Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruhalakshmi: ಗೃಹ ಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದವರಿಗೆ  ಪರಿಹಾರ ಸೂಚಿಸಿದೆ ರಾಜ್ಯ ಸರ್ಕಾರ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಮೊದಲು ನಿಮ್ಮ ಬ್ಯಾಂಕ್ ಗೆ ಹೋಗಿ ಆಧಾರ್ ಸೀಡಿಂಗ್ ಮಾಡಿಸಬೇಕು .

Gruhalakshmi: ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಆರಂಭವಾಗಿ ಆರು ತಿಂಗಳು ಕಳೆದಿವೆ. ಆದರೂ ಸಹ ಕೆಲವರಿಗೆ ತಾಂತ್ರಿಕ ದೋಷದಿಂದ ಹಣ ಬಂದಿಲ್ಲ. ಕೆಲವು ಜನರಿಗೆ ಒಂದು ಕಂತಿನ ಹಣ ಬಿಟ್ಟು ಉಳಿದ ನಾಲ್ಕು ಕಂತಿನ ಹಣವೂ ಬಂದಿಲ್ಲ. ಮತ್ತೆ ಹೋಗಿ ಅರ್ಜಿ ಸಲ್ಲಿಸಿದರು ಹಣ ಬರುತ್ತಿಲ್ಲ ಎಂದು ನಿರಾಶೆ ಆಗಿದ್ದರೆ ನಿಮಗೆ ಕೆಲವು ಸಣ್ಣ ಪುಟ್ಟ ವಿಧಾನಗಳನ್ನು ಸರ್ಕಾರ ತಿಳಿಸಿದೆ. ಹಾಗಾದರೆ ಗೃಹ ಲಕ್ಷ್ಮಿ ಯೋಜನೆಯ ಬಾಕಿ ಹಣ ಬಾರದೆ ಇದ್ದರೆ ಏನು ಮಾಡ್ಬೇಕು ಎಂದು ಈಗ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬರುತ್ತಿಲ್ಲ ?

ಹಲವಾರು ಜನರಿಗೆ ಈಗಾಗಲೇ 5 ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕೆಲವರ ಖಾತೆಗೆ ಒಂದು ಕಂತಿನ ಹಣ ವರ್ಗಾವಣೆ ಆಗಿಲ್ಲ. ಅದಕ್ಕೆ ಕಾರಣ ಏನೆಂದರೆ

  • ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ Ekyc ಮಾಡಿಸದೆ ಇದ್ದಲ್ಲಿ
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ
  • ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ನೀಡದೆ ಇದ್ದರೆ ಅಥವಾ ತಪ್ಪಾದ ಮಾಹಿತಿಯನ್ನು ನೀಡಿದ್ದರೆ
  • ಯಾವುದಾದರೂ ಟೆಕ್ನಿಕಲ್ ಇಶ್ಯೂ ( Technical issue) ಇದ್ದರೆ

5 ನೇ ಕಂತಿನ ಹಣ ಬಂದಿಲ್ಲ ಎಂದರೆ ಏನು ಮಾಡಬೇಕು?

1. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಮೊದಲು ನಿಮ್ಮ ಬ್ಯಾಂಕ್ ಗೆ ಹೋಗಿ ಆಧಾರ್ ಸೀಡಿಂಗ್ ಮಾಡಿಸಬೇಕು .

2. ಹತ್ತಿರದ ಪೋಸ್ಟ್ office ನಲ್ಲಿ ಒಂದು ಖಾತೆಯನ್ನು ತೆರೆದು ಅದಕ್ಕೆ ಗೃಹಲಕ್ಷ್ಮಿ ಖಾತೆಯ ಹಣ ಬರುವಂತೆ ಮಾಡಬಹುದು. ಪೋಸ್ಟ್ office ಖಾತೆಗೆ ಯಾವುದೇ ತೊಂದ್ರೆ ಇಲ್ಲದೆಯೇ ಹಣ ವರ್ಗಾವಣೆ ಆಗುತ್ತದೆ.

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣವನ್ನು ಪಡೆಯುವುದು ಹೇಗೆ?

ಒಂದು ಕಂತಿನ ಹಣವೂ ಜಮಾ ಆಗದೆ ಇದ್ದರೆ ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಶನ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಖಾತೆ ಹಾಗೂ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಪಡೆದಿರುವ ಸ್ವೀಕೃತಿ ಪತ್ರವನ್ನು ನೀಡಿ ನಿಮಗೆ ಹಣ ಬಾರದೆ ಇರುವುದು ಏಕೆ ಎಂದು ವಿಚಾರಿಸಿ. ನಿಮಗೆ ಯಾವ ಸಮಸ್ಯೆಯಿಂದಾಗಿ ನಿಮಗೆ ಹಣ ಬರುತ್ತಿಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಹಾಗೂ ನಿಮಗೆ ಎಲ್ಲ ಕಂತಿನ ಹಣ ಹೇಗೆ ಪಡೆಯುವುದು ಎಂಬ ಮಾಹಿತಿಯನ್ನು ಪಡೆಯಲು ಸಾಧ್ಯ.

ಸಿ ಡಿ ಪಿ ಓ ಕಚೇರಿಯಲ್ಲಿ (CDPO Office) ನಿಮ್ಮ ಅರ್ಜಿಯ ಅನುಮೋದನೆ ಆಗದೆ ಇದ್ದರೆ ಅದರ ಪ್ರಕ್ರಿಯೆ ಏನಿದೆ ಎಂದು ತಿಳಿದು ಪೂರ್ಣಗೊಳಿಸಿ ತದನಂತರ ನಿಮ್ಮ ಬ್ಯಾಂಕ್ ಅಕೌಂಟ್ ಗೆ Ekyc ಮಾಡಿಸಿ ನಿಮ್ಮ ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಪಡೆಯಬಹುದು.

A new update for Gruha Lakshmi’s pending amount

GramaOne Registration: ನಿಮ್ಮ ಊರಲ್ಲಿ ನೀವೇ ಗ್ರಾಮ ಒನ್ ಕಚೇರಿ ತೆರೆಯಲು ಅವಕಾಶ ನೀಡಿದೆ ಸರ್ಕಾರ! ಕೂಡಲೇ ಅರ್ಜಿ ಸಲ್ಲಿಸಿ

Leave a comment