X Calling Feature : ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಎಲನ್ ಮಸ್ಕ್ ರವರ X ಇಂದ ಬಂತು ಹೊಸ ಸೌಲಭ್ಯ ಇನ್ನುಮುಂದೆ ಈ ಫೀಚರ್ ಉಚಿತ.
X Calling Feature : ಹಿಂದೆ ಇದ್ದ ಟ್ವಿಟರ್ ಅನ್ನು ಖರೀದಿ ಮಾಡಿರುವ Elon Musk ಅವರು X ಎಂದು ಟ್ವಿಟರ್ ಹೆಸರನ್ನು ಬದಲಾಯಿಸಿದರು. X App ಮೂಲಕ ಹಲವು ಬದಲಾವಣೆ ಮಾಡಿದ್ದಾರೆ.
X Calling Feature : ಹಿಂದೆ ಇದ್ದ ಟ್ವಿಟರ್ ಅನ್ನು ಖರೀದಿ ಮಾಡಿರುವ Elon Musk ಅವರು X ಎಂದು ಟ್ವಿಟರ್ ಹೆಸರನ್ನು ಬದಲಾಯಿಸಿದರು. X App ಮೂಲಕ ಹಲವು ಬದಲಾವಣೆ ಮಾಡಿದ್ದಾರೆ, ಇದರಿಂದ ಸಿಗುವ ಸರ್ವಿಸ್ ಕೂಡ ಬದಲಾಗುತ್ತಿದೆ. X ಇದೀಗ ಎಲ್ಲರಿಗೂ ಕೂಡ ಉಚಿತ ಆಡಿಯೋ ಹಾಗೂ ವಿಡಿಯೋ ಕಾಲಿಂಗ್ ಸೌಲಭ್ಯ ನೀಡುತ್ತಿದೆ, ಇದಕ್ಕಾಗಿ ಹಣ ಪಾವತಿ ಮಾಡುವ ಅಥವಾ Premium Subscription ತೆಗೆದುಕೊಳ್ಳುವ ಅವಶ್ಯಕತೆ ಕೂಡ ಇಲ್ಲ..
X Calling Feature
ಮೊದಲಿಗೆ ಈ ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಫೀಚರ್ ಇದ್ದಿದ್ದು ಪ್ರೀಮಿಯಂ ಯೂಸರ್ ಗಳಿಗೆ ಮಾತ್ರ, ಆದರೆ ಈಗ ಬದಲಾಗಿದ್ದು ಎಲ್ಲರಿಗೂ ಈ ಸೌಲಭ್ಯ ಒದಗಿಸುವುದಕ್ಕೆ ಮುಂದಾಗಿದೆ ಟ್ವಿಟರ್ ಸಂಸ್ಥೆ. ಈ ಮೂಲಕ ತಮಗೆ ಪೈಪೋಟಿ ಆಗಿರುವ Meta WhatsApp ಗೆ ಠಕ್ಕರ್ ಕೊಡಲಿದೆ. Enrique Barragan ಅವರು X ನ ಇಂಜಿನಿಯರ್ ಆಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ..
ಶೀಘ್ರದಲ್ಲೇ ವಿಡಿಯೋ ಕಾಲ್ ಮತ್ತು ಆಡಿಯೋ ಕಾಲ್ ಫೀಚರ್ ತರಲಿದ್ದು, ಇನ್ನುಮುಂದೆ ನೀವು ಸಹ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇನ್ನು ಕಾಲ್ ಬರುವುದು ಯಾರಿಂದ ಎಂದು ತಿಳಿಯುವುದು ಹೇಗೆ ಎಂದರೆ, ನೀವು ಯಾರನ್ನು ಫಾಲೋ ಮಾಡುತ್ತೀರೋ ಅವರಿಗೆ ಮಾತ್ರ ನೀವು ಕಾಲ್ ಮಾಡಬಹುದು ಅಥವಾ ಅವರಿಂದ ಮಾತ್ರ ಕಾಲ್ ರಿಸಿವ್ ಮಾಡಬಹುದು. ಒಂದು ಸಾರಿ ಆದರೂ ಕೂಡ DM ನಲ್ಲಿ ಮಾತನಾಡಿರಬೇಕು, ಅಂಥವರು ಮಾತ್ರ ಕಾಲ್ ಮಾಡಬಹುದು.
ಆದರೆ ನಿಮಗೆ ಯಾರು ಕಾಲ್ ಮಾಡಬಹುದು, ಯಾರು ಕಾಲ್ ಮಾಡುವುದು ಬೇಡ ಇದೆಲ್ಲವನ್ನು ಕೂಡ ನೀವು ಕಂಟ್ರೋಲ್ ಮಾಡಬಹುದು. ಮೊದಲಿಗೆ ಈ ಫೀಚರ್ ತಂದ X, iOS ಯೂಸರ್ ಗಳು ಅದರಲ್ಲೂ Valid Premium Subscription ಹೊಂದಿರುವವರಿಗೆ ಮಾತ್ರ ತಂದಿತು. ಆದರೆ ಈ ವರ್ಷ ಆಂಡ್ರಾಯ್ಡ್ ಅಪ್ಲಿಕೇಶನ್ ಗು ಕೂಡ ಕಾಲ್ ಫೀಚರ್ ತಂದಿತು, ಆದರೆ ಇದು ಪ್ರೀಮಿಯಂ ಯೂಸರ್ ಗಳಿಗೆ ಮಾತ್ರ ಆಗಿತ್ತು. ಈಗ ಎಲ್ಲರಿಗೂ ತರಲಾಗಿದೆ.
X App ನಲ್ಲಿ ಕಾಲ್ ಮಾಡೋದು ಹೇಗೆ?
*ಮೊದಲು ನಿಮ್ಮ ಫೋನ್ ನಲ್ಲಿ X app ಓಪನ್ ಮಾಡಿ, DM ವಿಭಾಗಕ್ಕೆ ಹೋಗಿ
*ಇಲ್ಲಿ ಫೋನ್ ಸಿಂಬಲ್ ಮೇಲೆ ಕ್ಲಿಕ್ ಮಾಡಿ, Audio Call ಅಥವಾ Video Call ಆಪ್ಶನ್ ಸೆಲೆಕ್ಟ್ ಮಾಡಿ, ಕಾಲ್ ಮಾಡಬಹುದು.
ಸೆಟ್ಟಿಂಗ್ಸ್ ಗೆ ಹೋಗಿ ನಿಮಗೆ ಯಾರೆಲ್ಲಾ ಕಾಲ್ ಮಾಡಬಹುದು ಎಂದು ಆಯ್ಕೆ ಮಾಡಬಹುದು.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.
Also Read: Tecno Camon 30 Pro 5G : ಟೆಕ್ನೋ ಕ್ಯಾಮನ್ 30 ಖರೀದಿಸಿದರೆ ಪ್ರತಿಯೊಬ್ಬರೂ ಫೋಟೋಗ್ರಾಫರ್ ಆಗಬಹುದು