Bellulli Price : ಒನ್ ಮೋರ್ ಒನ್ ಮೋರ್ ಅನ್ನುತ್ತಿದ್ದಂತೆ ಏರಿಕೆಯಾಯ್ತು ಬೆಳ್ಳುಳ್ಳಿ ಬೆಲೆ! ಬೆಳ್ಳುಳ್ಳಿ ಬೆಳೆಯಿಂದ 1 ಕೋಟಿ ಗಳಿಸಿದ ರೈತ!
Garlic Crop: ಮಧ್ಯಪ್ರದೇಶದ ಈ ರೈತನ ಹೆಸರು ರಾಹುಲ್ ದೇಶಮುಖ್, ಈತ 25 ಲಕ್ಷ ರೂಪಾಯಿ ಖರ್ಚು ಮಾಡಿ, ಬೆಳ್ಳುಳ್ಳಿ ಬೆಳೆದಿದ್ದಾರೆ. ಈಗ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿದ್ದು, 1 ಕೆಜಿಗೆ 400 ರಿಂದ 500 ರೂಪಾಯಿ ಆಗಿದೆ..25 ಲಕ್ಷ ಹೂಡಿಕೆ ಮಾಡಿ ಬೆಳೆದ ಬೆಳ್ಳುಳ್ಳಿಯನ್ನು ಮಾರಿದಾಗ ಇವರು ಸಂಪಾದನೆ ಮಾಡಿರುವುದು ಬರೋಬ್ಬರಿ 1ಕೋಟಿ..
Bellulli Price : ಕೋಟಿಗಟ್ಟಲೇ ಹಣ ಸಂಪಾದನೆ ಮಾಡುವುದಕ್ಕೆ ಯಾವುದೋ ದೊಡ್ಡ ಕಂಪೆನಿಯಲ್ಲೇ ಕೆಲಸ ಸಿಗಬೇಕು, ಹೊರದೇಶಕ್ಕೆ ಹೋಗಬೇಕು ಎಂದೇನು ಇಲ್ಲ. ನಾವಿರುವ ಜಾಗದಲ್ಲಿ ಬುದ್ಧಿ ಉಪಯೋಗಿಸಿ ಕೆಲಸ ಮಾಡಿದರೆ ಸಂಪಾದನೆ ಮಾಡಬಹುದು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಇಂದು ತಿಳಿಸುತ್ತೇವೆ. ಮಧ್ಯಪ್ರದೇಶದ ಈ ರೈತಬ್ ಬೆಳ್ಳುಳ್ಳಿ ಬೆಳೆದು 1 ಕೋಟಿ ಸಂಪಾದನೆ ಮಾಡಿದ್ದಾರೆ..
Garlic Crop:
ಮಧ್ಯಪ್ರದೇಶದ ಈ ರೈತನ ಹೆಸರು ರಾಹುಲ್ ದೇಶಮುಖ್, ಈತ 25 ಲಕ್ಷ ರೂಪಾಯಿ ಖರ್ಚು ಮಾಡಿ, ಬೆಳ್ಳುಳ್ಳಿ ಬೆಳೆದಿದ್ದಾರೆ. ಈಗ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿದ್ದು, 1 ಕೆಜಿಗೆ 400 ರಿಂದ 500 ರೂಪಾಯಿ ಆಗಿದೆ..25 ಲಕ್ಷ ಹೂಡಿಕೆ ಮಾಡಿ ಬೆಳೆದ ಬೆಳ್ಳುಳ್ಳಿಯನ್ನು ಮಾರಿದಾಗ ಇವರು ಸಂಪಾದನೆ ಮಾಡಿರುವುದು ಬರೋಬ್ಬರಿ 1ಕೋಟಿ..ಬೆಲೆ ಏರಿಕೆ ಇಂದ ಈ ಲಾಭ ಬಂದಿದ್ದು, ಪ್ರಸ್ತುತ ಬೆಳ್ಳುಳ್ಳಿಗೆ ಇರುವ ಡಿಮ್ಯಾಂಡ್ ಇಂದ, ಇವರು ತಮ್ಮ ಜಮೀನಿಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದಾರಂತೆ.
Bellulli Price
ಈಗ ಭಾರತದ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ 400 ರಿಂದ 500 ರೂಪಾಯಿಗಳು. ಇದುವರೆಗೂ ಈ ಮಟ್ಟದವರೆಗು ಬೆಳ್ಳುಳ್ಳಿ ಬೆಲೆ ಏರಿಕೆ ಆಗಿದ್ದೆ ಇಲ್ಲ. ಬೆಲೆ ಜಾಸ್ತಿಯಾಗಿರುವುದು ಬೆಳ್ಳುಳ್ಳಿ ಬೆಳೆದಿರುವ ರೈತರಿಗೆ ಒಂದು ಕಡೆ ಲಾಭ, ಮತ್ತೊಂದು ಕಡೆ ಅಷ್ಟೇ ನಷ್ಟ. ಏಕೆಂದರೆ ಬೆಳೆದ ಬೆಳೆ ಹಾಳಾಗದ ಹಾಗೆ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.
ಜಮೀನುಗಳಲ್ಲಿ ಸಿಸಿಟಿವಿ;
ಈಗ ಬೆಳ್ಳುಳ್ಳಿ ಬೆಳೆದಿರುವ ರೈತರ ಪರಿಸ್ಥಿತಿ ತಮ್ಮ ಜಮೀನಿಗೆ ಸಿಸಿಟಿವಿ ಹಾಕಿಸಿಕೊಳ್ಳುವ ಮಟ್ಟಕ್ಕೆ ತಲುಪಿದೆ. ಯಾರಾದರೂ ಬಂದು ಬೆಳೆ ನಾಶ ಮಾಡಿದರೆ ಅಥವಾ ಬೆಳ್ಳುಳ್ಳಿಯನ್ನು ಕಳ್ಳತನ ಮಾಡಿಕೊಂಡು ಹೋದರೆ ಎನ್ನುವ ಭಯದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿಕೊಳ್ಳುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಕಿಸಿದರೆ ಎಷ್ಟು ಒಳ್ಳೆಯದು ಎಂದು ರಾಹುಲ್ ಅವರೇ ಎಲ್ಲಾ ರೈತರಿಗೆ ತಿಳಿಸಿ ಹೇಳಿದ್ದಾರೆ..
Also Read: Gmail Accounts : G-Mail ಬಂದ್ ಆಗಲಿದೆಯಾ? ಎಕ್ಸ್ ಮೇಲ್ ನ ಸ್ಪಷ್ಟನೆ ಏನು??
ಇತ್ತೀಚೆಗೆ ಇವರ ಜಮೀನಿಗೆ ಕಳ್ಳನೊಬ್ಬ ನುಗ್ಗಿ, ಬೆಳ್ಳುಳ್ಳಿ ಕದ್ದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ. ಆತ 8 ರಿಂದ 10 ಕೆಜಿ ಬೆಳ್ಳುಳ್ಳಿ ಕಳ್ಳತನ ಮಾಡಿ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ ಎನ್ನಲಾಗಿದ್ದು, ಈ ಘಟನೆ ನಂತರ ರಾಹುಲ್ ಸಹ ತಮ್ಮ ಜಮೀನಿಗೆ ಸಿಸಿಟಿವಿ ಹಾಕಿಸಿಕೊಂಡಿದ್ದಾರೆ.. ಈ ಮೂಲಕ ತಮ್ಮ ಹೊಲಕ್ಕೆ ರಕ್ಷಣೆ ಕೊಡುತ್ತಿರುವುದಾಗಿ ರಾಹುಲ್ ತಿಳಿಸಿದ್ದಾರೆ.
ಈ ವ್ಯಕ್ತಿ ರಾಹುಲ್ ಒಟ್ಟು 13 ಎಕರೆಗಳಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ಅದಕ್ಕಾಗಿ 25 ಲಕ್ಷ ಖರ್ಚು ಮಾಡಿದ್ದಾರೆ, ಬಳಿಕ ಬೆಳ್ಳುಳ್ಳಿ ಇಂದ ಬಂದಿರುವ ಲಾಭ 1 ಕೋಟಿ ರೂಪಾಯಿ ಆಗಿದೆ. ಚಿನ್ನದಂತಿರುವ ಈ ಬೆಳೆಗಳನ್ನು ರಕ್ಷಿಸಿಕೊಳ್ಳಲು, ತಮ್ಮ ಜಮೀನಿಗೆ ಸಿಸಿಟಿವಿ ಹಾಕಿಸಿಕೊಂಡಿದ್ದಾರೆ. 4 ಎಕರೆ ಜಾಗ ನೋಡಿಕೊಳ್ಳಲು, 3 ಸಿಸಿಟಿವಿ ಕ್ಯಾಮೆರಾ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ರೈತ ಕೂಡ ಇದೇ ಊರಿನಲ್ಲಿ 4 ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದು, 6 ಲಕ್ಷ ಲಾಭ ಗಳಿಸಿದ್ದಾರೆ. ಸಾಮಾನ್ಯವಾಗಿ ಒಂದು ಕೆಜಿ ಬೆಳ್ಳುಳ್ಳಿ ಬೆಲೆ 80 ರೂಪಾಯಿ ತಲುಪುವುದು ಹೆಚ್ಚು, ಆದರೆ ಈ ಬಾರಿ 400 ಕ್ಕಿಂತ ಜಾಸ್ತಿ ಬೆಲೆ ಆಗಿದ್ದು, ಬೆಳೆಯುವವರಿಗೆ ಇದು ಸೂಕ್ತ , ಬೆಳೆದಿರುವವರಿಗೆ ಇದು ಸಿಹಿ ಸುದ್ದಿಯೇ ಆದರೂ, ಖರೀದಿ ಮಾಡುವವರಿಗೆ ಬೇಸರದ ಸುದ್ದಿ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.