Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

New Ration Card 2024: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ! ಅರ್ಜಿ ಸಲ್ಲಿಸಲು ಸುಲಭವಾದ 21 ಹಂತಗಳು ಇಲ್ಲಿವೆ

ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಇವುಗಳನ್ನು ರಾಜ್ಯದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಇಲಾಖೆ ಜನರಿಗೆ ನೀಡುತ್ತದೆ. ಈ ರೇಷನ್ ಕಾರ್ಡ್ ಗಳಿಂದ ಸಿಗುವ ಪ್ರಯೋಜನ ಇವು..

New Ration Card 2024: ನಮ್ಮ ದೇಶದಲ್ಲಿ ಒಂದು ಕುಟುಂಬದ ಬಡತನದ ಆಧಾರದ ಮೇಲೆ ರೇಷನ್ ಕಾರ್ಡ್ ಕೊಡಲಾಗುತ್ತದೆ. ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್. ಬಡತನದ ರೇಖೆಗಿಂತ ಮೇಲೆ ಇರುವವರಿಗೆ ಎಪಿಎಲ್ ಕಾರ್ಡ್. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಅನೇಕ ಪ್ರಯೋಜನಗಳು ಸಿಗುತ್ತದೆ. ಒಂದು ವೇಳೆ ನೀವು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ನಿಮಗಾಗಿ ಒಂದು ಗುಡ್ ನ್ಯೂಸ್ ಇದೆ, ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ..

ರೇಷನ್ ಕಾರ್ಡ್ ಪ್ರಯೋಜನಗಳು: (New Ration Card 2024)

ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಇವುಗಳನ್ನು ರಾಜ್ಯದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಇಲಾಖೆ ಜನರಿಗೆ ನೀಡುತ್ತದೆ. ಈ ರೇಷನ್ ಕಾರ್ಡ್ ಗಳಿಂದ ಸಿಗುವ ಪ್ರಯೋಜನ ಇವು..

  • ಈ ಕಾರ್ಡ್ ಪ್ರಮುಖವಾಗಿ ಬೇಕಾದ ಕಾರ್ಡ್ ಆಗಿದ್ದು, ಸರ್ಕಾರದಿಂದ ಸಿಗುವ ಎಲ್ಲಾ ವಿಶೇಷ ಅನುಕೂಲಕರ ಯೋಜನೆಗಳ ಫಲ ಸಿಗುತ್ತದೆ.
  • ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಸೌಲಭ್ಯ ಒದಗಿಸಿಕೊಡುತ್ತಿದೆ.
  • ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಲಕ್ಷ ಕೊಡಲಾಗುತ್ತಿದೆ.
  • ಬಿಪಿಎಲ್ ಕಾರ್ಡ್ ಅಂತ್ಯೋದಯ ಕಾರ್ಡ್ ಇರುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
  • ಇನ್ನಿತರ ಸೌಲಭ್ಯಗಳು ಸಿಗುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಹೊಸದಾಗಿ ರೇಶನ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಸಂಪೂರ್ಣ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ..

Apply for New Ration Card in Karnataka:

  1. ahara.kar.nic.in ಇದು ರಾಜ್ಯ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದ್ದು, ಮೊದಲು ಈ ಲಿಂಕ್ ಓಪನ್ ಮಾಡಿ.
  2. ಹೋಮ್ ಪೇಜ್ ನಲ್ಲಿ e-services ಅಥವಾ ಇ-ಸೇವೆಗಳು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  3. ಈಗ ಓಪನ್ ಆಗುವ ಹೊಸ ಪೇಜ್ ನಲ್ಲಿ ಇ-ಪಡಿತರ ಚೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  4. ಅದರ ಕೆಳಗೆ ಬರುವ ಹೊಸ ಪಡಿತರ ಚೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ
  5. ಈಗ ಹೊಸ ಪೇಜ್ ಆಗುತ್ತದೆ, ಅದು New Application for Ration Card ಎನ್ನುವ ಪೇಜ್ ಆಗಿದ್ದು, ಅಲ್ಲಿ New Ration Card Request ಎನ್ನುವ ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.
  6. ಇಲ್ಲಿ ಎರಡು ವಿವಿಧ ಆಯ್ಕೆ ಇರುತ್ತದೆ, Priority Household (PHH), Non Priority Household ಈ ರೀತಿ ಎರಡು ಆಯ್ಕೆಗಳಿದ್ದು, BPL ಕಾರ್ಡ್ ಗೆ ಅರ್ಜಿ ಸಲ್ಲಿಸುವವರು Priority Household ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. APL ಕಾರ್ಡ್ ಗೆ ಅರ್ಜಿ ಸಲ್ಲಿಸುವವರು Non Priority Household ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  7. ಮುಂದಿನ ಪೇಜ್ ನಲ್ಲಿ ಬರುವ ಎಲ್ಲಾ ಮಾಹಿತಿಯನ್ನು ಓದಿ, ಹೌದು ಅಥವಾ ಇಲ್ಲಾ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, Continue ಮಾಡಿ..
  8. ಈಗ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ, Go ಎನ್ನುವ ಆಯ್ಕೆ ಸೆಲೆಕ್ಟ್ ಮಾಡಿ.
  9. ನಿಮ್ಮ ಫೋನ್ ಗೆ ಬರುವ ಓಟಿಪಿಯನ್ನು ಎಂಟರ್ ಮಾಡಿ Go ಆಪ್ಶನ್ ಸೆಲೆಕ್ಟ್ ಮಾಡಿ
  10. ಕ್ಯಾಪ್ಚ ಕೋಡ್ ಎಂಟರ್ ಮಾಡಿ, ವೆರಿಫೈ ಮಾಡಿ
  11. ನಂತರ ಫಿಂಗರ್ ಪ್ರಿಂಟ್ ವೆರಿಫೈ ಮಾಡಿ
  12. ಈಗ ಫಿಂಗರ್ ಪ್ರಿಂಟ್ ಅನುಸಾರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಎಲ್ಲಾ ಮಾಹಿತಿ ಬರುತ್ತದೆ. ಹೆಸರು, ಫೋಟೋ, ಡೇಟ್ ಆಫ್ ಬರ್ತ್, ಎಲ್ಲವನ್ನು ನೋಡಿ ಸರಿ ಇದ್ದರೆ, Add ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
  13. ಬಳಿಕ Add Family Member ಎನ್ನುವ ಆಯ್ಕೆಯಲ್ಲಿ ನಿಮ್ಮ ಮನೆಯ ಸದಸ್ಯರ ಹೆಸರುಗಳನ್ನು ಕೂಡ ಸೇರಿಸಬಹುದು.
  14. ಬಳಿಕ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮನೆಯ ಅಡ್ರೆಸ್ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ
  15. ಬಳಿಕ ನಿಮ್ಮ ಮನೆಗೆ ಹತ್ತಿರ ಇರುವ ರೇಷನ್ ಕಾರ್ಡ್ ನ್ಯಾಯಬೆಲೆ ಅಂಗಡಿಯನ್ನು ಆಯ್ಕೆ ಮಾಡಿ
  16. ಈಗ ನೀವಿರುವುದು ನಗರ ಅಥವಾ ಗ್ರಾಮ ಎಂದು ಎರಡು ಆಯ್ಕೆ ಇರುತ್ತದೆ, ಅದನ್ನು ಆಯ್ಕೆ ಮಾಡಿ. ಬಳಿಕ ನಿಮ್ಮ ಊರು ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ. ನಂತರ Next Stage ಆಪ್ಶನ್ ಸೆಲೆಕ್ಟ್ ಮಾಡಿ.
  17. ಯಾರೆಲ್ಲರ ಹೆಸರನ್ನು ಸೇರಿಸಿದ್ದೀರೋ, ಆ ಹೆಸರುಗಳಲ್ಲಿ ಮನೆಯ ಮುಖ್ಯಸ್ಥರು ಯಾರು ಎನ್ನುವುದನ್ನು ಆಯ್ಕೆ ಮಾಡಿ, ನಂತರ Save ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
  18. ಅರ್ಜಿ ಸಲ್ಲಿಕೆ ಪ್ರತಿಯನ್ನು PDF ರೀತಿಯಲ್ಲಿ Save ಮಾಡಿ.
  19. PDF ಅನ್ನು ಪ್ರಿಂಟ್ ತೆಗೆದುಕೊಳ್ಳಿ.
  20. ಈ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು, ನಿಮ್ಮ ಮನೆಗೆ ಹತ್ತಿರ ಇರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ.
  21. ನಿಮಗೆ ಕೊಡುವ ಸ್ವೀಕೃತಿ ನಂಬರ್ ಮೂಲಕ Ration Card Status ಚೆಕ್ ಮಾಡಬಹುದು.

www.ahara.kar.nic.in ಈ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Apply Online 

The application process to get a new ration card started in 2024. Apply online

Leave a comment