ಈ ಸೃಷ್ಟಿಯಲ್ಲಿ ಮೊದಲ ದಂಪತಿಗಳು ಯಾರು ಗೊತ್ತಾ ?? ಗಂಡ ಹೆಂಡತಿ ಪದ್ಧತಿ ಪ್ರಾರಂಭವಾಗಿದ್ದು ಇಲ್ಲಿಂದಲೇ !!
Who was the first husband and wife in this creation?
ಈ ಸೃಷ್ಟಿ ಉಗಮಿಸಿದ (world creation) ಪ್ರಾರಂಭದಲ್ಲಿ ಮೊದಲು ಇದ್ದುದ್ದು ನೀರು. (water) ನಾರಾ ಎಂದರೆ ನೀರು ಎಂದರ್ಥ ನೀರಿನಿಂದ ಜನಿಸುವವರೆ ಶ್ರೀಮನ್ನಾರಾಯಣ. ಸೃಷ್ಟಿಯಲ್ಲಿ ನ ಮೊದಲ ದಂಪತಿಗಳು ಪಾರ್ವತಿ ಪರಮೇಶ್ವರರು. ಸೃಷ್ಟಿಗೆ ಮೊದಲ ಶಕ್ತಿ ಆದಿಶಕ್ತಿ ತದ್ಭವ ರೂಪ ಪಾರ್ವತಿ ಹಾಗೂ ಇನ್ನೂ ಹಲವಾರು. ಆದ್ದರಿಂದಲೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿವಾಹ ಮಾಡುವುದಕ್ಕಿಂತ ಮುಂಚೆ ಗೌರಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ.
ಸೃಷ್ಟಿಯಲ್ಲಿನ ಮೊದಲ ಮದುವೆಯ ಹೆಣ್ಣು ಗೌರಿ ದೇವಿ ಮಾತ್ರವೇ. ಶಿವಾಲಯದಲ್ಲಿ ಪರಮೇಶ್ವರರು ಲಿಂಗಾಕಾರದಲ್ಲಿ ಇರುತ್ತಾರೆ ಲಿಂಗಾಕಾರದ ಕೆಳಗಡೆ ಎಳೆಯ ರೂಪದಲ್ಲಿರುವ ಲಿಂಗವೇ ಪಾರ್ವತಿ ದೇವಿ. ಶಿವ ಮತ್ತು ಪಾರ್ವತಿಯ (Shiva and Parvati) ಏಕತ್ವ ನಿರ್ಧರ್ಶನಕ್ಕೆ ಶಿವಲಿಂಗವೇ ಆದರ್ಶ. ಶಿವನು ಇಲ್ಲದೆ ಪಾರ್ವತಿ ಅಥವಾ ಈಶ್ವರಿ ಇರುವುದಿಲ್ಲ. ಈಶ್ವರಿ ಇಲ್ಲದ ಶಿವ ಇರುವುದಿಲ್ಲ ಇರುವುದಕ್ಕೂ ಸಾಧ್ಯವೂ ಇಲ್ಲ.
ಇದೆಲ್ಲದಕ್ಕೂ ಶಿವಲಿಂಗವೆ ಸೃಷ್ಟಿಯಾ ಸ್ವರೂಪ. ಸ್ತ್ರೀ ಪುರುಷರ ಸಂಗಮವನ್ನು ಶೃಂಗಾರ ಎಂದು ಕರೆಯುತ್ತಾರೆ. ಶಿವಲಿಂಗವನ್ನು ಪೂಜೆ ಮಾಡಿದರೆ ಈಶ್ವರಿ ಈಶ್ವರರನ್ನು ಅಥವಾ ಪಾರ್ವತಿ ಪರಮೇಶ್ವರರನ್ನು ಸೃಷ್ಟಿ ಮತ್ತು ಸೃಷ್ಟಿಯ ಕಾರ್ಯಗಳನ್ನು ಅಂದರೆ ಪ್ರಕೃತಿಯನ್ನು ಶೃಂಗಾರವನ್ನು ಪೂಜಿಸಿದಂತೆ ಅರ್ಥ. ಆದ್ದರಿಂದಲೇ ಪಾರ್ವತಿಗೊಂದು (Parvathi temple) ಆಲಯ ಮತ್ತು ಪರಮೇಶ್ವರಿಗೊಂದು (Shiva temple) ಆಲಯ ಎಂದು ಬೇರೆ ಬೇರೆಯಾಗಿ ನಿರ್ಮಿಸುವುದಿಲ್ಲ.
ಅನ್ಯೂನ್ಯ ದಾಂಪತ್ಯಕ್ಕಾಗಿ ಅನುರಾಗ ತುಂಬಿದ ಸಂಸಾರಕ್ಕೆ ಶಾಶ್ವತವಾಗಿ ಜೀವಿಸಬೇಕು ಎಂದುಕೊಳ್ಳುವವರು ಶಿವಾಲಯದಲ್ಲಿರುವ ಶಿವ ಪಾರ್ವತಿಯನ್ನು ಪೂಜೆ ಮಾಡುತ್ತಾರೆ. ಶಿವ ತನ್ನ ಮಡದಿಯಾದ ಪಾರ್ವತಿ ದೇವಿಗೆ ತನ್ನ ದೇಹದಲ್ಲಿನ ಅರ್ಧ ಭಾಗವನ್ನು ಕೊಟ್ಟು ಅರ್ಧನಾರೀಶ್ವರರಾದರು. ಮನುಷ್ಯರಿಗೆ ಜೀವಿಸಲು ಲಕ್ಷ್ಮಿ ದೇವಿ ಮತ್ತು ಸರಸ್ವತಿ ದೇವಿಗಿಂತಲೂ ಪಾರ್ವತಿ ದೇವಿಯ ಅವಶ್ಯಕತೆ ಜಾಸ್ತಿ ಇರುತ್ತದೆ. ಅಂದರೆ ನೀವು ಹಣ ಮತ್ತು ವಿದ್ಯೆಯನ್ನು ಗಳಿಸಬೇಕು ಎಂದರೆ ನಿಮಗೆ ಶಕ್ತಿ ಬೇಕಾಗುತ್ತದೆ.
ಪಾರ್ವತಿ ದೇವಿಯು ಶಕ್ತಿಯ ಸ್ವರೂಪ ಮತ್ತು ಸೃಷ್ಟಿಯ ಮೂಲ. ಆದ್ದರಿಂದಲೇ ಸಾಕಷ್ಟು ವಲಯಗಳು ಪಾರ್ವತಿ ದೇವಿಯ ಆಲಯಗಳು ಆಗಿರುತ್ತವೆ. ದೇಹ ನಶಿಸಿ ನರಗಳು ನರ ದೌರ್ಬಲ್ಯವಾಗಿ ಮೇಲೆ ಹೇಳಲು ಆಗದ ಪರಿಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಬೇಕಾಗಿರುವುದು ಶಕ್ತಿ. ನಂತರ ಮೋಕ್ಷ ಪ್ರಾಪ್ತಾಪಿಸುವ ಮಹಾಸಕ್ತಿಯು ಸಹ ದೇವಿಯೇ.
ಆ ಸಾಮರ್ಥ್ಯ ಕೇವಲ ಪಾರ್ವತಿ ದೇವಿಗೆ ಮಾತ್ರ ಇದೆ. ಸೃಷ್ಟಿಯ ಅಂತ್ಯಕ್ಕೂ ಕೂಡ ಶಿವ ಪಾರ್ವತಿ ಮೂಲ ರಾಗಿರುತ್ತಾರೆ. ಅವರಿಂದ ಶುರುವಾಗಿದ್ದು ಶೃಂಗಾರ, ಅದರ ಪ್ರತಿಫಲವೇ ಸಂತಾನ ಶಿವ ಪಾರ್ವತಿ ಮಾಡುವ ಶೃಂಗಾರ ದಲ್ಲಿ ದೈವತ್ವವಿದೆ. ಆದ್ದರಿಂದ ಸೃಷ್ಟಿಯ ಮೊದಲ ದಂಪತಿಗಳು ಶಿವ ಪಾರ್ವತಿಯರು ಆಗಿರುತ್ತಾರೆ.. ಇಂದಿನ ಪೀಳಿಗೆಯ ಜನಗಳಿಗೆ ಇದರ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ, ಆದರೆ ಕೆಲವು ಪುರಾಣಗಳು ಇದು ಸತ್ಯ ಎಂದು ಸರುತ್ತವೆ ಮತ್ತು ಇದು ವಾಸ್ತವವೇ ಆಗಿದೆ.