Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

KPSC ನೇಮಕಾತಿ: ಸದ್ಯದಲ್ಲೇ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿ! ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್.

ಈ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟ ಹಾಗೆ, KPSC ಅಧ್ಯಕ್ಷರು ಹಾಗೂ 5 ಸದಸ್ಯರ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಈ ಸಭೆಯಲ್ಲಿ ಶೀಘ್ರದಲ್ಲೇ ಗೆಜೆಟೆಡ್ ಪ್ರೊಬೆಶನರಿ ಆಫೀಸರ್ ಹುದ್ದೆಯ ನೇಮಕಾತಿ

KPSC ನೇಮಕಾತಿ: ಕರ್ನಾಟಕ ಲೋಕ ಸೇವಾ ಆಯೋಗ (KPSC) ಇಲ್ಲಿ ಖಾಲಿ ಇರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಅದರಲ್ಲೂ ತಕ್ಷಣಕ್ಕೆ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ನಡೆಸುವುದಕ್ಕೆ ಅನುಮತಿ ಸಿಕ್ಕಿದ್ದು, ಈ ಬಗ್ಗೆ ಆದಷ್ಟು ಬೇಗ ಅಧಿಕೃತ ಅಧಿಸೂಚನೆ ನೀಡಲಾಗುತ್ತದೆ. ಹಲವು ಜನ ಉದ್ಗೋಗಾಕಾಂಕ್ಷಿಗಳಿಗೆ ಇದು ಸಂತೋಷದ ಸುದ್ದಿ ಎಂದರೆ ತಪ್ಪಲ್ಲ..

ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ:

2024ನೇ ವರ್ಷದಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ, ಖಾಲಿ ಇರುವ ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಜಾರಿಗೆ ತಂದಿರುವ ನಿಯಮಗಳ ಅನುಸಾರ ವರ್ಗಗಳಿಗೆ ಇಂತಿಷ್ಟು ಎಂದು ಎಲ್ಲ ಹುದ್ದೆಗಳನ್ನು ಡಿವೈಡ್ ಮಾಡಿ, KPSC ಆಯೋಗಕ್ಕೆ ಕಳಿಸಿಕೊಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

Group A Group B ಹುದ್ದೆಗಳ ನೇಮಕಾತಿ:

KPSC ಯಲ್ಲಿ ಖಾಲಿ ಇರುವಂತ ಹುದ್ದೆಗಳ ಪೈಕಿ 384 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಹಾಗೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.

ಈ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟ ಹಾಗೆ, KPSC ಅಧ್ಯಕ್ಷರು ಹಾಗೂ 5 ಸದಸ್ಯರ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಈ ಸಭೆಯಲ್ಲಿ ಶೀಘ್ರದಲ್ಲೇ ಗೆಜೆಟೆಡ್ ಪ್ರೊಬೆಶನರಿ ಆಫೀಸರ್ ಹುದ್ದೆಯ ನೇಮಕಾತಿ ಹಾಗೂ ಇನ್ನು ಬೇರೆ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ನಡೆಯಬೇಕು, ಇದಕ್ಕಾಗಿ ಅಧಿಸೂಚನೆ ನೀಡಬೇಕು ಎಂದು ತೀರ್ಮಾನ ಮಾಡಲಾಗಿದೆ.

ಗ್ರೂಪ್ ಎ ಹುದ್ದೆಗಳು:

Group A ನಲ್ಲಿ ಯಾವ್ಯಾವ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ ಎಂದು ನೋಡುವುದಾದರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಖಜಾನೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಒಳಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಷ್ಟು ಇಲಾಖೆಗಳಲ್ಲಿ ಒಟ್ಟು 159 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತದೆ.

ಗ್ರೂಪ್ ಬಿ ಹುದ್ದೆಗಳು:

Group B ನಲ್ಲಿ ಯಾವ್ಯಾವ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ ಎಂದು ನೋಡುವುದಾದರೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಆರ್ಥಿಕ ಇಲಾಖೆ, ಲೆಕ್ಕ ಪರಿಶೋಧನಾ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಖೆ (ಖಜಾನೆ), ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಇಷ್ಟು ಇಲಾಖೆಗಳಲ್ಲಿ ಒಟ್ಟು 225 ಹುದ್ದೆಗಳು ಖಾಲಿ ಇದ್ದು, ಈ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ನೀಡಲಾಗಿದೆ.

ಅಧಿಕೃತ ವೆಬ್ಸೈಟ್ ಲಿಂಕ್ https://kpsc.kar.nic.in/

KPSC ನೇಮಕಾತಿ
Karnataka Public Service Commission Recruitment 2024

Karnataka Public Service Commission Recruitment 2024

Leave a comment