Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Suryoday Yojana 2024: ಸೂರ್ಯೋದಯ ಯೋಜನೆಯಲ್ಲಿ ಪ್ರತಿಮನೆಗೆ 300 ಯೂನಿಟ್ ಉಚಿತ ವಿದ್ಯುತ್! ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಯೋಜನೆ

ಈ ಯೋಜನೆಯ ಮೂಲಕ ಮನೆಯ ಮೇಲ್ಚಾವಣಿಯ ಮೇಲೆ ಸೌರಘಟಕ ಸ್ಥಾಪಿಸಿದರೆ, ಆ ಮೂಲಕ ಸೂರ್ಯನ ಶಕ್ತಿಯಿಂದ ವಿದ್ಯುತ್ ಬಳಸಬಹುದು.

PM Suryoday Yojana 2024: ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಇದೀಗ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವಂಥ ಸೂರ್ಯೋದಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತದೆ ಎಂದು ಮಾಹಿತಿ ಸಿಕ್ಕಿದೆ. 300 ಯೂನಿಟ್ ಉಚಿತ ವಿದ್ಯುತ್ ಎಂದರೆ ಸಾಮಾನ್ಯ ವಿಷಯವಂತು ಅಲ್ಲ. ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ..

ಸೂರ್ಯೋದಯ ಯೋಜನೆ:

2024ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ಜನರಿಗೆ ಅನುಕೂಲ ಆಗುವ ಹಾಗೆ ಸೂರ್ಯೋದಯ ಯೋಜನೆ ಜಾರಿಗೆ ಬರುತ್ತದೆ ಎಂದು ತಿಳಿಸಿದರು. ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿವಸ ಪಿಎಮ್ ಮೋದಿ ಅವರು 1 ಕೋಟಿ ಮನೆಗಳಿಗೆ ಮೇಲ್ಚಾವಣಿಯ ಮೇಲೆ ಸೌರಘಟಕ ಸ್ಥಾಪಿಸಿಕೊಡಲಾಗುವ ಸೂರ್ಯೋದಯ ಯೋಜನೆ ಜಾರಿಗೆ ತರುವ ಭರವಸೆ ನೀಡಿದ್ದರು.

ಪಿಎಮ್ ಸೂರ್ಯೋದಯ ಯೋಜನೆ:

ಈ ಯೋಜನೆಯ ಮೂಲಕ ಮನೆಯ ಮೇಲ್ಚಾವಣಿಯ ಮೇಲೆ ಸೌರಘಟಕ ಸ್ಥಾಪಿಸಿದರೆ, ಆ ಮೂಲಕ ಸೂರ್ಯನ ಶಕ್ತಿಯಿಂದ ವಿದ್ಯುತ್ ಬಳಸಬಹುದು. ಈ ನಿಟ್ಟಿನಲ್ಲಿ ಭಾರತ ದೇಶ ಮುಂದಿನ ಹಂತಕ್ಕೆ ತಲುಪುತ್ತದೆ. ಸೂರ್ಯವಂಶದ ರಾಮನ ಬೆಳಕು ಪಡೆದು, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪಿಎಮ್ ಮೋದಿ ಅವರು ಈ ಯೋಜನೆಯ ಬಗ್ಗೆ ತಿಳಿಸಿದ್ದರು. ಸೋಲಾರ್ ಎನರ್ಜಿ ಇಂದಿನ ಮತ್ತು ಮುಂದಿನ ಭವಿಷ್ಯಕ್ಕೆ ಸಹಾಯ ಆಗಲಿದೆ, ಇದು ಪರಿಸರ ಸ್ನೇಹಿ ಎನ್ನುವುದರ ಜೊತೆಗೆ ಉಳಿತಾಯಕ್ಕೂ ಒಳ್ಳೆಯದು. ಮನೆಯ ಮೇಲ್ಚಾವಣಿಯಲ್ಲಿ ಸೌರ ಫಲಕ ಅಳವಡಿಸಿ ಬಹಳಷ್ಟು ಪ್ರಯೋಜನ ಪಡೆಯಬಹುದು.

ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದನೆ ಆಗುವ ಕಾರಣ, ವಿದ್ಯುತ್ ಇಲಾಖೆಯ ಮೇಲೆ ಅವಲಂಬನೆ ಕಡಿಮೆ ಆಗುತ್ತದೆ, ಜೊತೆಗೆ ನಿಮ್ಮ ಹಣ ಉಳಿತಾಯ ಆಗುತ್ತದೆ. ಇಲ್ಲಿ ಉತ್ಪತ್ತಿ ಆಗುವ ಹೆಚ್ಚು ವಿದ್ಯುತ್ ಅನ್ನು ವಿದ್ಯುತ್ ಕಂಪನಿಗಳಿಗೆ ಮಾರಾಟ ಮಾಡಿ ಹಣ ಗಳಿಸುವ ಆಯ್ಕೆ ಇರುತ್ತದೆ. ಎಲೆಕ್ಟ್ರಿಕ್ ವಾಹಣಗಳಿಗೆ ಚಾರ್ಜ್ ಮಾಡಿಕೊಳ್ಳಲು ವಿದ್ಯುತ್ ಪೂರೈಕೆ ಮಾಡಿಕೊಟ್ಟು, ಹಣ ಗಳಿಸಬಹುದು. ಇದರಿಂದ ಉದ್ಯೋಗವು ಸೃಷ್ಟಿಯಾಗುತ್ತದೆ. ಸೌರ ಫಲಕಗಳ ತಯಾರಿಕೆ, ಬಳಕೆ, ಸ್ಥಾಪನೆ ಇದೆಲ್ಲವೂ ಗೊತ್ತಿರುವವರಿಗೆ ಕೆಲಸ ಸಿಗಲಿದೆ.

ಸೋಲಾರ್ ಪ್ಯಾನೆಲ್ ಅಳವಡಿಕೆ ಇಂದ ಮನೆಯಲ್ಲೇ ಶಕ್ತಿ ಉತ್ಪಾದನೆ ಆಗುತ್ತದೆ ಇದರಿಂದ ವಿದ್ಯುತ್ ಬಿಲ್ ಪಾವತಿ ಮಾಡುವ ತಲೆನೋವು ಕಡಿಮೆ ಆಗುತ್ತದೆ. ಸೌರಫಲಕ ಅಳವಡಿಸಲು 2.20 ಇಂದ 3.5 ಲಕ್ಷದವರೆಗು ಖರ್ಚಾಗುತ್ತದೆ. ಇದಕ್ಕಾಗಿ ನೀವು ₹900ಪ್ ಇಂದ ₹12,000 ವರೆಗು ಠೇವಣಿ ಇಡಬೇಕು. ಉಳಿದ ಹಣವನ್ನು ಇಎಂಐ ಮೂಲಕ ಪಾವತಿ ಮಾಡುವ ಆಯ್ಕೆಇದೆ. 3KW ಇಂದ 5KW ವರೆಗು ವಿದ್ಯುತ್ ಅಳವಡಿಕೆ ಮಾಡಲಾಗುತ್ತದೆ. ಸೌರಫಲಕ ಅಳವಡಿಸಿದರೆ ಅವು ಸೂರ್ಯನ ಬೆಳಕನ್ನು ಎಲೆಕ್ಟ್ರಿಸಿಟಿ ಆಗಿ ಪರಿವರ್ತಿಸುತ್ತದೆ.

Rooftop Solar Program Stage2 ಅಡಿಯಲ್ಲಿ 10kW ವರೆಗು Rooftop Solar System ಅಳವಡಿಸುವ ಅವಕಾಶವಿದೆ. 8 ವರ್ಷಗಳಿಂದ ಸೋಲಾರ್ ಎನರ್ಜಿ ವಿಚಾರದಲ್ಲಿ ಭಾರತ ಏಳಿಗೆ ಕಂಡಿದೆ. 2.7Gw ಪ್ರಗತಿ ನಮ್ಮ ದೇಶಕ್ಕೆ ಲಭಿಸಿದ್ದು, 2025ರ ವೇಳೆ 40GW ಗುರಿ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಪಿಎಮ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತರಲಾಗಿದೆ.

Free Electricity PM Suryoday Yojana 2024

Leave a comment