Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Akrama Sakrama Yojana: ಸರ್ಕಾರ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಗುಡ್ ನ್ಯೂಸ್, ಇನ್ಮುಂದೆ ಆ ಜಾಗಕ್ಕೆ ನೀವೇ ಓನರ್, ಉಳುವವನೇ ಭೂಮಿಯ ಒಡೆಯ ಮಾತು ಕೊನೆಗು ನಿಜ ಆಯ್ತು. 

ಜನರು ಅತಿಯಾಸೆ ಇಂದ ತಮ್ಮ ಬಳಿ ಭೂಮಿ ಇದ್ದರು ಮತ್ತೆ ಅಪ್ಲೈ ಮಾಡಿರುತ್ತಾರೆ. ಬೇರೆ ರಾಜ್ಯದವರಾಗಿದ್ದರು ಯೋಜನೆಗೆ ಅಪ್ಲೈ ಮಾಡಿರುತ್ತಾರೆ.

Akrama Sakrama Yojana: ನಮ್ಮ ದೇಶದಲ್ಲಿ ಅತಿಹೆಚ್ಚು ಶ್ರಮವಹಿಸಿ ಕೆಲಸ ಮಾಡುವವರು ಅಂದ್ರೆ ರೈತರು. ಆದರೆ ರೈತರಿಗೆ ಒಳ್ಳೆಯ ಸಂಪಾದನೆ ಇರುವುದಿಲ್ಲ ಎನ್ನುವುದು ಬೇಸರದ ವಿಚಾರ. ಹಲವರ ಬಳಿ ಸ್ವಂತ ಭೂಮಿ ಕೂಡ ಇಲ್ಲ, ಸರ್ಕಾರದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು ಸಹ, ತಮ್ಮದೇ ಆದ ಭೂಮಿ ಇರಬೇಕು ಎಂದುಕೊಂಡಿದ್ದು ಇದೆ.

ಅಂಥವರಿಗೆ ಇದೀಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನು ಎಂದರೆ ರೈತರು ಕೃಷಿ ಮಾಡುತ್ತಿರುವುದು ಸರ್ಕಾರದ ಭೂಮಿಯಲ್ಲಾದರೆ ಅದನ್ನು ಅವರ ಸ್ವಂತವಾಗಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಅಕ್ರಮ ಸಕ್ರಮ, ಬಗರ್ ಹುಕುಂ ಯೋಜನೆ – Akrama Sakrama Yojana:

ಈ ಎರಡು ಯೋಜನೆಗಳ ಅನುಸಾರ ಸರ್ಕಾರವು ಅರ್ಹತೆ ಹೊಂದಿರುವ ರೈತರಿಗೆ ಅವರು ಕೆಲಸ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಅವರ ಹೆಸರಿಗೆ ಹಕ್ಕುಪತ್ರದ ಮೂಲಕ ವರ್ಗಾವಣೆ ಮಾಡುತ್ತದೆ ಎಂದು ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ. ಸ್ವಂತ ಭೂಮಿ ಇಲ್ಲದ ರೈತರಿಗೆ ಈ ಯೋಜನೆಯನ್ನು ಜಾರಿಗೆ ತಂದು, ಸ್ವಲ್ಪವು ಭೂಮಿ ಇಲ್ಲದವರಿಗೆ ಭೂಮಿ ನೀಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯಲ್ಲಿ ಆಯ್ಕೆಯಾದವರಿಗೆ, ಹಕ್ಕು ಪತ್ರ ನೀಡಲಾಗುತ್ತದೆ.

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಮೋಸಕ್ಕೆ ಕಡಿವಾಣ:

ಜನರು ಅತಿಯಾಸೆ ಇಂದ ತಮ್ಮ ಬಳಿ ಭೂಮಿ ಇದ್ದರು ಮತ್ತೆ ಅಪ್ಲೈ ಮಾಡಿರುತ್ತಾರೆ. ಬೇರೆ ರಾಜ್ಯದವರಾಗಿದ್ದರು ಯೋಜನೆಗೆ ಅಪ್ಲೈ ಮಾಡಿರುತ್ತಾರೆ. ಇಂಥ ಮೋಸಗಳನ್ನು ತಡೆಯಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ಅರ್ಹತೆ ಇರುವ ರೈತರಿಗೆ ಮಾತ್ರ ಹಕ್ಕು ಪತ್ರ ಸಿಗುತ್ತದೆ.

ಇನ್ಮುಂದೆ ಎಲ್ಲವೂ ಡಿಜಿಟಲ್:

ಒಬ್ಬ ರೈತನು ಜಮೀನು ಇದ್ದರು, ಮತ್ತೆ ಅಪ್ಲೈ ಮಾಡಿ ಮೋಸ ಮಾಡುವವರ ಸಂಖ್ಯೆ ಕಡಿಮೆ ಮಾಡಲು ಈಗ ಎಲ್ಲವನ್ನು ಡಿಜಿಟಲ್ ಮಾಡಲಾಗುತ್ತಿದೆ. ಹಕ್ಕುಪತ್ರವನ್ನು ಅರ್ಹ ರೈತೆರಿಗೆ ಮಾತ್ರ ಕೊಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಹಾಗಾಗಿ ಡಿಜಿಟಲ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ತಿಳಿಸಾಗಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳೇ ಹೆದರಿಸಿದರು, ಈ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ಅರ್ಹ ರೈತರನ್ನು ಪತ್ತೆ ಹಚ್ಚಲು ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ರೈತ ಅರ್ಜಿ ಹಾಕಿರುವ ಜಾಗಕ್ಕೆ ಅಧಿಕಾರಿಗಳು ಭೇಟಿ ನೀಡಿ, ಹಕ್ಕುಪತ್ರ ಪಡೆಯಲು ಆ ರೈತನಿಗೆ ಅರ್ಹತೆ ಇದೆಯಾ ಎಂದು ಸ್ಥಳಕ್ಕೆ ಹೋಗಿ ಚೆಕ್ ಮಾಡಬೇಕು. ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳಬೇಕು. ನಂತರ ರೈತರಿಂದ ಆನ್ಲೈನ್ ಮೂಲಕ ತಿಳಿದುಕೊಳ್ಳಬೇಕು. ಎಲ್ಲವು ಸರಿ ಇದ್ದರೆ ಮಾತ್ರ, ಅವರಿಗೆ ಹಕ್ಕುಪತ್ರ ನೀಡಬೇಕು.

ಬಹಳ ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಮಾತ್ರ ಹಕ್ಕುಪತ್ರ ಸಿಗುತ್ತದೆ. ಹಕ್ಕುಪತ್ರ ಪಡೆಯಲು ರೈತರ ಬಳಿ ಕೆಲವು ಮುಖ್ಯವಾದ ಡಾಕ್ಯುಮೆಂಟ್ ಗಳು ಅವುಗಳೆಲ್ಲಾ ಸರಿ ಇದ್ದರೆ, ನಿಮಗೆ ಖಂಡಿತವಾಗಿ ಹಕ್ಕು ಪತ್ರ ಸಿಗುತ್ತದೆ. ಆ ಜಮೀನು ನಿಮ್ಮದೆ ಆಗುತ್ತದೆ.

Akrama Sakrama Yojana: Good news for farmers farming on government land

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment