Okinawa Dual 100 : ಓಲಾ ಅಥೆರ್ ಗೆ ಸೆಡ್ಡು ಹೊಡೆಯಲು ಬರ್ತಿದೆ 150km ಮೈಲೇಜ್ ಕೊಡೋ Okinawa EV! ಅದ್ಭುತವಾದ ಫೀಚರ್ಸ್ ಜೊತೆಗೆ!
Okinawa Dual 100 : ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಜಾಸ್ತಿ ಇದೆ. ಪೆಟ್ರೋಲ್ ಬೆಲೆ ಕೇಳಿದರೆ ತಲೆ ತಿರುಗುವ ಹಾಗಿರುವ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಂದ ಪೆಟ್ರೋಲ್ ಖರ್ಚು ಉಳಿಯುತ್ತದೆ,
Okinawa Dual 100 : ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಜಾಸ್ತಿ ಇದೆ. ಪೆಟ್ರೋಲ್ ಬೆಲೆ ಕೇಳಿದರೆ ತಲೆ ತಿರುಗುವ ಹಾಗಿರುವ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಂದ ಪೆಟ್ರೋಲ್ ಖರ್ಚು ಉಳಿಯುತ್ತದೆ, ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಕಾರ್ಯಕ್ಷಮತೆ ಕೂಡ ಅಷ್ಟೇ ಚೆನ್ನಾಗಿದೆ. ಈ ಕಾರಣಗಳಿಗೆ ಭಾರತದ ಆಟೋಮೊಬೈಲ್ಸ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನರನ್ನು ಈ ವಾಹನಗಳು ಆಕರ್ಷಿಸುತ್ತಿವೆ. ಈಗಾಗಲೇ ಭಾರತ ಹಲವು ಆಟೋಮೊಬೈಲ್ಸ್ ಕಂಪನಿಗಳು ಎಲೆಕ್ಟ್ರಿಕ್ ಕಾರ್ ಮತ್ತು ಎಲೆಕ್ಟ್ರಿಕ್ ಬೈಕ್ ಗಳನ್ನು ತಯಾರಿಸುತ್ತಿವೆ.
Electric Vehicles are the New Trend:
ಅವುಗಳು ಹೆಚ್ಚು ಸೇಲ್ಸ್ ಸಹ ಆಗುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಗಳು ಸಹ ಇದಕ್ಕೆ ಹೊರತಾಗಿಲ್ಲ. ಪ್ರಮುಖ ಕಂಪೆನಿಗಳಾದ ಓಲಾ, ಅಥೆರ್ ಇವುಗಳು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸುತ್ತಿವೆ. ಇವುಗಳಿತೆ ಕಾಂಪಿಟೇಶನ್ ಕೊಡುವುದಕ್ಕಾಗಿ Okinawa EV ಬೈಕ್ ಶೀಘ್ರದಲ್ಲೇ ಲಾಂಚ್ ಆಗುವುದಕ್ಕೆ ಸಜ್ಜಾಗಿದೆ. Okinawa ಸಹ ಭಾರತದಲ್ಲಿ ಒಳ್ಳೆಯ ಹೆಸರು ಪಡೆದಿರುವ ಆಟೋಮೊಬೈಲ್ಸ್ ಸಂಸ್ಥೆ, ಇದೀಗ ಈ ಸಂಸ್ಥೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಲಿದ್ದು, ಆ ಸ್ಕೂಟರ್ ನ ಫೀಚರ್ಸ್ ಹೇಗಿದೆ ಎಂದು ತಿಳಿಯೋಣ..
Okinawa Dual 100
ಇದು ಒಕಿನಾವಾ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಈಗಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ಕೊಡುವುದಕ್ಕೆ ಭಾರತದ ಆಟೋಮೊಬೈಲ್ಸ್ ಮಾರುಕತ್ತೇವೆ ಎಂಟ್ರಿ ಕೊಡಲಿದೆ Okinawa Dual 100. ಈ ಸ್ಕೂಟರ್ ನ ಕಾರ್ಯಕ್ಷಮತೆ ಚೆನ್ನಾಗಿದ್ದು, ಪ್ರೀಮಿಯಂ ಸ್ಪೆಷಲ್ ಫೀಚರ್ಸ್ ಗಳನ್ನು ಒಳಗೊಂಡಿದೆ, ಈ ಸ್ಕೂಟರ್ ಬೆಲೆ ಕಡಿಮೆ ಇದ್ದು, ಫೀಚರ್ಸ್ ಹಾಗೂ ಮೈಲೇಜ್ ಅತ್ಯುತ್ತಮವಾಗಿದೆ ಎಂದು ತಿಳಿದುಬಂದಿದೆ.
Okinawa Dual 100 Features:
ಈ ಸ್ಕೂಟರ್ ನ ಮೋಟರ್ ನಲ್ಲೇ ವಿಶೇಷತೆ ಇದ್ದು, 2500 W ಮೋಟರ್ ಇಂದ ಡಿಸೈನ್ ಮಾಡಲಾಗಿದೆ. ಈ ಸ್ಕೂಟರ್ 3000 W ಮ್ಯಾಕ್ಸಿಮಮ್ ಪವರ್ ಉತ್ಪಾದನೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಹಾಗೆಯೇ ಇದರಲ್ಲಿ 3.12 kwh Lithium Ion Battery ಹೊಂದಿದೆ. ಸ್ಕೂಟರ್ ಸ್ಪೀಡ್ ಕೂಡ ಅಷ್ಟೇ ಚೆನ್ನಾಗಿದೆ, ಒಂದು ಗಂಟೆಗೆ 60 ಕಿಮೀ ಸ್ಪೀಡ್ ನೀಡುತ್ತದೆ, ಒಮ್ಮೆ ಚಾರ್ಜ್ ಮಾಡಿದರೆ 150km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
Okinawa Dual 100 Price:
ಹೊಸದಾಗಿ ಲಾಂಚ್ ಆಗುತ್ತಿರುವ ಈ ಬೈಕ್ ಅಷ್ಟು ಒಳ್ಳೆಯ ಮೈಲೇಜ್ ಹಾಗೂ ಫೀಚರ್ಸ್ ಹೊಂದಿರುವ ಕಾರಣ ಇದರ ಬೆಲೆ ದುಬಾರಿ ಇರಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಈ ಸ್ಕೂಟರ್ ಕಡಿಮೆ ಬೆಲೆಗೆ ಸಿಗಲಿದೆ, ಈ ಸ್ಕೂಟರ್ ಒಂದೇ ಒಂದು ವೇರಿಯಂಟ್ ನಲ್ಲಿ ಲಭ್ಯವಿದ್ದು ಇದರ Onroad Price ₹1,26,150 ರೂಪಾಯಿ ಆಗಿದೆ. ಆದರೆ ನೀವು ಈ ಬೆಲೆ ಬಗ್ಗೆ ಯೋಚಿಸುವ ಅಗತ್ಯವಿಲ್ಲ, EMI ನಲ್ಲಿ ನಿಮಗೆ ಒಳ್ಳೆಯ ಬೆಲೆಗೆ ಸಿಗುತ್ತದೆ, ₹20,000 ಹಣವನ್ನು ಡೌನ್ ಪೇಮೆಂಟ್ ಮಾಡಿ ಸ್ಕೂಟರ್ ಖರೀದಿ ಮಾಡಬಹುದು. ತಿಂಗಳಿಗೆ ನೀವು ₹3800 EMI ಪಾವತಿ ಮಾಡಬೇಕಾಗುತ್ತದೆ ಅಷ್ಟೇ..
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.