Republic Day Special: ಇದೆ ಮೊದಲ ಬಾರಿಗೆ ಪ್ರಾನ್ಸ್ ದೇಶದ ನಾಲ್ವರು ಸಾಧಕರಿಗೆ ಸಿಕ್ಕಿದೆ ಭಾರತದ ಶ್ರೇಷ್ಠ ಗೌರವ ಪದ್ಮಶ್ರೀ ಪ್ರಶಸ್ತಿ, ಏನಿವರ ಸಾಧನೆ.
ಭಾರತದ ಸಾಧಕರಿಗೆ ಪ್ರಶಸ್ತಿ ಸಿಗುವುದು ಸಾಮಾನ್ಯ ಆದರೆ ವಿದೇಶಿ ಸಾಧಕರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಮಾಡಲಾಗಿದೆ.
Republic Day Special: ಭಾರತ 75 ನೇ ಗಣರಾಜ್ಯೋತ್ಸವವನ್ನ ಆಚರಿಸುತ್ತಿದೆ. ಭಾರತ ಪ್ರಜಾಪ್ರಭುತ್ವ ದೇಶ. 26-01-1950 ಸಂವಿಧಾನ ಅಂಗೀಕಾರಗೊಂಡಿತು. ಅಲ್ಲಿಂದ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸುತ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳು ಸಾಧನೆ ಮಾಡಿದ ವೀರರಿಗೆ ಪದಕ ನೀಡಿ ಸಂಭ್ರಮಿಸುತ್ತಾರೆ . ಅಂತೆಯೇ ಈ ವರ್ಷ 132 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾರತ ರತ್ನ ಪ್ರಶಸ್ತಿ ಭಾರತ ಶ್ರೇಷ್ಠ ಗೌರವ ಪ್ರಶಸ್ತಿ ಆಗಿದೆ. ಅದರ ನಂತರದ ಶ್ರೇಷ್ಠ ಗೌರವ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ (Padma Shri). ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ವಿದೇಶಿ ( International) ಸಾಧಕರಿಗೆ ಸಿಕ್ಕಿದೆ ಪದ್ಮಶ್ರೀ ಪ್ರಶಸ್ತಿ:-
ಭಾರತದ ಸಾಧಕರಿಗೆ ಪ್ರಶಸ್ತಿ ಸಿಗುವುದು ಸಾಮಾನ್ಯ ಆದರೆ ವಿದೇಶಿ ಸಾಧಕರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಮಾಡಲಾಗಿದೆ. ಫ್ರಾನ್ಸ್ ದೇಶದ ನಾಲ್ವರು ಸಾಧಕರಿಗೆ ಸನ್ಮಾನ ಪುರಸ್ಕಾರ ನೀಡಿ ಗೌರವಿಸಿದೆ.
ಫ್ರಾನ್ಸ್ ದೇಶದ ಸಾಧಕರ ಹೆಸರುಗಳು :-
1) ಚಾರ್ಲೊಟ್ಟೆ ಚೋಪಿನ್
2)ಕಿರಣ್ ವ್ಯಾಸ್
3) ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್
4) ಫ್ರೆಡ್ ನೆಗ್ರಿಟ್
ಇದನ್ನು ಓದಿ:- Ram Lalla Idol: ವೈರಲ್ ಆಗುತ್ತಿದೆ ರಾಜಸ್ಥಾನ್ ಶಿಲ್ಪಿ ಕೆತ್ತಿದ ರಾಮನ ಮೂರ್ತಿ, ಏನಿದು ಹೊಸ ಸುದ್ದಿ ?
ವಿದೇಶಿ ಸಾಧಕರ ಪರಿಚಯ :- (Republic Day Special)
1) ಚಾರ್ಲೊಟ್ಟೆ ಚೋಪಿನ್ ( Charlotte Chopin ) :- ಇವರು ವಯಸ್ಸು ನೂರು. ಯೋಗ ಸಾಧನೆ ಮಾಡಿರುವ ಇವರು 50 ನೇ ವಯಸ್ಸಿನಿಂದ ಯೋಗವನ್ನು ಮಾಡುತ್ತಾ ಬಂದಿದ್ದರು. ಯೋಗದಿಂದ ಇವರ ಆರೋಗ್ಯ ತುಂಬಾ ಚೆನ್ನಾಗಿದೆ. ಮತ್ತು ಇವರ ವಯಸ್ಸು ಹೆಚ್ಚಾದಂತೆ ಇವರಿಗೆ ಯೋಗದ ಮೇಲಿನ ಆಸಕ್ತಿ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ಫ್ರಾನ್ಸ್ ಗೆ ಹೋದಾಗ ಇವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
2)ಪಿಯೆರೆ ಸಿಲ್ವಿಯನ್ ಫಿಲಿಯೋಜಾಟ್ ( Pierre Sylvain Filliozat ) :- ಇವರು ಸಂಸ್ಕೃತ ವಿದ್ವಾಂಸರು ಮತ್ತು ಲೇಖನರು ಆಗಿದ್ದಾರೆ. ಇವರ ವಯಸ್ಸು 87. ಪ್ರಾನ್ಸ್ ದೇಶದಲ್ಲಿ ನಮ್ಮ ದೇಶದ ಸಂಸ್ಕೃತಿಯ ಅಧ್ಯಯನ ಕೇಂದ್ರವನ್ನು ಬೆಳೆಸುತ್ತಿದ್ದಾರೆ. ಇವರು ವರ್ಷದ ಅರು ತಿಂಗಳು ಫ್ರಾನ್ಸ್ ದೇಶದಲ್ಲಿ ಹಾಗೂ ಆರು ತಿಂಗಳು ಇಂಡಿಯಾ ದಲ್ಲಿ ವಾಸಿಸುತ್ತಾರೆ. ಇವರು ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್ಟಿಟ್ಯೂಟ್ ( French institute) ತೆರೆದಿದ್ದಾರೆ. ಇವರು ಶೈವ ಮತ್ತು ಆಗಮ, ಹಾಗೂ ವಿಶಿಷ್ಟಾದ್ವೈತ ಪ್ರಾಕಾರಗಳ ಅಧ್ಯಯನ ಮಾಡಿದ್ದಾರೆ.
ಇದನ್ನು ಓದಿ:- Ram Mandir: ರಾಮಲಲ್ಲಾ ದೇವಸ್ಥಾನಕ್ಕೆ ಹೆಚ್ಚು ಕಾಣಿಕೆ ನೀಡಿದವರು ಯಾರು? ಕಾಣಿಕೆಯ ಬೆಲೆ ಎಷ್ಟು ಕೋಟಿ?
3) ಕಿರಣ್ ವ್ಯಾಸ್( Kiran Vyas ) :- ಇವರು ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರು ಗುಜರಾತ್ ಮೂಲದವರು. ಇವರು ಆಯುರ್ವೇದ ಮತ್ತು ಯೋಗದ ಬಗ್ಗೆ ಹಲವಾರು ಬುಕ್ ಬರೆದಿದ್ದಾರೆ. ಫ್ರಾನ್ಸ ನಲ್ಲಿ ಆಯುರ್ವೇದ ಚಿಕಿತ್ಸೆ ನೀಡುವ ತಪೋವನ ತೆರೆದಿದ್ದಾರೆ.
4) ಫ್ರೆಡ್ ನೆಗ್ರಿಟ್ ( Fred Negrit ) :- ಭಾರತೀಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಇವರು ಸಾಕಷ್ಟು ತಿಳಿದುಕೊಂಡಿದ್ದಾರೆ. ಪ್ರಾನ್ಸ್ ದೇಶದ ಮೈನ್ ಇಂಡಾಲಜಿಸ್ಟ್ ಎಂದು ಹೆಸರುವಾಸಿ ಆಗಿದ್ದಾರೆ.
ಫ್ರಾನ್ಸ್ ದೇಶದ ಸಾಧಕರ ಜೊತೆಗೆ ಈ ವರ್ಷ ಮೆಕ್ಸಿಕೋ ದೇಶದ ಪ್ರಕಾಶ್ ಸಿಂಗ್( Prakash Singh) , ಪಪುವಾ ನ್ಯೂಗಿನಿ ದೇಶದ ಶಶೀಂಧ್ರನ್ ಮುತುವೇಲ್ (Sasindran Muthuvel) ಅವರಿಗೂ ಪದ್ಮ ಶ್ರೀ ಪ್ರಶಸ್ತಿಗಳು ಬಂದಿವೆ. ಹಾಗೂ ಫಾಕ್ಸ್ಕಾನ್ ಸಿಇಒ ಆಗಿರುವ ಯಂಗ್ ಲಿಯು ( Young liyu) ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ.
For the first time on Republic Day Special, four people from France received the Padma Shri Award.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.