Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ram Mandir: ರಾಮಲಲ್ಲಾ ದೇವಸ್ಥಾನಕ್ಕೆ ಹೆಚ್ಚು ಕಾಣಿಕೆ ನೀಡಿದವರು ಯಾರು? ಕಾಣಿಕೆಯ ಬೆಲೆ ಎಷ್ಟು ಕೋಟಿ?

ಅಷ್ಟೇ ಅಲ್ಲದ ಬರುವ ಭಕ್ತರು ಕಾಣಿಕೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರೆ. ಕಾಣಿಕೆಯಲ್ಲಿ ಹೆಚ್ಚು ಕಡಿಮೆ ಎಂಬುದಿಲ್ಲ. ಆದರೆ ಹೆಚ್ಚಿನ ಕಾಣಿಕೆ ನೀಡಿರುವ ಬಗ್ಗೆ ದೇವಸ್ಥಾನ ಮಂಡಳಿ ಮಾಹಿತಿ ನೀಡಿದೆ.

Ram Mandir: ರಾಮ ಮಂದಿರ 500 ವರ್ಷಗಳ ಭಾರತೀಯರ ತಪಸ್ಸು. ರಾಮನ ಬದುಕಿನ ಕಥೆ ರಾಮಾಯಣ ಭಾರತದ ಶ್ರೇಷ್ಠ ಗ್ರಂಥ. ಬದುಕುವ ನೀತಿ ಪಾಠವ ತಿಳಿಸಿದ ರಾಮ ಮಂದಿರ ಪ್ರತಿಷ್ಟಾಪನೆ ಜನವರಿ 22 2024 ರಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ದೇಶ ವಿದೇಶಗಳಿಂದ ರಾಮನ ದರುಶನಕ್ಕೆ ಜನರು ಬಂದಿದ್ದಾರೆ. ಸಾಧು ಸಂತರು, ಮಹಾನ್ ವ್ಯಕ್ತಿಗಳು, ನಾನಾ ದೇಶದ ಪ್ರಧಾನಿಗಳು ರಾಮನ ನೋಡಲು ಅಯೋಧ್ಯೆಗೆ ಬಂದಿದ್ದಾರೆ.

ಅಷ್ಟೇ ಅಲ್ಲದ ಬರುವ ಭಕ್ತರು ಕಾಣಿಕೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರೆ. ಕಾಣಿಕೆಯಲ್ಲಿ ಹೆಚ್ಚು ಕಡಿಮೆ ಎಂಬುದಿಲ್ಲ. ಆದರೆ ಹೆಚ್ಚಿನ ಕಾಣಿಕೆ ನೀಡಿರುವ ಬಗ್ಗೆ ದೇವಸ್ಥಾನ ಮಂಡಳಿ ಮಾಹಿತಿ ನೀಡಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ರಾಮನಿಗೆ 101 ಕೆ.ಜಿ ಬಂಗಾರವನ್ನು ಕಾಣಿಕೆಯ ರೂಪದಲ್ಲಿ ನೀಡಿದವರು ಯಾರು?

ಗುಜರಾತ್‌ನ ವಜ್ರದ ವ್ಯಾಪಾರಿ ಆಗಿರುವ ದಿಲೀಪ್ ಕುಮಾರ್ ವಿ ಲಖಿ (Dilip Kumar V Lakhi) ಅವರು ರಾಮನ ಮೇಲಿನ ಭಕ್ತಿಯಿಂದ 101 ಕೆ.ಜಿ ಬಂಗಾರವನ್ನು ಕಾಣಿಕೆಯ ರೂಪದಲ್ಲಿ ನೀಡಿದ್ದಾರೆ. ಇಂದಿನ ಬಂಗಾರದ ಬೆಲೆ 68,000 ರೂಪಾಯಿ ಇದೆ. ಇಂತಹ ಸಂದರ್ಭದಲ್ಲಿ ಬಂಗಾರವನ್ನು ದಾನ ಮಾಡಿರುವ ದಿಲೀಪ್ ಅವರನ್ನು ದೇಶದ ಜನರು ಕೊಂಡಾಡಿದ್ದಾರೆ.

ಇದನ್ನು ಓದಿ:- Sugriva: ರಾಮ ರಾವಣರ ಯುದ್ಧದಲ್ಲೀ ರಾಮನಿಗೆ ಸಹಾಯ ಮಾಡಿದ ಸುಗ್ರೀವನ ಬಗ್ಗೆ ನಿಮಗೆ ಗೊತ್ತೇ? ಈ ಪುಣ್ಯ ದಿನದಂದು ನಿಮಗೊಂದು ಮಾಹಿತಿ.

101 ಕೆ ಜಿ ಬಂಗಾರವನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೆ.? (Ram Mandir)

101 ಕೆ ಜಿ ಬಂಗಾರವನ್ನು ದೇವಾಲಯದ ಬಾಗಿಲಿಗೆ ಹಾಕಲಾಗಿದೆ. ಬಂಗಾರದ ತ್ರಿಶೂಲ, ಬಂಗಾರದ ಢಮರುಗ, ಹಾಗೂ ಗರ್ಭಗುಡಿ ಮುಂಭಾಗದ ಕಂಬಗಳಿಗೆ ಬಂಗಾರವನ್ನು ಹಾಕಲಾಗಿದೆ.

ಬಂಗಾರದ ರೂಪದಲ್ಲಿ , ಹಣದ ರೂಪದಲ್ಲಿ ಗರಿಷ್ಠ ಮೊತ್ತದ ಕಾಣಿಕೆ ನೀಡಿದ ದಾನಿಗಳು :-

ಗುಜರಾತ್‌ನ ಹೆಸರಾಂತ ವಜ್ರದ ವ್ಯಾಪಾರಿಯಾಗಿರುವ ಮುಖೇಶ್ ಪಟೇಲ್ (Mukhesh Patel) ಅವರು 11 ಕೋಟಿ ರೂಪಾಯಿ ಬೆಲೆಬಾಳುವ 6 ಕೆಜಿ ವಜ್ರಖಚಿತ ಕಿರೀಟವನ್ನು ಕಾಣಿಕೆಯ ರೂಪದಲ್ಲಿ ನೀಡಿದ್ದಾರೆ. ಈ ಕಿರೀಟವು ಬಂಗಾರ, ವಜ್ರ, ಅಮೂಲ್ಯ ರತ್ನದ ಕಲ್ಲುಗಳನ್ನು ಒಳಗೊಂಡಿದೆ. ಇದರ ಜೊತೆಗೆ ಸೂರತ್‌ನ ವಜ್ರದ ಉದ್ಯಮಿ ಆಗಿರುವ ಗೋವಿಂದಭಾಯ್ ಧೋಲಾಕಿಯಾ (Govindbhai Dholakia) ಅವರು 11 ಕೋಟಿ ರೂಪಾಯಿಗಳನ್ನು ಕಾಣಿಕೆ ನೀಡಿದ್ದಾರೆ.

ಇದನ್ನು ಓದಿ:- Narendra Modi: ಸುಮಾರು 32 ವರ್ಷಗಳ ಹಿಂದೆ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಮಾಡಿದ ಒಂದು ಪ್ರತಿಜ್ಞೆ ಈಗ ವೈರಲ್ ಆಗುತ್ತಿದೆ ಏನದು??

ಭಾರತದ ಹೆಸರಾಂತ ಉದ್ಯಮಿ ಮುಕೇಶ್ ಅಂಬಾನಿ (Mukhesh Ambani) 2,50,00,000 ರೂಪಾಯಿಗಳನ್ನು ಕಾಣಿಕೆಯ ರೂಪದಲ್ಲಿ ನೀಡಿದ್ದಾರೆ. 60 ವರುಷಗಳಿಂದ ವಿಶ್ವದ ನಾನಾ ಕಡೆಗಳಲ್ಲಿ ರಾಮಾಯಣ ಪ್ರಚಾರ ಮಾಡಿರುವ ಮೊರಾರಿ ಬಾಪು ಅವರು ರಾಮಮಂದಿರ ನಿರ್ಮಾಣಕ್ಕೆ 18.3 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.

ವಿದೇಶಿಗರು ನೀಡುವ ಕಾಣಿಕೆಗಳು ಏನೇನು?

ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ರಾಮ ಮಂದಿರದ ಪ್ರತಿಷ್ಠಾಪನೆಯನ್ನು ಸಂಭ್ರಮಿಸಿವೆ. ಈಗಾಗಲೇ ಹಲವು ದೇಶದ ಪ್ರಧಾನಿಗಳು ಹೆಸರಾಂತ ವ್ಯಕ್ತಿಗಳು ರಾಮ ಮಂದಿರಕ್ಕೆ ಕೋಟಿ ಕೋಟಿಗಳ ಕಾಣಿಕೆಯನ್ನು ನೀಡಿದ್ದಾರೆ. ಭಾರತದ ಮೂಲ ಪ್ರಜೆಯಾಗಿದ್ದು ವಿದೇಶದಲ್ಲಿ ವಾಸವಾಗಿರುವ ರಾಮಭಕ್ತರು 8 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.

Who gave the most donations to Ramlalla Temple?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment