Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

KPSC Recruitment 2024: ಕೆಪಿಎಸ್‌ಸಿ ಅಲ್ಲಿ ಖಾಲಿ ಇರುವ 264 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ.

ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12ನೇ ತರಗತಿ (ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ)

Get real time updates directly on you device, subscribe now.

KPSC Recruitment 2024: ಕೆಪಿಎಸ್‌ಸಿ 264 ಭೂಮಾಪಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು 10/4/2024 ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಉಳಿಕೆ ಮೂಲ ವೃಂದ 264 ಗ್ರೂಪ್-ಸಿ ಭೂಮಾಪಕರ 264 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 23,500-47,650 ರೂ.ಗಳ ವೇತನ ಸಿಗಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 21/7/2024 ಮತ್ತು ಕನ್ನಡ ಪರೀಕ್ಷೆಯನ್ನು 20/7/2024 ರಂದು ನಡೆಸಲಾಗುವುದು ಎಂದು ತಾತ್ಕಾಲಿಕವಾಗಿ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು : KPSC Recruitment 2024

ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12ನೇ ತರಗತಿ (ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ) ಇವುಗಳಲ್ಲಿ:ವಿಜ್ಞಾನ ವಿಷಯವನ್ನು ಪಡೆದು,ಗಣಿತ ವಿಷಯದಲ್ಲಿ ಶೇ 60ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆಯ ಪದವಿ ಪೂರ್ವ ಡಿಪ್ಲೋಮಾದಲಿ ಉತ್ತೀರ್ಣರಾಗಿರುವವರು. ಮತ್ತು ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐ.ಟಿ.ಐ, ಇನ್ ಸರ್ವೆ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರುವವರು.

Also Read: Job News : ನಿಮ್ಮ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ತುಂಬಿಸುವ ಕೆಲಸಗಳು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕನಿಷ್ಠ ವಯೋಮಿತಿ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: 18 ವರ್ಷ

ಗರಿಷ್ಠ ವಯೋಮಿತಿ:

ಸಾಮಾನ್ಯ ಅರ್ಹತೆ: 35 ವರ್ಷ

ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ): 38 ವರ್ಷ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1: 40 ವರ್ಷ

ಅರ್ಜಿ ಸಲ್ಲಿಸುವವರು ಇದನ್ನು ಗಮನಿಸಲೇಬೇಕು:

*ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ನಿಗದಿತ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಬಾರದು.

*ಗರಿಷ್ಠ ವಯೋಮಿತಿಯಲ್ಲಿ ಸಡಿಲತೆಗಳಿವೆ:

*ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ

*ಪ್ರವರ್ಗ-1 ರ ಅಭ್ಯರ್ಥಿಗಳಿಗೆ 3 ವರ್ಷ

*ಮಾಜಿ ಸೈನಿಕರಿಗೆ 5 ವರ್ಷ (ಸೇವಾ ಅವಧಿಯನ್ನು ಗರಿಷ್ಠ ವಯೋಮಿತಿಯಲ್ಲಿ ಸೇರಿಸಲಾಗುವುದು)

*ಭಾರತೀಯ ಸಂವಿಧಾನದ 341 (1) ರ ಅಡಿಯಲ್ಲಿ ಉದ್ಯೋಗದಲ್ಲಿರುವ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷ

ಅರ್ಜಿ ಶುಲ್ಕದ ಬಗ್ಗೆ ಮಾಹಿತಿ:

ಯಾರು ಎಷ್ಟು ಶುಲ್ಕ ಪಾವತಿಸಬೇಕು:

*ಸಾಮಾನ್ಯ ವರ್ಗ: ರೂ. 600
*ಪ್ರವರ್ಗ 2(ಎ), 2(ಬಿ), 3(ಎ), 3(ಬಿ): ₹300
*ಮಾಜಿ ಸೈನಿಕರು: ರೂ. 50
*ಎಸ್‌ಸಿ/ಎಸ್‌ಟಿ, ಪ್ರವರ್ಗ-1, ಅಂಗವಿಕಲರು: ಶುಲ್ಕ ವಿನಾಯಿತಿ

ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ.
*ಕೆಪಿಎಸ್‌ಸಿ ನಡೆಸುವ ಇತರ ಪರೀಕ್ಷೆಗಳಿಗೆ ಈ ಶುಲ್ಕವನ್ನು ಬಳಸಲು ಸಾಧ್ಯವಿಲ್ಲ.
*ಶುಲ್ಕ ಪಾವತಿಸದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಶುಲ್ಕ ಪಾವತಿಸುವ ವಿಧಾನಗಳು:

*ನೆಟ್ ಬ್ಯಾಂಕಿಂಗ್
*ಡೆಬಿಟ್ ಕಾರ್ಡ್
*ಕ್ರೆಡಿಟ್ ಕಾರ್ಡ್
*ಯುಪಿಐ

ಈ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ನಿಯಮಗಳು ಮತ್ತು ನಿರ್ದೇಶನಗಳನ್ನು ಓದಿ ಅರ್ಥಮಾಡಿಕೊಳ್ಳಿ.ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳಾದರೆ ಅವುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.ಆಯೋಗವು ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸುವುದಿಲ್ಲ.ನಿಮ್ಮ ವಿಳಾಸ ಬದಲಾದರೆ, ಲಿಖಿತ ಮೂಲಕ ಆಯೋಗಕ್ಕೆ ತಿಳಿಸಿ.ಈ ಅಧಿಸೂಚನೆಯ ಕುರಿತು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೇಂದ್ರ ಕಛೇರಿಯ ಮಾಹಿತಿ ಕೇಂದ್ರವನ್ನು ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ:

*ವೆಬ್‌ಸೈಟ್: https://kpsc.kar.nic.in/
*ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ: 080-30574957/ 30574901

Also Read: Google Courses: ಅಲ್ಲಿ ಇಲ್ಲಿ ಕೋರ್ಸ್ ಕಲಿಯಲು ಹೋಗಿ ಮೋಸ ಹೋಗಬೇಡಿ, ಮನೆಯಲ್ಲಿ ಕುಳಿತು ಈ ಕೋರ್ಸ್ ಗಳನ್ನು  ಕಲಿತು, ಲಕ್ಷ ಲಕ್ಷ ಸಂಪಾದಿಸಿ.

 

Get real time updates directly on you device, subscribe now.

Leave a comment