Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SSP Post Matric Scholarship 2024: ಸರ್ಕಾರದ SSP Scholarship ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸ ಮಾಡುವ, ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್, ಜಾಬ್ ಓರಿಯಂಟೆಡ್ ಕೋರ್ಸ್ ಈ ಎಲ್ಲವನ್ನೂ ಮಾಡುತ್ತಿರುವ

SSP Post Matric Scholarship 2024: ರಾಜ್ಯ ಸರ್ಕಾರವು ಕರ್ನಾಟಕದ ಬಡ ಮತ್ತು ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಒದಗಿಸುವ ವಿದ್ಯಾರ್ಥಿವೇತನವೇ ಈ SSP Scholarship. ಪ್ರತಿ ವರ್ಷ ವಿವಿಧ ವರ್ಗದ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಯೋಜನೆ ಇಂದ ಸಹಾಯ ಸಿಗುತ್ತದೆ. 2024ನೇ ಸಾಲಿನ SSP Scholarship ಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ತಿಳಿಸುತ್ತೇವೆ ನೋಡಿ..

SSP Post Matric Scholarship 2024:

10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸ ಮಾಡುವ, ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್, ಜಾಬ್ ಓರಿಯಂಟೆಡ್ ಕೋರ್ಸ್ ಈ ಎಲ್ಲವನ್ನೂ ಮಾಡುತ್ತಿರುವ ಕಷ್ಟದಲ್ಲಿದ್ದು ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • 10ನೇ ತರಗತಿ ರಿಜಿಸ್ಟರ್ ನಂಬರ್
  • ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
  • ಆಧಾರ್ ಕಾರ್ಡ್ ನಂಬರ್
  • ಫೋನ್ ನಂಬರ್
  • ಇಮೇಲ್ ಐಡಿ
  • ಕಾಲೇಜ್ ಅಡ್ಮಿಷನ್ ನಂಬರ್/ಕಾಲೇಜ್ ರಿಜಿಸ್ಟರ್ ನಂಬರ್
  • ವಿಕಲಚೇತನ ವಿದ್ಯಾರ್ಥಿ ಆದರೆ ಯಡಿಐಡಿ ನಂಬರ್
  • ವಿದ್ಯಾರ್ಥಿಯ ಸಂಪೂರ್ಣ ವಿಳಾಸ
  • ಎಲ್ಲಾ ದಾಖಲೆಗಳ ಇದೃಢೀಕರಣ
  • ಹಾಸ್ಟೆಲ್ ವಿದ್ಯಾರ್ಥಿಗಳಿಗೆ, ಹಾಸ್ಟೆಲ್ ವಿವರ

ಓಬಿಸಿ ವರ್ಗದವರಿಗೆ ಎಸ್.ಎಸ್.ಪಿ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್:

ಈ ವರ್ಗದವರಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ ಸಿಗಲಿದ್ದು, ಇದರಲ್ಲಿ ನಿಮಗೆ ಸ್ಕಾಲರ್ಶಿಪ್, ಕಾಲೇಜ್ ಫೀಸ್ ಮರುಪಾವತಿ, ವಿದ್ಯಾಸಿರಿ ಸ್ಕಾಲರ್ಶಿಪ್ ನಲ್ಲಿ ಉಚಿತ ವಸತಿ ಮತ್ತು ಊಟ ಎಲ್ಲವನ್ನು ಒದಗಿಸಿಕೊಡಲಾಗುತ್ತದೆ. ಇದಕ್ಕಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಓಬಿಸಿ ವಿದ್ಯಾಸಿರಿ ಸ್ಕಾಲರ್ಶಿಪ್ ಅರ್ಹತೆ:

10ನೇ ತರಗತಿ ನಂತರ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಓಬಿಸಿ ವರ್ಗದ, ಅಲೆಮಾರಿ ಮತ್ತು ಅರೆ ಅಲೆಮಾರಿ ವರ್ಗದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ ಹೊಂದುತ್ತಾರೆ.

ಹಿಂದುಳಿದ ವರ್ಗದವರಿಗೆ ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್:

ರಾಜ್ಯದಲ್ಲಿ ಹಿಂದುಳಿದ ವರ್ಗದ ಮಕ್ಕಳು 10ನೇ ತರಗತಿ ನಂತರ ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಬೆಂಗಳೂರಿನಲ್ಲಿರುವ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಆನ್ಲೈನ್ ನಲ್ಲಿ ಶುಲ್ಕಮರುಪಾವತಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಶುರುವಾಗಿದ್ದು, ಅರ್ಹತೆ ಇರುವ ಈ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಅರ್ಹತೆಗಳು:

  • ವಿದ್ಯಾರ್ಥಿಗಳು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಸಿಖ್, ಬೌದ್ಧ ವರ್ಗಕ್ಕೆ ಸೇರಿದವರಾಗಿರಬೇಕು.
  • ನಮ್ಮ ರಾಜ್ಯದಲ್ಲಿ ವಾಸಿಸುವವರೆ ಆಗಿರಬೇಕು.
  • ಕಳೆದ ವರ್ಷದ ಪರೀಕ್ಷೆಯಲ್ಲಿ ಮಿನಿಮಮ್ 50% ಮಾರ್ಕ್ಸ್ ಪಡೆದಿರಬೇಕು.
  • ಇವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು. ಮೆರಿಟ್ ಕಮ್ ಮೀನ್ಸ್ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಪರಿಶಿಷ್ಟ ಜಾತಿ ವರ್ಗಕ್ಕೆ SSP Post Matric Scholarship:

ಈ ವರ್ಗಕ್ಕೆ ಸೇರಿದ ಬಡ ವಿದ್ಯಾರ್ಥಿಗಳು, 10ನೇ ತರಗತಿ ಬಳಿಕ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದರೆ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗುತ್ತದೆ. ಅರ್ಹತೆ ಹೊಂದಿರುವವರು ಫೆಬ್ರವರು 15ರ ಒಳಗೆ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ SSP Post Matric Scholarship:

ಈ ವರ್ಗಕ್ಕೆ ಸೇರಿದ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹತೆ ಇರುವ ವಿದ್ಯಾರ್ಥಿಗಳು ಮಾರ್ಚ್ 31ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬಹುದು.

ಅಧಿಕೃತ ವೆಬ್ಸೈಟ್:

https://ssp.postmatric.karnataka.gov.in/

Apply online

SSP Post-Matric Scholarship 2024: Apply online

Leave a comment