Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Galaxy Ring : ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ರಿವೀಲ್ ಆಗಲಿದೆ Samsung Galaxy Ring! ಇನ್ಮುಂದೆ ಆರೋಗ್ಯವಾಗಿರುವುದು ಸುಲಭ

Galaxy Ring : ಸ್ಯಾಮ್ ಸಂಗ್ ಸಂಸ್ಥೆಯಿಂದ ಸಿಕ್ಕಿರುವ ಮುಖ್ಯವಾದ ಮಾಹಿತಿಯ ಅನುಸಾರ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ Samsung ಸಂಸ್ಥೆಯು Samasung Galaxy Ring ಅನ್ನು ಲಾಂಚ್ ಮಾಡಲಿದೆ.

Galaxy Ring : ಸ್ಯಾಮ್ ಸಂಗ್ ಸಂಸ್ಥೆಯಿಂದ ಸಿಕ್ಕಿರುವ ಮುಖ್ಯವಾದ ಮಾಹಿತಿಯ ಅನುಸಾರ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ Samsung ಸಂಸ್ಥೆಯು Samasung Galaxy Ring ಅನ್ನು ಲಾಂಚ್ ಮಾಡಲಿದೆ. ಇದು ಜನರ ಆರೋಗ್ಯವನ್ನು ಟ್ರ್ಯಾಕ್ ಮಾಡುವುದಕ್ಕೆ ಸಹಾಯ ಮಾಡುವ ಡಿವೈಸ್ ಆಗಿದ್ದು, AI ಬಳಕೆ ಇಂದ ನಿಮ್ಮ ಆರೋಗ್ಯವನ್ನು ಇನ್ನು ಚೆನ್ನಾಗಿ Maintain ಮಾಡಬಹುದು.

Galaxy Ring

ಪ್ರತಿದಿನದ ಆರೋಗ್ಯದ ಮಾಹಿತಿ ನಿಮಗೆ ಸಿಗಲಿದ್ದು, ಸ್ಮಾರ್ಟ್ ಆಗಿ ಎಲ್ಲವನ್ನು ಹ್ಯಾಂಡಲ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಗ್ಯಾಲಕ್ಸಿ ರಿಂಗ್ ಲಾಂಚ್ ಆಗೋದು ಯಾವಾಗ ಎಂದು ಇನ್ನು ಕೂಡ ತಿಳಿದುಬಂದಿಲ್ಲ. ಆದರೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಈ ಡಿವೈಸ್ ರಿವೀಲ್ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ.

ಈ ಡಿವೈಸ್ ಬಗ್ಗೆ Samsung ನೀಡಿರುವ ಮಾಹಿತಿಯ ಅನುಸಾರ ಬುದ್ಧಿವಂತಿಕೆಯ ಬಳಕೆ ಇಂದ ನಿಮ್ಮ ಆರೋಗ್ಯದ ಕುರಿತು ಮಾಹಿತಿ ಪಡೆಯಬಹುದು. ಉದಾಹರಣೆಗೆ ಹಲವು ವಿಚಾರಗಳನ್ನು ಪರಿಗಣಿಸಿ, ನಿಮ್ಮ Vitality Score ನೀಡುತ್ತದೆ ಈ ಡಿವೈಸ್. ಹಾರ್ಟ್ ರೇಟ್, ನಿದ್ದೆ ಮಾಡುವ ಸಮಯ, ಹಾರ್ಟ್ ರೇಟ್ ನಲ್ಲಿ ಬದಲಾವಣೆ, ದಿನನಿತ್ಯ ಚಟುವಟಿಕೆಗಳು, ಇದೆಲ್ಲವನ್ನು ಗಣನೆಗೆ ತೆಗೆದುಕೊಂಡು Vitality Score ನೀಡುತ್ತದೆ.

Also Read: 16 GB RAM ಹೊಂದಿರುವ Huawei Pocket 2 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ.

ಇದರ Booster Card ಪ್ರತಿ ದಿನ ನಿಮ್ಮ ಹೆಲ್ತ್ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಹೆಲ್ತ್ ಬಗ್ಗೆ Insights ನೀಡುತ್ತದೆ. ನಿಮ್ಮ ನಿದ್ದೆ, ಹಾರ್ಟ್ ರೇಟ್, ಹಾರ್ಟ್ ರೇಟ್ ವೇರಿಯಬಿಲಿಟಿ, ಆಕ್ಟಿವಿಟಿ ಇದೆಲ್ಲವನ್ನು ಪರಿಗಣಿಸಿ ನೀಡುವ ಆರೋಗ್ಯದ ಸ್ಕೋರ್ ಆಗಿದೆ My Vitality Score. Booster Card ಎಂದರೆ ಇದು ನಿಮ್ಮ ಆರೋಗ್ಯದ ಬಗ್ಗೆ ನೀವು ಇಟ್ಟುಕೊಂಡಿರುವ Goals ಅನ್ನು ಟ್ರ್ಯಾಕ್ ಮಾಡುತ್ತದೆ. ಈ ವರ್ಷ ಮುಗಿಯುವುದರ ಒಳಗೆ Samsung Health ನಲ್ಲಿ My Vitality Score ಬರಲಿದೆ.

ಆದರೆ ಇದರ Availbility ಆಯಾ ಮಾರ್ಕೆಟ್, ವೇರಿಯಬಲ್ ಡಿವೈಸ್ ಮೇಲೆ ಅವಲಂಬಿಸಿರುತ್ತದೆ ಎಂದು Samsung ತಿಳಿಸಿದೆ. ಬೂಸ್ಟ್ ಕಾರ್ಡ್ ಫೀಚರ್ ಕೂಡ ಇದೇ ರೀತಿ ಆಗಿದೆ. Samsung Health ಈಗ ಎಷ್ಟು ಮುಂದುವರೆದಿದೆ ನೀವು ನಿದ್ದೆ ಮಾಡುವ ಸಮಯದ ವೇರಿಯೇಷನ್ಸ್, ಬ್ಲಡ್ ಆಕ್ಸಿಜನ್ ಲೆವೆಲ್ ವೇರಿಯೇಷನ್, ಹಾರ್ಟ್ ರೇಟ್ ಅಲರ್ಟ್ಸ್ ಇದೆಲ್ಲವನ್ನು ನೋಡಿಕೊಳ್ಳುತ್ತದೆ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Galaxy Z Fold 6: ದೊಡ್ಡ ದೊಡ್ಡ ಸ್ಮಾರ್ಟ್ಫೋನ್ ಗಳಿಗೆ ಸೆಡ್ಡು ಹೊಡೆಯಲು ಬಂದೆ ಬಿಡ್ತು ಸ್ಯಾಮಸಂಗ್ ನ ಹೊಸ ಫೋನ್, ಟಿವಿಯಂತ ಪರದೆ, ಬರೆಯಲು ಪೆನ್ ಸೌಲಭ್ಯ.

Leave a comment