IPL Investment: ಐಪಿಎಲ್ ಗೆ ಕೋಟಿಕೋಟಿ ಹಣ ಸುರಿದು ಆಟಗಾರರನ್ನು ಖರೀದಿ ಮಾಡುವ ಮಾಲೀಕರಿಗೆ ಹಣ ಹೇಗೆ ವಾಪಸ್ ಬರುತ್ತೆ? ಅಬ್ಬಬ್ಬಾ ನೂರು ಕೋಟಿ ಹಾಕಿದ್ರೆ ಸಾವಿರ ಕೋಟಿ ಆಗುವುದಂತೂ ಪಕ್ಕಾ!
ಹೀಗಿರುವಾಗ ಇಷ್ಟೊಂದು ಹಣ ಮಾಲೀಕರಿಗೆ ಎಲ್ಲಿಂದ ಬರುತ್ತದೆ? ಅದನ್ನು ಹೇಗೆ ವಾಪಸ್ ಪಡೆಯುತ್ತಾರೆ ಎಂಬ ಕುತೂಹಲ ಕಂಡಿತವಾಗಿಯೂ ಎಲ್ಲರ ಮನಸ್ಸಿನಲ್ಲಿ ಇದ್ದೇ ಇರುತ್ತದೆ.
IPL Investment: ಸ್ನೇಹಿತರೆ, ಸದ್ಯ ಎಲ್ಲಾ ರೀತಿಯಾದಂತಹ ಸೀರಿಯಲ್ ರಿಯಾಲಿಟಿ ಶೋಗಳನ್ನು ಮೀರಿಸುವಂತಹ ಎಂಟರ್ಟೈನ್ಮೆಂಟ್ ನೀಡುತ್ತಿರುವ ಶೋ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಹೌದು ಸ್ನೇಹಿತರೆ ಐಪಿಎಲ್
ನಲ್ಲಿ ಅಡಗಿಕೊಂಡಿರುವ ಕುತೂಹಲ ಕಾತರತೆಯ ಕುರಿತು ನಾವೇನು ಹೆಚ್ಚಾಗಿ ವಿವರಿಸಬೇಕಿಲ್ಲ. ಸಾಕಷ್ಟು ಹುಚ್ಚು ಅಭಿಮಾನಿಗಳು ಈ ಪುಟವನ್ನು ಅದಾಗಲೇ ಓದಲು ಆರಂಭಿಸಿರುತ್ತೀರಿ.
ಹೀಗಿರುವಾಗ ಎಲ್ಲರ ತಲೆಯಲ್ಲೂ ಕಾಡುವಂತಹ ಪ್ರಶ್ನೆ ಎಂದರೆ ಕಿಂಗ್ ಕೊಯ್ಲಿಗೆ ಅಷ್ಟು ಕೋಟಿ ಕೊಟ್ಟು ಖರೀದಿ ಮಾಡಿದರಂತೆ?? ಕಳಪೆ ಪ್ರದರ್ಶನ ನೀಡುವ ಈ ಆಟಗಾರನಿಗೆ ಅಷ್ಟು ಕೋಟಿ ನೀಡಿದರಂತೆ? ಬೌಲಿಂಗ್ ಮಾಂತ್ರಿಕನಾಗಿ ಮಿಂಚುತ್ತಿರುವ ಆಲ್-ರೌಂಡರ್ ಜಡೇಜಾನಿಗೆ ಅಷ್ಟೊಂದು ಕೋಟಿ ನೀಡಿ ಬೆಡ್ ಮಾಡಿಕೊಂಡರಂತೆ? ಎಂಬ ಹಲವಾರು ಫ್ರಾಂಚೈಸಿ ಕುರಿತಾದ ಸುದ್ದಿಗಳು ಐಪಿಎಲ್ ಸಂದರ್ಭದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಲೇ ಇರುತ್ತದೆ.
ಹೀಗಿರುವಾಗ ಇಷ್ಟೊಂದು ಹಣ ಮಾಲೀಕರಿಗೆ ಎಲ್ಲಿಂದ ಬರುತ್ತದೆ? ಅದನ್ನು ಹೇಗೆ ವಾಪಸ್ ಪಡೆಯುತ್ತಾರೆ ಎಂಬ ಕುತೂಹಲ ಕಂಡಿತವಾಗಿಯೂ ಎಲ್ಲರ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ನಾವಿವತ್ತು ಇಂತಹ ಕುತೂಹಲಗಳಿಗೆ ಬ್ರೇಕ್ ಹಾಕುವಂತಹ ಉತ್ತರಗಳನ್ನು ತಿಳಿಸುತ್ತಿದ್ದೇವೆ. ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಹೌದು ಸ್ನೇಹಿತರೆ ಪ್ರತಿಯೊಂದು ಫ್ರಾಂಚೈಸಿಗೂ ಒಬ್ಬ ಮಾಲೀಕ ಇದ್ದೇ ಇರುತ್ತಾನೆ. ಅಲ್ಲದೆ ಬಿಸಿಸಿಐ ಕೂಡ ಎಂಟು ನೂರು ಕೋಟಿ ಹಣ ನೀಡಿ ಆ ಪ್ಲೇಯರ್ಸ್ಗಳಿಗೆ ಆಟಗಾರರನ್ನು ಖರೀದಿ ಮಾಡುವಂತೆ ತಿಳಿಸಿರುತ್ತಾರೆ. ಹೀಗೆ ಆಟಗಾರರನ್ನು ಖರೀದಿಸುವಾಗ ಕೇವಲ ಎಂಟು ಇಂಟರ್ನ್ಯಾಷನಲ್ ಆಟಗಾರರೇ ಇರಬೇಕು ಮತ್ತು ಅವರ ಸಾರಿಗೆ ವ್ಯವಸ್ಥೆ ಹಾಗೂ ಊಟ ತಿಂಡಿ ಎಲ್ಲಾ ಖರ್ಚುಗಳನ್ನು ಮಾಲೀಕರೇ ನೋಡಿಕೊಳ್ಳಬೇಕು.
ಜೊತೆಗೆ ಬಿಸಿಸಿಐ ಹಾಕಿರುವ ಕೆಲವು ರೂಲ್ಸ್ಗಳನ್ನು ಖಡಾಖಂಡಿತವಾಗಿ ಫಾಲೋ ಮಾಡಲೇಬೇಕು. ಹೀಗೆ ಆಟಗಾರರನ್ನು ಕೋಟಿ ಹಣ ನೀಡಿ ಖರೀದಿಸುತ್ತಾರೆ. ಶೇಕಡ 80ರಷ್ಟು ಜನರ ಪ್ರಕಾರ ಮ್ಯಾಚ್ ವೀಕ್ಷಣೆಗೆ ಹೋಗುವಂತಹ ಜನರಿಂದ ಈ ಹಣ ಎಲ್ಲವೂ ದುಪ್ಪಟ್ಟಾಗಿ ವಾಪಸ್ ಬರುತ್ತದೆ ಎಂದು ಅಂದಾಜಿಸುತ್ತಾರೆ. ಆದರೆ ಇದು ಶುದ್ಧ ತಪ್ಪು.
ಹೌದು ಕೇವಲ ಹತ್ತು ಪರ್ಸೆಂಟ್ ರಷ್ಟು ಹಣ ಮಾತ್ರ ಮ್ಯಾಚ್ ನೋಡಲು ಬಂದಂತಹ ಅಭಿಮಾನಿಗಳಿಂದ ದೊರಕುತ್ತದೆ. ಇನ್ನುಳಿದ ಹಣ ವಿವೋ, ಡ್ರೀಮ್ ಇಲೆವೆನ್, ಪೆಪ್ಸಿ, ಕಿಂಗ್ಫಿಶರ್ನಂತಹ ಸಂಸ್ಥೆಯ ಮಾಲೀಕರು 2 ಕೋಟಿಗೂ ಅಧಿಕ ಹಣವನ್ನು ನೀಡಿ ಐಪಿಎಲ್ಲನ್ನು ಖರೀದಿಸಿರುತ್ತಾರೆ. ಇನ್ನು 70ರಷ್ಟು ಹಣ ಮ್ಯಾಚ್ನ ಮಧ್ಯಭಾಗದಲ್ಲಿ ಹತ್ತು ಸೆಕೆಂಡುಗಳ ಪ್ರಸಾರವಾಗುವಂತಹ ಜಾಹೀರಾತಿನಿಂದ ಬರುತ್ತದೆ.
How will the money come back to the owners who spent crores of dollars on the IPL and bought the players?