Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ram Lalla Idol: ವೈರಲ್ ಆಗುತ್ತಿದೆ ರಾಜಸ್ಥಾನ್  ಶಿಲ್ಪಿ ಕೆತ್ತಿದ ರಾಮನ ಮೂರ್ತಿ,  ಏನಿದು ಹೊಸ ಸುದ್ದಿ ?

ಅರುಣ್ ಯೋಗಿರಾಜ್ ಮಾಡಿದ ವಿಗ್ರಹ ಈಗಾಗಲೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗಿದೆ. ಆದರೆ ಉಳಿದ ಇಬ್ಬರು ಕೆತ್ತಿರುವ ವಿಗ್ರಹ ಹೇಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ.

Ram Lalla Idol: ಈಗ ಇಡೀ ಭಾರತದ ಗಮನ ಅಯೋಧ್ಯೆ ಒಂದೇ ಆಗಿದೆ. 500ವರ್ಷಗಳ ಬಳಿಕ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಗೊಂಡಿರುವ ರಾಮನ ಮೂರ್ತಿಗೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ತಲೇಬಾಗಿದೆ. ಅರುಣ್ ಯೋಗಿರಾಜ್ (Arun Yogiraj) ಅವರ ಜೊತೆಗೆ ಇನ್ನಿಬ್ಬರು ಶಿಲ್ಪಿಗಳು ಸಹ ರಾಮನ ಮೂರ್ತಿಯ ಕೆತ್ತನೆಯ ಕೆಲಸವನ್ನು ಮಾಡಿದ್ದರು. ಆದರೆ ಕೊನೆಯದಾಗಿ ಫೈನಲ್ ಆಗಿದ್ದು ಮಾತ್ರ ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರದ್ದು.

ಅರುಣ್ ಯೋಗಿರಾಜ್ ಮಾಡಿದ ವಿಗ್ರಹ ಈಗಾಗಲೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗಿದೆ. ಆದರೆ ಉಳಿದ ಇಬ್ಬರು ಕೆತ್ತಿರುವ ವಿಗ್ರಹ ಹೇಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈಗ ಇನ್ನೊಂದು ವಿಗ್ರಹದ ಫೋಟೋ ವನ್ನೂ ದೇವಾಲಯದ ಟ್ರಸ್ಟ್ ಬಹಿರಂಗಪಡಿಸಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:- PM Kisan scheme: 14 ನೇ ಕಂತಿನ ಹಣ  2000 ಜಮಾ  ಯಾವಾಗ  ಆಗುತ್ತೆ , ಆಗಿಲ್ಲ ಅಂದ್ರೆ ಇಲ್ಲಿ ಒಮ್ಮೆ ಚೆಕ್ ಮಾಡಿ ನೋಡಿ.

ಇನ್ನೊಂದು ಮೂರ್ತಿ ಮಾಡಿದವರು ಯಾರು ? (Ram Lalla Idol)

ಆಯ್ಕೆಯಾದ ಮೂರ್ತಿಯನ್ನು ಬಿಟ್ಟು ಉಳಿದ ಇನ್ನೆರಡು ಮೂರ್ತಿಗಳ ಬಗ್ಗೆ ಯಾವುದೇ ಮಾಹಿತಿ ದೊರಕಿರಲಿಲ್ಲ . ಈಗ ಇನ್ನೊಂದು ಫೋಟೋ ಬಿಡುಗಡೆ ಆಗಿದೆ. ಅದನ್ನು ಈಗ ದೇವಾಲಯದ ಟ್ರಸ್ಟ್ ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಇದೆ. ಇದು ಬಿಳಿ ಬಣ್ಣದ ಶಿಲೆಯಿಂದ ಕೆತ್ತಿದ ಮೂರ್ತಿಯಾಗಿದ್ದು, ಇದನ್ನು ರಾಜಸ್ಥಾನದ ಜೈಪುರದ ನಿವಾಸಿ ಸತ್ಯನಾರಾಯಣ ಪಾಂಡೆ (Sathya Narayana Pandey) ಅವರು ಮಾಡಿದ್ದಾರೆ. ಇದು ಬಿಳಿ ಮಕ್ರಾನಾ ಅಮೃತಶಿಲೆಯಿಂದ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಇನ್ನೊಂದು ಮೂರ್ತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ಮೂರ್ತಿಯನ್ನು ಕರ್ನಾಟಕದವರೇ ಆದ ಗಣೇಶ್ ಭಟ್ (Ganesh Bhat) ಅವರು ಮಾಡಿದ್ದಾರೆ.

ಸತ್ಯನಾರಾಯಣ ಪಾಂಡೆ ಅವರು ತಯಾರಿಸಿದ ವಿಗ್ರಹ ಹೇಗಿದೆ?

  • ಇವರು ನಿರ್ಮಿಸಿರುವ ರಾಮನ ಮೂರ್ತಿ ಬಿಳಿ ಬಣ್ಣದ್ದಾಗಿದೆ
  • ರಾಮನ ಪಾದದ ಒಂದು ಕಡೆಯಲ್ಲಿ ಹನುಮಂತನನ್ನು ಇನ್ನೊಂದು ಕಡೆಯಲ್ಲಿ ಗರುಡ ಇದ್ದಾನೆ.
  • ಮೂರ್ತಿಯ ಸುತ್ತ ಇರುವ ಪ್ರಭವಳಿಯ ಸುತ್ತ ವಿಷ್ಣುವಿನ 10ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ,
    ನರಸಿಂಹ, ವಾಮನ್, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಯ ಕೆತ್ತನೆಯನ್ನು ಕಾಣಬಹುದು.

Garib Kalyana Yojana: ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ಕೊಡುತ್ತಿರುವ ಸರ್ಕಾರ, ಇನ್ನು 5 ವರ್ಷ ನೀವು ಬೇಡ ಎಂದರು ಉಚಿತ ಅಕ್ಕಿ ಸಿಗಲಿದೆ, ಹೊಸ ನಿರ್ಧಾರ ಏನಿದೆ ತಿಳಿಯಿರಿ.

ಅರುಣ್ ಯೋಗಿರಾಜ್ ಅವರ ಬಗ್ಗೆ ಒಂದಿಷ್ಟು ಕುತೂಹಲಕಾರಿ ವಿಷಯಗಳು :-

ಅರುಣ್ ಯೋಗಿರಾಜ್ ಅವರು ಮೂಲತಃ ಮೈಸೂರಿನವರು. ಅವರ ಇಡೀ ಕುಟುಂಬ ಕಲೆಗೆ ಮೀಸಲಾಗಿದೆ. ಅವರ ತಂದೆ ಮತ್ತು ಅಜ್ಜ ಮೂರ್ತಿ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದರು. ಇವರು ಎಂಬಿಎ ಪದವಿ ಪಡೆದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಆದರೆ ಶಿಲ್ಪಕಲೆ ಅವರನ್ನು ಕೈ ಬೀಸಿ ಕರೆಯಿತು. ಈಗಾಗಲೇ ಇವರು ಹಲವು ಪ್ರಸಿದ್ಧ ದೇವಾಲಯಗಳ ಮೂರ್ತಿ ಕೆತ್ತನೆಯನ್ನು ಮಾಡಿದ್ದಾರೆ.

ಕೇದಾರನಾಥದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಶಿಲ್ಪ ಮಾಡಿದ ಶಿಲ್ಪಿ ಅರುಣ್ ಯೋಗರಾಜ್ ಅವರೇ ಆಗಿದ್ದಾರೆ. ದೆಹಲಿಯ ಸುಭಾಷ್ ಚಂದ್ರ ಬೋಸ್ ಅವರ 30-ಅಡಿ ಪ್ರತಿಮೆ ಸಹ ಇವರ ಕೈಯಲ್ಲಿ ಮೂಡಿ ಬಂದಿರುವ ಕಲಾಕೃತಿ. ಈ ಎಲ್ಲಾ ಕೆತ್ತನೆಯನ್ನು ಗುರುತಿಸಿ ಇವರಿಗೆ ರಾಮನ ಮೂರ್ತಿ ಕೆತ್ತುವ ಕಾರ್ಯವನ್ನು ರಾಮ ಮಂದಿರ ಟ್ರಸ್ಟ್ ನೀಡಿತ್ತು.

A statue of Ram Lalla Idol, sculpted by a Rajasthani sculptor, is going viral

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment