Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

WhatsApp New Feature : ವಾಟ್ಸಾಪ್ ನಲ್ಲಿ ಭರ್ಜರಿ ಹೊಸ ಫೀಚರ್ಸ್! ಇನ್ಮುಂದೆ ಆ ಕೆಲಸ ಮಾಡೋದು ಅಸಾಧ್ಯ

WhatsApp New Feature :  ವಾಟ್ಸಾಪ್ ಅಪ್ಡೇಟ್ ಆಗುತ್ತಲೇ ಇರುತ್ತದೆ. ಪ್ರತಿ ಸಲವೂ ಹೊಸ ಹೊಸ ಫೀಚರ್ ಗಳನ್ನು ನೀಡುತ್ತಾ ಇರುತ್ತದೆ. ಈಗ ಅದೇ ರೀತಿಯಾಗಿ ವಾಟ್ಸಾಪ್ ನಲ್ಲಿ ಹೊಸದಾಗಿ ಎರಡು ಫೀಚರ್ ಗಳು ಬಂದಿವೆ .

WhatsApp New Feature :  ವಾಟ್ಸಾಪ್ ಅಪ್ಡೇಟ್ ಆಗುತ್ತಲೇ ಇರುತ್ತದೆ. ಪ್ರತಿ ಸಲವೂ ಹೊಸ ಹೊಸ ಫೀಚರ್ ಗಳನ್ನು ನೀಡುತ್ತಾ ಇರುತ್ತದೆ. ಈಗ ಅದೇ ರೀತಿಯಾಗಿ ವಾಟ್ಸಾಪ್ ನಲ್ಲಿ ಹೊಸದಾಗಿ ಎರಡು ಫೀಚರ್ ಗಳು ಬಂದಿವೆ . ಇದರಿಂದ ನೀವು ವಾಟ್ಸಾಪ್ ಅಪ್ಲಿಕೇಶನ್ ಬಳಸುವಾಗ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಹಾಗಾದರೆ ಆ ಹೊಸ ಫೀಚರ್ ಏನು ಎಂಬುದನ್ನು ತಿಳಿಯೋಣ.

WhatsApp New Feature

ವಾಟ್ಸಾಪ್ ನ ಹೊಸ ಫೀಚರ್ ಏನು ?

ವಾಟ್ಸಾಪ್ ಬಳಕೆದಾರರಿಗೆ ಇದೊಂದು ಸಿಹಿ ಸುದ್ದಿ . . ವಾಟ್ಸಾಪ್ ಪ್ರೊಫೈಲ್ ಚಿತ್ರದ ಸ್ಕ್ರೀನ್ಶಾಟ್ ಈಗ ಎಲ್ಲರೂ ತೆಗೆಯಲು ಸಾಧ್ಯವಿಲ್ಲ. ಹೊಸದಾಗಿ ಬಂದಿರುವ ಫೀಚರ್ ನಲ್ಲಿ ಯಾರೂ ಸಹ ನಿಮ್ಮ ಅನುಮತಿಯಿಲ್ಲದೆ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು screenshot ತೆಗೆಯಲು ಸಾಧ್ಯವಿಲ್ಲ. ಈ ಫೀಚರ್ ಬಳಕೆದಾರರ ಗೌಪ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಕೆಲವು ದುರುದ್ದೇಶದಿಂದ ಪ್ರೊಫೈಲ್ ಚಿತ್ರಗಳ sceenshot ತೆಗೆದು ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಈ ಹೊಸ ಫೀಚರ್ ಅಂತಹ ಘಟನೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಮುಂಬರುವ ಹೊಸ ವಾಟ್ಸಾಪ್‌ ಅಪ್‌ಡೇಟ್ ಮಹಿಳೆಯರಿಗೆ ಫೀಚರ್ಸ್ ಯುವತಿಯರು ಫೋಟೋ ಅಪ್‌ಡೇಟ್ ಮಾಡುವಾಗ ಭದ್ರತೆ ಒದಗಿಸುವ ಉದ್ದೇಶವಿದೆ. ಈ ಫೀಚರ್ಸ್ ಈಗ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಬೀಟಾ ಆವೃತ್ತಿ 2.24.4.25 ರಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಮೊಬೈಲ್ ಗಳಿಗೆ ಈ ಹೊಸ ಅಪ್ಡೇಟ್ ಲಭ್ಯವಿದೆ.

Also Read: Moto G54 5G : ಮೋಟೋ ಮಾರುಕಟ್ಟೆಗೆ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಅದರ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ.

ಈ ಫೀಚರ್ ಮೂಲಕ, ಯುವತಿಯರು ಮತ್ತು ಮಹಿಳೆಯರು ತಮ್ಮ ಫೋಟೋಗಳನ್ನು ತಮಗೆ ಇಷ್ಟ ಇರುವ ಅಥವಾ ನಂಬಿಕೆ ಇರುವ ವ್ಯಕ್ತಿಗಳಿಗೆ ಮಾತ್ರ ಪ್ರೊಫೈಲ್ ಫೋಟೋ ಕಾಣುವಂತೆ ಮಾಡಬಹುದು. . ಉಳಿದವರಿಗೆ ಪ್ರೊಫೈಲ್ ಫೋಟೋ ಕಾಣಿಸುವುದಿಲ್ಲ. ಈಗಾಗಲೇ ಒಮ್ಮೆಲೆ ಮಾತ್ರ ನೋಡುವ ರೀತಿ ಫೋಟೋ ಕಲಿಸುವ ಆಯ್ಕೆ ಇದೆ. ಅದ್ರಲ್ಲಿ ನಿಮ್ಮ ಫೋಟೋ ಒಮ್ಮೆ ನೋಡಿದ ತಕ್ಷಣ ಕಾಣೆಯಾಗುತ್ತದೆ. ಮತ್ತೆ ಆ ಫೋಟೋ ನೋಡಲು ಸಾಧ್ಯವಿಲ್ಲ. ಅಂತೆಯೇ ಈಗ ಮಹಿಳೆಯರ ಸುರಕ್ಷತೆ ಮತ್ತು ಕೆಲವು ವಯಕ್ತಿಕ ಮುಖ್ಯ ವಿಚಾರಗಳ ಗೌಪ್ಯತೆ ಕಾಪಾಡಲು ಈ ಹೊಸ ಅಪ್ಡೇಟ್ ಮಾಡಲಾಗಿದೆ.

ಮಕ್ಕಳು ಮತ್ತು ಯುವತಿಯರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ವಾಟ್ಸಾಪ್‌ನ ಪ್ರೊಫೈಲ್ ಫೋಟೋವನ್ನು sceenshot ತೆಗೆಯುವುದನ್ನು ನಿರ್ಬಂಧಿಸಲು ಹೊಸ ಅಪ್ಡೇಟ್ ತರುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹೊಸ ಅಪ್ಡೇಟ್ ನಲ್ಲಿ ಯಾರಾದರೂ ನಿಮ್ಮ ಪ್ರೊಫೈಲ್ ಫೋಟೋವನ್ನು sceenshot ಪಡೆದುಕೊಂಡರೆ ತಕ್ಷಣ ಮಾಹಿತಿಯನ್ನು ನೀಡುತ್ತದೆ.

ಇದರಿಂದ ಉಪಯೋಗ ಏಷ್ಟು ಇದೆಯೋ ಹಾಗೆಯೇ ದುರುಪಯೋಗ ಸಹ ಇದೆ. ಅನಾಮಿಕ ವ್ಯಕ್ತಿಗಳು ಪ್ರೊಫೈಲ್ ಫೋಟೋ ಕಾಣದೆ ಇರುವ ರೀತಿಯಲ್ಲಿ ನಿಮ್ಮನ್ನು ಸಂಪರ್ಕ ಮಾಡಬಹುದು.

Also Read: Noise Buds N1 : ಅದ್ಬುತ ಸೌಂಡ್ ಕ್ವಾಲಿಟಿ ಜೊತೆಗೆ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Noise Buds N1!

Leave a comment