One Plus 12R ಪ್ರಿಯರಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಓಪನ್ ಸೇಲ್ ಸ್ಟಾರ್ಟ್! ಖರೀದಿಗೆ ಸಮಯ ಫಿಕ್ಸ್ ಮಾಡ್ಕೊಳ್ಳಿ!
One Plus 12R ಫೋನ್ ಜೊತೆಗೆ One Plus Z2 Buds ಅನ್ನು ಹೆಚ್ಚುವರಿಯಾಗಿ ಕೊಡುವ ಆಫರ್ ಕೂಡ ಇದ್ದ ಕಾರಣ, ಜನರು ಮುಗಿಬಿದ್ದು ಫೋನ್ ಖರೀದಿ ಮಾಡಿದ್ದಾರೆ.
ಸ್ಮಾರ್ಟ್ ಫೋನ್ ಗಳ ಮೇಲೆ ಜನರಿಗೆ ಭಾರಿ ಕ್ರೇಜ್ ಇದೆ. ಮಾರ್ಕೆಟ್ ನಲ್ಲಿ ಈಗ ಹಲವು ಬ್ರಾಂಡ್ ಗಳಿದ್ದರು ಜನರು ಇಷ್ಟಪಡುವುದು ಬಹಳ ಚೆನ್ನಾಗಿರುವ ಕೆಲವು ಬ್ರಾಂಡ್ ಗಳನ್ನು ಮಾತ್ರ. ಪ್ರಸ್ತುತ ಎಲ್ಲರಿಗೂ ಒನ್ ಪ್ಲಸ್ ಸ್ಮಾರ್ಟ್ಫೋನ್ ಗಳು ತುಂಬಾ ಇಷ್ಟವಾಗಿದೆ. ಈ ಬ್ರಾಂಡ್ ಹೊಸ ಮಾಡೆಲ್ ಲಾಂಚ್ ಆಗುತ್ತೆ ಅಂದ್ರೆ, ಖರೀದಿ ಮಾಡಲು ಜನರು ಮುಗಿಬೀಳುತ್ತಾರೆ. ಈಗಷ್ಟೇ ಫೆಬ್ರವರಿ 6ರಂದು One Plus 12R ಸೇಲ್ ಸ್ಟಾರ್ಟ್ ಆಗಿ ಕೆಲವೇ ಗಂಟೆಗಳಲ್ಲಿ ಸ್ಟಾಕ್ ಇರುವ ಎಲ್ಲಾ ಫೋನ್ ಗಳು ಸೇಲ್ ಆಗಿ ಹೋದವು..
One Plus 12R ಫೋನ್ ಜೊತೆಗೆ One Plus Z2 Buds ಅನ್ನು ಹೆಚ್ಚುವರಿಯಾಗಿ ಕೊಡುವ ಆಫರ್ ಕೂಡ ಇದ್ದ ಕಾರಣ, ಜನರು ಮುಗಿಬಿದ್ದು ಫೋನ್ ಖರೀದಿ ಮಾಡಿದ್ದಾರೆ. ಈ ವೇಳೆ ಹೆಚ್ಚಿನ ಜನರಿಗೆ One Plus 12R ಖರೀದಿ ಮಾಡಲು ಸಾಧ್ಯವಾಗಿಲ್ಲ. ಅಂಥವರಿಗಾಗಿ ಇದೀಗ One Plus ಸಂಸ್ಥೆ ಒಂದು ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ One Plus 12R ಓಪನ್ ಸೇಲ್ ಶುರು ಮಾಡಲಿದೆ. ಹಾಗಿದ್ರೆ ಸೇಲ್ ಶುರುವಾಗೋದು ಯಾವಾಗ? ಸಂಪೂರ್ಣ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
One Plus 12R Open Sale ಯಾವಾಗ?
ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇದೇ ತಿಂಗಳು ಅಂದರೆ ಫೆಬ್ರವರಿ 13ರಂದು One Plus 12R ಫೋನ್ ನ ಓಪನ್ ಸೇಲ್ ಇರಲಿದೆ. Oneplus India ಅಧಿಕೃತ ವೆಬ್ಸೈಟ್, Amazon Ecommerce, ಹಾಗೂ ನಿಮ್ಮ ಹತ್ತಿರದ OnePlus store ನಲ್ಲಿ ಖರೀದಿ ಮಾಡಬಹುದು.
One Plus 12R Main Features and Offer:
One Plus 12R ಮೊಬೈಲ್ 8Gen 2SoC Processor ನಲ್ಲಿ work ಆಗಲಿದ್ದು. ಈ ಫೋನ್ ಖರೀದಿಯನ್ನು ICICI ಬ್ಯಾಂಕ್ ಕಾರ್ಡ್ ಅಥವಾ One Card ಇಂದ ಬಿಲ್ ಪೇ ಮಾಡಿದರೆ ₹1000 ವರೆಗು ಡಿಸ್ಕೌಂಟ್ ಸಿಗುತ್ತದೆ. ಅಷ್ಟೇ ಅಲ್ಲದೇ ಸ್ಮಾರ್ಟ್ ಫೋನ್ ಪ್ರಿಯರಿಗೆ ಉಪಯೋಗ ಆಗಲಿ ಎಂದು 6 ತಿಂಗಳಿಗೆ ಬಡ್ಡಿ ಇಲ್ಲದೆ EMI ಆಯ್ಕೆ ಕೊಡಲಾಗುತ್ತಿದೆ.
One Plus 12R Features:
One Plus 12R ಫೋನ್ ನ ಅಳತೆ 6.78 ಇಂಚ್ ಆಗಿದ್ದು ಇದರಲ್ಲಿ LTPO AMOLED Display ಇದೆ. Brightness 4500 nits maximum ಆಗಿರುತ್ತದೆ. ಈ ಫೋನ್ ನಲ್ಲಿ Snapdragon 8 Gen 2 Chipset ಹೊಂದಿದೆ. ಈ ಫೋನ್ ನ ಮೆಮೊರಿ ಸ್ಪೇಸ್ ಬಗ್ಗೆ ಹೇಳುವುದಾದರೆ 128GB ಮತ್ತು 246GB ಎರಡು ರೀತಿಯ ಸ್ಟೋರೇಜ್ ಸ್ಪೇಸ್ ಸಿಗುತ್ತದೆ. Oneplus 12R ನಲ್ಲಿ Android 14 ನ OxygenOS 14 custom skin ಮೂಲಕ ವರ್ಕ್ ಆಗುತ್ತದೆ..
Camera Features:
Oneplus 12R ನ ವಿಶೇಷ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಇದೆ. 50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಲೆಂತ್, 2MP ಮ್ಯಾಕ್ರೋ ಲೆನ್ಸ್ ಇದಿಷ್ಟು ರಿಯರ್ ಕ್ಯಾಮೆರಾ ನಲ್ಲಿದೆ. ಸೆಲ್ಫಿ ಕ್ಯಾಮೆರಾ 16MP ಆಗಿರುತ್ತದೆ.
Battery Features:
5,500 mAh ಬ್ಯಾಟರಿ ಹೊಂದಿದ್ದು, 100W ಫಾಸ್ಟ್ ಚಾರ್ಜಿಂಗ್ ಆಗುತ್ತದೆ.
One Plus 12R ಬೆಲೆ:
8GB+128GB = ₹39,999
16GB+256GB = ₹45,999
ಈ ಮಾಡೆಲ್ ಎರಡು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದ್ದು, Cool Blue ಮತ್ತು Iron Grey ಬಣ್ಣಗಳಲ್ಲಿ ಲಭ್ಯವಿದೆ.
Good news for One Plus 12R Lovers: The open sale starts soon!