Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

IPL 2024 Top Batsmans: IPL ನಲ್ಲಿ ಅತಿಹೆಚ್ಚು ರನ್ಸ್ ಗಳಿಸುರುವ ಟಾಪ್ 5 ಬ್ಯಾಟ್ಸ್ಮನ್ ಗಳು!

ಅತಿಹೆಚ್ಚು ರನ್ಸ್ ಗಳಿಸಿರುವ ಬ್ಯಾಟ್ಸ್ಮನ್ ಗಳ ಪೈಕಿ ಕೊಹ್ಲಿ ಅವರು ಅಗ್ರಸ್ಥಾನ ಪಡೆಯುತ್ತಾರೆ.

IPL 2024 Top Batsmans: ಪ್ರತಿ ವರ್ಷ ಏಪ್ರಿಲ್ ತಿಂಗಳು ಬಂತು ಎಂದರೆ ದೇಶದ ಎಲ್ಲೆಡೆ ಐಪಿಎಲ್ ಕ್ರೇಜ್ ಶುರುವಾಗುತ್ತದೆ. 2008ರಲ್ಲಿ ಶುರುವಾದ ಐಪಿಎಲ್ ಟೂರ್ನಿಯಲ್ಲಿ ಭಾರತದ ಹಾಗೂ ವಿಶ್ವದ ಪ್ರಖ್ಯಾತ ಬ್ಯಾಟ್ಸ್ಮನ್ ಗು ಭಾರತದ ತಂಡಗಳ ಪರವಾಗಿ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಾರೆ. ಈ ಗೇಮ್ ಗಳಲ್ಲಿ ಪ್ರತಿ ತಂಡಕ್ಕೂ ಅವರದ್ದೇ ಆದ ಫ್ಯಾನ್ ಬೇಸ್ ಇದೆ. ಹಾಗೆಯೇ ನೂರಾರು ಶ್ರೇಷ್ಠ ಕ್ರಿಕೆಟಿಗರು ಐಪಿಎಲ್ ಆಡಿರುವುದು ವಿಶೇಷ.. ಇಂದು ನಾವು 15 ವರ್ಷಗಲ್ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ಸ್ ಗಳಿಸಿರುವ ಟಾಪ್ 5 ಬ್ಯಾಸ್ಟ್ಮನ್ ಗಳು ಯಾರ್ಯಾರು ಎಂದು ತಿಳಿಯೋಣ..

1. ವಿರಾಟ್ ಕೊಹ್ಲಿ: ಐಪಿಎಲ್ ಶುರು ಆದಾಗಿನಿಂದ ಈಗಿನವರೆಗೂ ಐಪಿಎಲ್ ಜೊತೆಯಾಗಿದ್ದರೆ ಕಿಂಗ್ ಕೊಹ್ಲಿ. ಆರಂಭದಿಂದಲೂ ಒಂದೇ ತಂಡ, RCB ತಂದಕ್ಕಾಗಿ ಆಡುತ್ತಾ ಬಂದಿದ್ದಾರೆ. RCB ಪ್ಲೇಯರ್ ಆಗಿ, ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದಾರೆ ಕೊಹ್ಲಿ. ಐಪಿಎಲ್ ನಲ್ಲಿ ಸಾಕಷ್ಟು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಅತಿಹೆಚ್ಚು ರನ್ಸ್ ಗಳಿಸಿರುವ ಬ್ಯಾಟ್ಸ್ಮನ್ ಗಳ ಪೈಕಿ ಕೊಹ್ಲಿ ಅವರು ಅಗ್ರಸ್ಥಾನ ಪಡೆಯುತ್ತಾರೆ. ವಿರಾಟ್ ಕೊಹ್ಲಿ ಅವರು 229 ಇನ್ನಿಂಗ್ಸ್ ಗಳಲ್ಲಿ 37.25 ಆವರೇಜ್ ಇದ್ದು, 130.02 ಸ್ಟ್ರೈಕ್ ರೇಟ್ ನಲ್ಲಿ 7263 ರನ್ಸ್ ಭಾರಿಸಿದ್ದಾರೆ. ಐಪಿಎಲ್ ನಲ್ಲಿ 7 ಶತಕಗಳು, 50 ಅರ್ಧಶತಕಗಳನ್ನು ಚಚ್ಚಿದ್ದಾರೆ ಕೊಹ್ಲಿ. ಐಪಿಎಲ್ ನಲ್ಲಿ ಅತಿಹೆಚ್ಚು ಸೆಂಚುರಿಗಳನ್ನಿ ಭಾರಿಸಿರುವ ಪ್ಲೇಯರ್ ವಿರಾಟ್ ಕೊಹ್ಲಿ. ಕೊಹ್ಲಿ ಅವರು 2016ರಲ್ಲಿ ಒಂದೇ ವರ್ಷ 973 ರನ್ಸ್ ಗಳಿಸಿ ಇತಿಹಾರ ಬರೆದಿದ್ದರು.

2. ಶಿಖರ್ ಧವನ್: ಇವರು ಐಪಿಎಲ್ ನಲ್ಲಿ ವಿವಿಧ ತಂಡಗಳ ಪರವಾಗಿ ಆಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದಾರೆ, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಇವರ ಬ್ಯಾಟಿಂಗ್ ಪ್ರದರ್ಶನ ಸಹ ಜನರ ಗಮನ ಸೆಳೆಯುವಂಥ ವಿನ್ನಿಂಗ್ ಇನ್ನಿಂಗ್ಸ್ ಆಗಿರುತ್ತದೆ. ಐಪಿಎಲ್ ನಲ್ಲಿ ಇವರು 35.39 ಆವರೇಜ್ ನಲ್ಲಿ, 127.18 ಸ್ಟ್ರೈಕ್ ನಲ್ಲಿ, 6617 ರನ್ಸ್ ಭಾರಿಸಿದ್ದಾರೆ.

3. ಡೇವಿಡ್ ವಾರ್ನರ್: ಸನ್ ರೈಸರ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದ ಡೇವಿಡ್ ವಾರ್ನರ್ ಅವರು ಪ್ರಸ್ತುತ ಇವರು ಬೇರೆ ತಂಡದ ಪರವಾಗಿ ಆಡುತ್ತಿದ್ದಾರೆ. ಇವರು ಸಹ ಐಪಿಎಲ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ತೋರಿದ ಕ್ರಿಕೆಟಿಗರಲ್ಲಿ ಒಬ್ಬರು, ವಾರ್ನರ್ ಅವರ ಇನ್ನಿಂಗ್ಸ್ ನೋಡಲು ಸಂತೋಷ ಆಗುತ್ತದೆ ಎಂದರು ತಪ್ಪಲ್ಲ. ಐಪಿಎಲ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದವರ ಪೈಕಿ 3ನೇ ಸ್ಥಾನಕ್ಕೆ ಬರುತ್ತಾರೆ ವಾರ್ನರ್. 176 ಇನ್ನಿಂಗ್ಸ್ ಗಳಲ್ಲಿ, 41.54 ಆವರೇಜ್ ನಲ್ಲಿ, 139.92 ಸ್ಟ್ರೈಕ್ ರೇಟ್ ನಲ್ಲಿ 6397 ರನ್ಸ್ ಭಾರಿಸಿದ್ದಾರೆ ವಾರ್ನರ್. 4 ಶತಕ ಸಿಡಿಸಿದ್ದಾರೆ ವಾರ್ನರ್.

4. ರೋಹಿತ್ ಶರ್ಮಾ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಎಂದೇ ಇವರನ್ನು ಎಲ್ಲರೂ ಕರೆಯುತ್ತಾರೆ. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ, ತಮ್ಮ ತಂಡ 5 ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ಇವರದ್ದು. ಅತ್ಯುತ್ತಮ ಪ್ರದರ್ಶನ ನೀಡುವ ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿರುವ ಬ್ಯಾಟ್ಸ್ಮನ್ ಗಳ ಪೈಕಿ 4ನೇ ಸ್ಥಾನಕ್ಕೆ ಬರುತ್ತಾರೆ. ರೋಹಿತ್ ಅವರು 243 ಇನ್ನಿಂಗ್ಸ್ ಗಳಲ್ಲಿ 29.57 ಆವರೇಜ್ ನಲ್ಲಿ, 130.05 ಸ್ಟ್ರೈಕ್ ರೇಟ್ ನಲ್ಲಿ, 6211 ರನ್ಸ್ ಭಾರಿಸಿದ್ದಾರೆ. 1 ಶತಕ 42 ಅರ್ಧಶತಕ ಭಾರಿಸಿದ್ದಾರೆ ರೋಹಿತ್.

5. ಸುರೇಶ್ ರೈನಾ: ಭಾರತ ತಂಡದ ಪರವಾಗಿ ಹಾಗೂ ಐಪಿಎಲ್ ನಲ್ಲಿ ಎರಡರಲ್ಲೂ ಸುರೇಶ್ ರೈನಾ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹಲವು ವರ್ಷಗಳಿಂದ CSK ತಂಡದ ಪರವಾಗಿ ಆಡುತ್ತಿದ್ದಾರೆ ಸುರೇಶ್ ರೈನಾ. ಇವರು ಐಪಿಎಲ್ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿರುವ ಬ್ಯಾಟ್ಸ್ಮನ್ ಗಳ ಪೈಕಿ 5ನೇ ಸ್ಥಾನದಲ್ಲಿದ್ದು, 200 ಇನ್ನಿಂಗ್ಸ್ ಗಳಲ್ಲಿ 32.51 ಆವರೇಜ್ ನಲ್ಲಿ, 136.73 ಸ್ಟ್ರೈಕ್ ರೇಟ್ ನಲ್ಲಿ, 5528 ರನ್ಸ್ ಭಾರಿಸಿದ್ದಾರೆ.

Top 5 batsmen with the highest runs in the IPL!

Leave a comment