ಆಗಸ್ಟ್ ತಿಂಗಳಲ್ಲಿ ಸಿಲೆಂಡರ್ ದರ ಕಡಿಮೆ ಮಾಡಿ ಅದರ ಜೊತೆಗೆ ಸಬ್ಸಿಡಿ ಹಣವನ್ನು 400 ರೂಪಾಯಿ ನೀಡುವುದಾಗಿ ಸರಕಾರ ಘೋಷಣೆ ಮಾಡಿತ್ತು. ಅದರಂತೆಯೇ ಈಗ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂಪಾಯಿ ಸರಕಾರವು ನೀಡುತ್ತಿದೆ.

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳು ಇವೆ.

  1.  ಮಹಿಳೆ ಮಾತ್ರ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  2. ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷ ತುಂಬಿರಬೇಕು.
  3. ಬಿಪಿಎಲ್ ಕಾರ್ಡ್ (BPL card) ಹೊಂದಿರಬೇಕು.
  4. ರೇಷನ್ ಕಾರ್ಡ್ ( ಪಡಿತರ ಚೀಟಿ ) ಹೊಂದಿರಬೇಕು
  5. ಅರ್ಜಿದಾರರ ಕುಟುಂಬದ ಉಳಿದ ಸದಸ್ಯರು LPG connection ( ಎಲ್ ಪಿ ಜಿ ಕನೆಕ್ಷನ್) ಹೊಂದಿರಬಾರದು.

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸಲು ನೀವು ಹತ್ತಿರದ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಬಹುದು. ಇಲ್ಲವೇ ನೀವು ಆನ್ಲೈನ್ ನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ನಮೂನೆಯನ್ನು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಗೆ ಅಗತ್ಯ ದಾಖಲೆಗಳನ್ನು ನೀಡಿ.

ನೀಡುವ ಅಗತ್ಯ ದಾಖಲೆಗಳು :-

  1.  ಪುರಸಭೆ ಅಥವಾ ಪಂಚಾಯತ್
    ನೀಡಿದ ಬಿಪಿಎಲ್ ಕಾರ್ಡ್
  2.  ಜಾತಿ ಪ್ರಮಾಣ ಪತ್ರ
  3. ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ
  4. ಫೋಟೋ ಇರುವ ಗುರುತಿನ ಚೀಟಿ ( ಆಧಾರ್ , ಪಾನ್)
  5. ಕುಟುಂಬದ ಎಲ್ಲ ಸದಸ್ಯರ ವಿವರಗಳು ಮತ್ತು ಆಧಾರ್ ಸಂಖ್ಯೆಗಳು
  6. ಬ್ಯಾಂಕ್ ಪಾಸ್ ಬುಕ್ ( Bank Pass Book) ಅಥವಾ ಜನ್ ಧನ್ ಬ್ಯಾಂಕ್ ಖಾತೆಯ ( Jan Dhan Bank Account)

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

Pradhan Mantri Ujjwala Yojana 2.0: Apply online

 

Leave a comment