Prize Money Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ ₹35,000 ಸ್ಕಾಲರ್ಶಿಪ್! ಸರ್ಕಾರದ Prize Money ಪಡೆಯಲು ಇಂದೇ ಅಪ್ಲೈ ಮಾಡಿ!
ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಒಂದು ಅಧಿಕೃತ ವೆಬ್ಸೈಟ್ ನಲ್ಲಿ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿ ಓದಿ ಬಳಿಕ ಅರ್ಜಿ ಸಲ್ಲಿಸಿ.
Prize Money Scholarship: ರಾಜ್ಯ ಸರ್ಕಾರವು ಕಷ್ಟ ಪಟ್ಟು ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಪ್ರತಿ ವರ್ಷವೂ ಸರ್ಕಾರ Prize Money ಕೊಡುತ್ತಿದೆ. 2023-24ನೇ ಸಾಲಿನ ವರ್ಷದ ಸ್ಕಾಲರ್ಶಿಪ್ ಕೊಡುವುದಕ್ಕೆ ಸರ್ಕಾರ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಯಾವೆಲ್ಲಾ ವಿದ್ಯಾರ್ಥಿಗಳು ಅರ್ಹತೆ ಪಡೆಯುತ್ತಾರೆ? ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಿರುವ ಇನ್ನಿತರ ಅರ್ಹತೆಗಳು ಏನೇನು? ಎಲ್ಲವನ್ನು ತಿಳಿಸುತ್ತೇವೆ ನೋಡಿ.
Prize Money Scholarship Details:
ವಿದ್ಯಾರ್ಥಿವೇತನದ ಹೆಸರು :- Prize Money
ಸ್ಕಾಲರ್ಶಿಪ್ ಕೊಡುವ ಇಲಾಖೆ :- ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ವರ್ಗಗಳ ಇಲಾಖೆ
ವಿದ್ಯಾರ್ಹತೆ :- ಪಿಯುಸಿ, ಡಿಗ್ರಿ, ಡಿಪ್ಲೊಮಾ, ಮಾಸ್ಟರ್ ಡಿಗ್ರಿ ಮುಗಿಸಿರುವವರು ಅಪ್ಲೈ ಮಾಡಬಹುದು
ಯಾರೆಲ್ಲಾ ಅಪ್ಲೈ ಮಾಡಬಹುದು :- SC/ST ವಿದ್ಯಾರ್ಥಿಗಳು
ಅರ್ಜಿ ಸಲ್ಲಿಕೆ :- ಆನ್ಲೈನ್ ಮೂಲಕ
Prize Money Scholarship:
ಸರ್ಕಾರದ ಜ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು, SC/ST ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಬಹುದು. ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಡಿಪ್ಲೊಮಾ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲೇ, ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಬಹುದು. ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವವರು, 2023ರಲ್ಲಿ ಕೋರ್ಸ್ ಪಾಸ್ ಆಗಿರಬೇಕು.
ಈ ಸ್ಕಾಲರ್ಶಿಪ್ ನಲ್ಲಿ ಎಷ್ಟು ಹಣ ಸಿಗುತ್ತದೆ?
SC/ST ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಈ ಸ್ಕಾಲರ್ಶಿಪ್ ಇಂದ ಯಾವ ವಿದ್ಯಾರ್ಥಿಗೆ ಎಷ್ಟು ಮೊತ್ತ ಸಿಗುತ್ತದೆ ಎಂದು ನೋಡುವುದಾದರೆ..
PUC, Diploma :- ದ್ವಿತೀಯ ಪಿಯುಸಿ ಮತ್ತು ಫೈನಲ್ ಇಯರ್ ಡಿಪ್ಲೊಮಾ ಪಾಸ್ ಮಾಡಿರುವವರಿಗೆ ₹20,000 ಸ್ಕಾಲರ್ಶಿಪ್ ಸಿಗುತ್ತದೆ.
Degree Scholarship :- ಡಿಗ್ರಿ ಅಂದರೆ 3 ವರ್ಷದ ಪದವಿ ಪೂರ್ಣಗೊಳಿಸಿರುವವರಿಗೆ ₹25,000 ಸ್ಕಾಲರ್ಶಿಪ್ ಸಿಗುತ್ತದೆ.
ಮಾಸ್ಟರ್ಸ್ ಪ್ರೈಜ್ ಮನಿ :- MA, Mcom, Msc ಈ ಥರದ ಮಾಸ್ಟರ್ ಡಿಗ್ರಿ ಮಾಡಿರುವವರಿಗೆ ₹30,000 ಸ್ಕಾಲರ್ಶಿಪ್ ಸಿಗುತ್ತದೆ.
Engineering, Agriculture, Medicine, Veterinary Medicine :- ಈ ಕೋರ್ಸ್ ಮಾಡುತ್ತಿರುವವರಿಗೆ ₹35,000 ಸ್ಕಾಲರ್ಶಿಪ್ ಸಿಗುತ್ತದೆ.
ವಿದ್ಯಾರ್ಥಿಗಳ ಅರ್ಹತೆ:
*SC/ST ವರ್ಗದ ವಿದ್ಯಾರ್ಥಿಗಳೇ ಆಗಿರಬೇಕು
*ಮೊದಲ ಅಟೆಂಪ್ಟ್ ನಲ್ಲಿ ಕೋರ್ಸ್ ಪಾಸ್ ಆಗಿರಬೇಕು
*ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು.
ಮುಖ್ಯ ಮಾಹಿತಿ:
ನೀವು ಅರ್ಜಿ ಸಲ್ಲಿಸಲು ಹೋದಾಗ, ಅಲ್ಲಿ ನಿಮ್ಮ ಕಾಲೇಜಿನ ಹೆಸರನ್ನು ಆಯ್ಕೆ ಮಾಡಬೇಕಾಗುತ್ತದೆ. ಒಂದು ವೇಳೆ ವೆಬ್ಸೈಟ್ ನಲ್ಲಿ ನಿಮ್ಮ ಕಾಲೇಜಿನ ಹೆಸರು ಇಲ್ಲ ಅಂದರೆ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ, ನಿಮ್ಮ ಕಾಲೇಜಿನ ಹೆಸರನ್ನು ಸೇರಿಸಲು ಕೇಳಿಕೊಳ್ಳಬಹುದು.
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಸೈಜ್ ಫೋಟೋ
10ನೇ ತರಗತಿ ಮಾರ್ಕ್ಸ್ ಕಾರ್ಡ್
ಈಗ ಓದುತ್ತಿರುವ ಕೋರ್ಸ್ ನ ಮಾರ್ಕ್ಸ್ ಕಾರ್ಡ್
ಇನ್ಕಮ್ ಸರ್ಟಿಫಿಕೇಟ್
ಕ್ಯಾಸ್ಟ್ ಸರ್ಟಿಫಿಕೇಟ್
ಬ್ಯಾಂಕ್ ಅಕೌಂಟ್ ಡೀಟೇಲ್ಸ್
ಫೋನ್ ನಂಬರ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಮೊದಲಿಗೆ ಸರ್ಕಾರದ ಈ https://swdservices.karnataka.gov.in/SWPRIZEMONEY/Home.aspx?ReturnUrl=%2fswprizemoney%2f ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
*ಇಲ್ಲಿ ನಿಮಗೆ Online Application (Passed in 2023 only) ಎಂದು ಬರೆದಿರುತ್ತದೆ. ಆ ಆಪ್ಶನ್ ಸೆಲೆಕ್ಟ್ ಮಾಡಿ
*ಈಗ ನೀವು ನಿಮ್ಮ 10ನೇ ತರಗತಿಗೆ ಸಂಬಂಧಿಸಿದ ಹಾಗೆ ಪೂರ್ತಿ ಮಾಹಿತಿ ಫಿಲ್ ಮಾಡಬೇಕು, ಮಾರ್ಕ್ಸ್, ಬೋರ್ಡ್ ಮಾಹಿತಿ, ರಿಜಿಸ್ಟರ್ ನಂಬರ್ ಇದೆಲ್ಲವನ್ನು ಫಿಲ್ ಮಾಡಿ.
*ಬಳಿಕ ಗುರುತಿನ ದೃಢೀಕರಣ ಸೇವೆ ಎನ್ನುವ ಆಪ್ಶನ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಯನ್ನು ತುಂಬಿಸಿ.. ಬಳಿಕ I Agree ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ಈಗ ಓಪನ್ ಆಗುವ ಹೊಸ ಪೇಜ್ ನಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನಿ ಫಿಲ್ ಮಾಡಿ
*ನಂತರ ನಿಮ್ಮ ಕಾಲೇಜ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಹಾಗೆ, ರಿಜಿಸ್ಟರ್ ನಂಬರ್, ಮಾರ್ಕ್ಸ್ ಕಾರ್ಡ್ ಹಾಗೂ ಈ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
*ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಹಾಕಿ
*ಕೊನೆಯದಾಗಿ ನಿಮ್ಮ ಫೋಟೋ, ಬ್ಯಾಂಕ್ ಪಾಸ್ ಬುಕ್, ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್ ಈ ಎಲ್ಲದರ ಸಾಫ್ಟ್ ಕಾಪಿಯನ್ನು 100kb ಒಳಗೆ ಇರುವ ಹಾಗೆ ಅಪ್ಲೋಡ್ ಮಾಡಬೇಕು. ಈಗ Declaration ಟಿಕ್ ಮಾಡಿ, ಅಪ್ಲಿಕೇಶನ್ Submit ಮಾಡಿ.
ಈಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿರುತ್ತದೆ. ನೀವು ತಿಳಿಸಿರುವ ಎಲ್ಲಾ ಮಾಹಿತಿ ಸರಿ ಇದ್ದು, ನೀವು ಅಪ್ಲೋಡ್ ಮಾಡಿರುವ ದಾಖಲೆಗಳು ಸರಿ ಇದ್ದರೆ ನಿಮಗೆ ಪ್ರೈಜ್ ಮನಿ ಹಣ ಸಿಗುತ್ತದೆ.
ಪ್ರಮುಖ ದಿನಾಂಕ:
15/2/2024 :- ಅರ್ಜಿ ಸಲ್ಲಿಕೆ ಶುರುವಿನ ದಿನಾಂಕ
29/2/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ನೀವು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಒಂದು ಅಧಿಕೃತ ವೆಬ್ಸೈಟ್ ನಲ್ಲಿ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿ ಓದಿ ಬಳಿಕ ಅರ್ಜಿ ಸಲ್ಲಿಸಿ.