Xiaomi 14 Series : ಗ್ರ್ಯಾಂಡ್ ಆಗಿದೆ ಲಾಂಚ್ ಆಗಿದೆ Xiaomi 14 Series! ಹೇಗಿದೆ ಗೊತ್ತಾ ಫೀಚರ್ಸ್?
Xiaomi 14 Series : ವಿಶ್ವದಲ್ಲಿ Xiaomi ಸಂಸ್ಥೆ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳ ಪೈಕಿ 3ನೇ ಸ್ಥಾನದಲ್ಲಿದೆ. ಈ ಸಂಸ್ಥೆಯು ಜನರಿಗೆ ಅನುಕೂಲ ಅಗುವಂಥ ಬೆಲೆಗೆ ಒಳ್ಳೆಯ ಫೀಚರ್ಸ್ ಇರುವ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ.
Xiaomi 14 Series : ವಿಶ್ವದಲ್ಲಿ Xiaomi ಸಂಸ್ಥೆ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳ ಪೈಕಿ 3ನೇ ಸ್ಥಾನದಲ್ಲಿದೆ. ಈ ಸಂಸ್ಥೆಯು ಜನರಿಗೆ ಅನುಕೂಲ ಅಗುವಂಥ ಬೆಲೆಗೆ ಒಳ್ಳೆಯ ಫೀಚರ್ಸ್ ಇರುವ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿ, ಜನರನ್ನು ಆಕರ್ಷಿಸಿದೆ. ಇದೀಗ ಈ ಸಂಸ್ಥೆಯು ಬಾರ್ಸಿಲೋನಾದಲ್ಲಿ Mobile World Congress ಶುರು ಆಗುವುದಕ್ಕಿಂತ ಮೊದಲೇ ಲೈಕಾ ಜೊತೆಗೆ ಸೇರಿ Xiaomi 14 Series ಅನ್ನು ಲಾಂಚ್ ಮಾಡಿದೆ..
Xiaomi 14 Series
ಈ ಸಂಸ್ಥೆ ಚೈನಾ ಮೂಲದ ಸಂಸ್ಥೆ ಆಗಿದ್ದು, ನಮ್ಮ ದೇಶದಲ್ಲಿ ಉತ್ತಮವಾದ ಮಾರ್ಕೆಟ್ ಹೊಂದಿದೆ, ಜಾಗತಿಕ ಮಟ್ಟದಲ್ಲಿ ಕೂಡ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇಷ್ಟ ಆಗಿದೆ. ಇದೀಗ Xiaomi ಸಂಸ್ಥೆ ಎರಡು ಫೋನ್ ಗಳನ್ನು ಲಾಂಚ್ ಮಾಡಿದ್ದು, Xiaomi 14 ಫೋನ್ ನ ಬೆಲೆ € 999 ಯುರೋಸ್ ಆಗಿದೆ. ಹಾಗೆಯೇ Xiaomi 14 Ultra ಫೋನ್ ಬೆಲೆ € 1499 ಯುರೋಸ್ ಆಗಿರುತ್ತದೆ. ಈ ಫೋನ್ ಕೆಲವೇ ದಿನಗಳಲ್ಲಿ ಭಾರತದಲ್ಲಿ ಸಹ ಈ ಫೋನ್ ಲಾಂಚ್ ಆಗಲಿದ್ದು, ಬೆಲೆ ₹75,000 ರೂಪಾಯಿಗಳ ವರೆಗು ಇರಬಹುದು. ಇನ್ನೂ ಕಡಿಮೆ ಆದರೂ ಆಗಬಹುದು.
Xiaomi Pad 6S Pro:
Xiaomi ಸಂಸ್ಥೆ ಇತ್ತೀಚೆಗೆ ಹೊಸದಾಗಿ Xiaomi Pad 6S Pro tablet ಅನ್ನು ಕೂಡ ಲಾಂಚ್ ಮಾಡಿತು. ಇದನ್ನು € 699 ಯುರೋಸ್ ಗೆ ಲಾಂಚ್ ಮಾಡಲಾಯಿತು. ಈ ಟ್ಯಾಬ್ಲೆಟ್ ಕೂಡ ಹೆಚ್ಚಿನ ಜನರಿಗೆ ಪ್ರಯೋಜನ ನೀಡುವ ಹಾಗಿದೆ.
ಇನ್ನು ಕೆಲವು ಸಾಧನಗಳನ್ನು ಕೂಡ Xiaomi ಸಂಸ್ಥೆ ಬಿಡುಗಡೆ ಮಾಡಿದೆ. € 69 ಯುರೋಸ್ ಗೆ Xiaomi Smartband 8 Pro ಅನ್ನು ಪರಿಚಯಿಸಿತು..ಈ ಸ್ಮಾರ್ಟ್ ಬ್ಯಾಂಡ್ ನಲ್ಲಿ ಆರೋಗ್ಯದ ಕುರಿತು ವಿಶೇಷವಾದ ಫೀಚರ್ಸ್ ಹೊಂದಿದೆ. ಇದು ಮಾತ್ರವಲ್ಲದೆ ಸ್ಮಾರ್ಟ್ ವಾಚ್ ಗಳನ್ನು ಕೂಡ ಲಾಂಚ್ ಮಾಡಲಾಗಿದೆ. Xiaomi Watch S3 ಬೆಲೆ € 149 ಯುರೋಸ್ ಆಗಿರುತ್ತದೆ, ಇನ್ನೊಂದು Watch 2 ಇದ್ದು ಇದು Google ಇಂದ WearOS ಜೊತೆಗೆ ಬರುತ್ತದೆ, ಇದರ ಬೆಲೆ € 199 ರೂಪಾಯಿ ಆಗಿರುತ್ತದೆ..ಈಗಿನ ಯುತ್ ಗಳಿಗೆ ಇದು ಇಷ್ಟವಾಗಲಿದ್ದು, ಹಾರ್ಟ್ ಮಾನಿಟರ್ ಮಾಡುವ ವಿಶೇಷ ಫೀಚರ್ಸ್ ಇದೆ. ಇವೆಲ್ಲವೂ ಗ್ಲೋಬಲ್ ಮಾರ್ಕೆಟ್ ಗೆ ಲಾಂಚ್ ಆಗಿದೆ.
Also Read: WhatsApp New Feature : ವಾಟ್ಸಾಪ್ ನಲ್ಲಿ ಭರ್ಜರಿ ಹೊಸ ಫೀಚರ್ಸ್! ಇನ್ಮುಂದೆ ಆ ಕೆಲಸ ಮಾಡೋದು ಅಸಾಧ್ಯ
Xiaomi Devices:
Xiaomi ಸಂಸ್ಥೆ ಫೋನ್ ಗಳು, ಸ್ಮಾರ್ಟ್ ವಾಚ್, ಸ್ಮಾರ್ಟ್ ಬ್ಯಾಂಡ್ ಇದೆಲ್ಲವೂ ಕೆಲಸ ಮಾಡುವುದು Hyper0S Operating System ಮೂಲಕ. ಇದು ಈ ಕಂಪನಿಯ ಸ್ವಂತ ಆಪರೇಟಿಂಗ್ ಸಿಸ್ಟಮ್ ಆಗಿದೆ. ಈ ಸಿಸ್ಟಮ್ ಸ್ಮಾರ್ಟ್ ಫೋನ್, ಮನೆಯಲ್ಲಿ ಉಪಯೋಗಿಸುವ ವಸ್ತುಗಳು, ಎಲೆಕ್ಟ್ರಿಕ್ ಕಾರ್ ಈ ಎಲ್ಲಾ ಕಡೆ ಕೆಲಸ ಮಾಡುತ್ತದೆ. USer Interface ಗೆ ಅನುಗುಣವಾಗಿ ರೀ ಡಿಸೈನ್ ಮಾಡಲಾಗಿದೆ. ಹಾಗೆಯೇ Xiaomi Smarthub ಅನ್ನು ಕೂಡ ಶುರು ಮಾಡಿದ್ದು, ನಿಮ್ಮ ಮನೆಗೆ ಸಂಬಂಧಪಟ್ಟ ಎಲ್ಲಾ Hime Appliances ಗಳನ್ನು ಒಂದೇ ಕಡೆ ಹ್ಯಾಂಡಲ್ ಮಾಡಲು ಸಹಾಯ ಮಾಡುತ್ತದೆ.
ಮುಂಬರುವ ದಿನಗಳಲ್ಲಿ ಇನ್ನು ಅಡ್ವಾನ್ಸ್ ತಂತ್ರಜ್ಞಾನವನ್ನು ಬಳಸಲಿದ್ದು, ಆರ್ಟಿಫಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿ, ಇನ್ನು ಒಳ್ಳೆಯ ಪ್ರಾಡಕ್ಟ್ ಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಇದರಿಂದ ಜನರ ಟೆಕ್ನಿಕಲ್ ಅಡ್ವಾನ್ಸ್ಮೆಂಟ್ ಜಾಸ್ತಿ ಆಗುವುದಂತು ಸತ್ಯ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.