KEA KUWSDB Recruitment 2024: ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ!
ನೇಮಕಾತಿ ಸಂಸ್ಥೆ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
KEA KUWSDB Recruitment 2024: ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್, ರಾಜ್ಯದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಪ್ರಸ್ತುತ ಖಾಲಿ ಇರುವ ಸಹಾಯಕ ಇಂಜಿನಿಯರ್ (ಸಿವಿಲ್) ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್ ಸಿ) ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಅರ್ಜಿ ಸಲ್ಲಿಕೆ ಫೆಬ್ರವರಿ 10 ರಿಂದ ಶುರುವಾಗುತ್ತದೆ. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು
KEA KUWSDB Recruitment:
ನೇಮಕಾತಿ ಸಂಸ್ಥೆ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
- ಹುದ್ದೆಯ ಹೆಸರು: ವಿವಿಧ ಹುದ್ದೆಗಳು
- ಖಾಲಿ ಇರುವ ಹುದ್ದೆಗಳ ಸಂಖ್ಯೆ: 64
- ಕೆಲಸದ ಸ್ಥಳ: ಕರ್ನಾಟಕ
- ಅರ್ಜಿ ಸಲ್ಲಿಕೆ: ಆನ್ಲೈನ್ ಪ್ರಕ್ರಿಯೆ
ಹುದ್ದೆಗಳ ಮಾಹಿತಿ:
ಸಹಾಯಕ ಇಂಜಿನಿಯರ್ (ಸಿವಿಲ್) : 50 ಹುದ್ದೆಗಳು
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ) : 14 ಹುದ್ದೆಗಳು
ಪ್ರಮುಖ ದಿನಾಂಕಗಳು:
- 5/2/2024: ಅಧಿಸೂಚನೆ ಪ್ರಕಟಣೆ ಆಗಿರುವ ದಿನಾಂಕ
- 10/2 2024: ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ
- 10/3/2024: ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
- 14/3/2024: ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ
ಶೈಕ್ಷಣಿಕ ಅರ್ಹತೆ:
ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಿದ್ಯಾರ್ಹತೆ ಎಂದರೆ..
ಸಹಾಯಕ ಇಂಜಿನಿಯರ್ (ಸಿವಿಲ್) : BE/BTech ಆಗಿರಬೇಕು
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ) : Bcom ಆಗಿರಬೇಕು
ವಯಸ್ಸಿನ ಮಿತಿ:
ಅಧಿಸೂಚನೆಯ ಅನುಸಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಮಿನಿಮಮ್ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಬಗ್ಗೆ ನೋಡುವುದಾದರೆ..
ಸಾಮಾನ್ಯ ವರ್ಗದವರಿಗೆ 35 ವರ್ಷ
ಪ್ರವರ್ಗ 2A, 2B, 3A, 3B ವರ್ಗದವರಿಗೆ 38 ವರ್ಷ
SC/ST ಪ್ರವರ್ಗ1 ವರ್ಗದವರಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ:
ಅಧಿಸೂಚನೆಯ ಅನುಸಾರ ನಿಗದಿ ಆಗಿರುವ ವೇತನ ಶ್ರೇಣಿ ಇದು..
ಸಹಾಯಕ ಇಂಜಿನಿಯರ್ (ಸಿವಿಲ್) : ₹43,100 ಇಂದ ₹83,900 ರೂಪಾಯಿ ಆಗಿರುತ್ತದೆ.
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ) : ₹27,650 ಇಂದ ₹52.650 ರೂಪಾಯಿ ಆಗಿರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಮತ್ತು ಪ್ರವರ್ಗ 2A, 2B, 3A, 3B ವರ್ಗದವರಿಗೆ 750 ರೂಪಾಯಿ ಅರ್ಜಿ ಶುಲ್ಕ
SC/ST ಪ್ರವರ್ಗ1 ವರ್ಗದವರಿಗೆ 500 ರೂಪಾಯಿ ಅರ್ಜಿ ಶುಲ್ಕ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು..
ಮೊದಲಿಗೆ https://cetonline.karnataka.gov.in/kea/indexnew ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಇಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ.
- ಎಲ್ಲಾ ದಾಖಲೆಗಳ ಸಾಫ್ಟ್ ಕಾಪಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ
- ಅಪ್ಲಿಕೇಶನ್ ಕಾಪಿ ಪ್ರಿಂಟ್ ತೆಗೆದುಕೊಳ್ಳಿ.
ಅಧಿಕೃತ ಅಧಿಸೂಚನೆ ಪಿಡಿಎಫ್: Click here to Download
KEA KUWSDB Recruitment 2024: Apply online