Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Spam Calls : ಸ್ಪ್ಯಾಮ್ ಕರೆಗಳಿಂದ ತಲೆ ಕೆಟ್ಟು ಹೋಗಿದ್ಯಾ? ಈ ಥರ ಮಾಡಿ, ಇನ್ಯಾವತ್ತು ಸ್ಪ್ಯಾಮ್ ಕಾಲ್ಸ್ ಬರಲ್ಲ!

Spam Calls : ನೆಟ್ವರ್ಕ್ ಯಾವುದೇ ಆಗಿರಲಿ ಸ್ಪ್ಯಾಮ್ ಕಾಲ್ಸ್ ಗಳು ಬರುವುದಂತು ತಪ್ಪಲ್ಲ. ಕೆಲವೊಮ್ಮೆ ಇನ್ಯಾವುದೋ ಮುಖ್ಯವಾದ ಕೆಲಸ ಮಾಡುವಾಗ ಸ್ಪ್ಯಾಮ್ ಕಾಲ್ಸ್ ಬಂದರೆ ಇರಿಟೇಟ್ ಆಗುತ್ತದೆ.

Spam Calls : ನೆಟ್ವರ್ಕ್ ಯಾವುದೇ ಆಗಿರಲಿ ಸ್ಪ್ಯಾಮ್ ಕಾಲ್ಸ್ ಗಳು ಬರುವುದಂತು ತಪ್ಪಲ್ಲ. ಕೆಲವೊಮ್ಮೆ ಇನ್ಯಾವುದೋ ಮುಖ್ಯವಾದ ಕೆಲಸ ಮಾಡುವಾಗ ಸ್ಪ್ಯಾಮ್ ಕಾಲ್ಸ್ ಬಂದರೆ ಇರಿಟೇಟ್ ಆಗುತ್ತದೆ. ಜೊತೆಗೆ ಯಾವುದೋ ಆಫೀಸ್ ಮೀಟಿಂಗ್ ನಲ್ಲಿ ಇರುವಾಗ, ಬೇರೇನೋ ಕೆಲಸ ಮಾಡುವಾಗ ಸ್ಪ್ಯಾಮ್ ಕಾಲ್ ಬಂದರೆ ತೊಂದರೆ ಆಗುತ್ತದೆ. ಸ್ಪ್ಯಾಮ್ ಕಾಲ್ ಗಳಿಂದ ಆಗುವ ಸಣ್ಣಪುಟ್ಟ ತೊಂದರೆಗಳು ಒಂದೆರಡಲ್ಲ.

Spam Calls

ಕೆಲವೊಮ್ಮೆ ಸ್ಪ್ಯಾಮ್ ಕಾಲ್ ಗಳ ಮೂಲಕ ಸೈಬರ್ ಕ್ರೈಮ್ ಮಾಡುವವರು ಕರೆಮಾಡಿ ನಿಮಗೆ ಮೋಸ ಮಾಡುವ ಚಾನ್ಸಸ್ ಕೂಡ ಇರುತ್ತದೆ. ಹಾಗಾಗಿ ಸ್ಪ್ಯಾಮ್ ಕಾಲ್ಸ್ ಎಂದರೆ ಜನ ಭಯ ಪಡುವುದುಂಟು. ಒಂದು ವೇಳೆ ನಿಮಗೂ ಸ್ಪ್ಯಾಮ್ ಕಾಲ್ ಗಳ ಹಾವಳಿ ಜಾಸ್ತಿ ಆಗಿದೆ ಎಂದು ಅನ್ನಿಸಿದರೆ. ಈ ಕೆಲವು ಟಿಪ್ಸ್ ಫಾಲೋ ಮಾಡಿ ಸಾಕು. ನಿಮಗೆ ಇನ್ನೊಂದು ಸಾರಿ ಸ್ಪ್ಯಾಮ್ ಕಾಲ್ಸ್ ಬರೋದಿಲ್ಲ..

How to Stop Spam Calls:

ಈಗಿನ Android Smartphone ಗಳಲ್ಲಿ ಇಂಥ ತೊಂದರೆಗಳನ್ನು ಸರಿ ಮಾಡುವುದಕ್ಕಾಗಿ ಕೆಲವು ಆಯ್ಕೆ ಗಳು ಮತ್ತು ಸೆಟ್ಟಿಂಗ್ಸ್ ಗಳು ಇರುತ್ತದೆ. ಅವುಗಳನ್ನು ನಿಮ್ಮ ಫೋನ್ ನಲ್ಲಿ ಮಾಡಿಕೊಂಡರೆ ಸಾಲು, Spam Calls ತೊಂದರೆ ನಿಮಗೆ ಬರುವುದಿಲ್ಲ. ಹಾಗಿದ್ದಲ್ಲಿ ಆ ಸೆಟ್ಟಿಂಗ್ಸ್ ಯಾವುದು? ಅದನ್ನು ಮಾಡಿಕೊಳ್ಳೋದು ಹೇಗೆ? ಎಲ್ಲವನ್ನು ಇಂದು ತಿಳಿಯೋಣ..

Also Read: Galaxy Ring : ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ರಿವೀಲ್ ಆಗಲಿದೆ Samsung Galaxy Ring! ಇನ್ಮುಂದೆ ಆರೋಗ್ಯವಾಗಿರುವುದು ಸುಲಭ

Do this to Stop Spam Calls:

ಸ್ಪ್ಯಾಮ್ ಕಾಲ್ಸ್ ಗಳು ಬರದೇ ಇರುವ ಹಾಗೆ ಮಾಡಲು ನಿಮ್ಮ ಸ್ಕಾರ್ಟ್ಫೋನ್ ನಲ್ಲಿ ಈ ರೀತಿ ಮಾಡಿ..
*ಸ್ಮಾರ್ಟ್ಫೋನ್ ನಲ್ಲಿ Settings ಗೆ ಹೋಗಿ
*Settings ಒಳಗಡೆ Call Settings ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*Call Settings ಒಳಗೆ Calls and Spam Protection ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ

*ಈ ಆಪ್ಶನ್ ಅನ್ನು Activate ಮಾಡಿಕೊಳ್ಳಿ..
ಈ ಒಂದು ಆಯ್ಕೆ ಎಲ್ಲಾ ಫೋನ್ ಗಳಲ್ಲಿ ಕೂಡ ಇರುತ್ತದೆ. ಆದರೆ ಬೇರೆ ಬೇರೆ ಫೋನ್ ಗಳಲ್ಲಿ ಅಯ್ಯ್ ಬೇರೆ ಬೇರೆ ಥರ ಇರಬಹುದು. ಹಾಗಾಗಿ ಸರಿಯಾಗಿ ನೋಡಿಕೊಳ್ಳಿ. ಈ ಆಪ್ಶನ್ ಅನ್ನು ನೀವು ಸೆಲೆಕ್ಟ್ ಮಾಡುವಾಗ ನಿಮಗೆ 2 ಆಯ್ಕೆಗಳು ಸಿಗುತ್ತದೆ. ಆ ಆಯ್ಕೆಗಳು ಯಾವುವು, ಅದನ್ನು ಹೇಗೆ ಆಕ್ಟಿವೇಟ್ ಮಾಡಿಸಬೇಕು ಎಂದು ತಿಳಿಯೋಣ…

Calls and Spam Protection ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗ, ಅಲ್ಲಿ ನಿಮಗೆ Protect from Spam Calls ಎನ್ನುವ ಆಯ್ಕೆ ಮತ್ತು Protect from High Risk Spam Calls ಎನ್ನುವ ಎರಡು ಆಯ್ಕೆ ಇರುತ್ತದೆ. ಇದರಲ್ಲಿ ನಿಮಗೆ ಯಾವ ಆಯ್ಕೆ ಬೇಕೋ, ಅದನ್ನು ನೀವು ಅರಿಸಿಕೊಳ್ಳಬಹುದು. ಒಟ್ಟಿನಲ್ಲಿ ಸ್ಪ್ಯಾಮ್ ಕರೆಗಳು ಬರುವುದಂತೂ ನಿಲ್ಲುತ್ತದೆ.

Also Read: Xiaomi 14 Series : ಗ್ರ್ಯಾಂಡ್ ಆಗಿದೆ ಲಾಂಚ್ ಆಗಿದೆ Xiaomi 14 Series! ಹೇಗಿದೆ ಗೊತ್ತಾ ಫೀಚರ್ಸ್?

Leave a comment