Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಂತಾ? ಇಲ್ಲಿವೆ ನೋಡಿ ಸ್ಟೇಟಸ್ ಚೆಕ್ ಮಾಡಲು ಸುಲಭವಾದ 10 ಹಂತಗಳು.
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ನೀವು ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲೇ ಕೂತು ನಿಮ್ಮ ಫೋನ್ ನಲ್ಲಿ ಡಿಬಿಟಿ ಕರ್ನಾಟಕ ಆಪ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
Gruha Lakshmi Scheme: ರಾಜ್ಯ ಸರ್ಕಾರ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ₹2000 ರೂಪಾಯಿಗಳು ಅವರ ಅಕೌಂಟ್ ಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಈಗಾಗಲೇ 5 ಕಂತುಗಳ ಹಣ ವರ್ಗಾವಣೆ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 6ನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಈ ವೇಳೆ ನೀವು ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಬರುತ್ತೋ ಇಲ್ಲವೋ ಎಂದು ತಿಳಿಯಲು ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ..
Gruha Lakshmi Scheme Status Check:
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ನೀವು ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲೇ ಕೂತು ನಿಮ್ಮ ಫೋನ್ ನಲ್ಲಿ ಡಿಬಿಟಿ ಕರ್ನಾಟಕ ಆಪ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ..
ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಇಂದ ಡಿಬಿಟಿ ಕರ್ನಾಟಕ ಆಪ್ ಇನ್ಸ್ಟಾಲ್ ಮಾಡಿ
ಹಂತ 2: ಆಪ್ ಗೆ Login ಆಗಲು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, OTP ಪಡೆಯಿರಿ.
ಹಂತ 3: ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಂಬರ್ ಗೆ ಬರುವ OTP ನಮೂದಿಸಿ, verify OTP ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 4: ಇಲ್ಲಿ ನೀವು ನಿಮ್ಮ ಪರ್ಸನಲ್ ಡೀಟೇಲ್ಸ್ ಕಾಣುತ್ತದೆ. ಜೊತೆಗೆ. ಫೋನ್ ನಂಬರ್ ಎಂಟರ್ ಮಾಡಬೇಕು ಎನ್ನುವ ಆಯ್ಕೆ ಇರುತ್ತದೆ, ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಹಾಕಿ, ಓಕೆ ಸೆಲೆಕ್ಟ್ ಮಾಡಿ.
ಹಂತ 5: ಈಗ ಅಲ್ಲಿ ಕಾಣುವ Create mPIN ಆಯ್ಕೆಯ ಮೂಲಕ ಹೊಸದಾಗಿ 4 ಅಂಕಿಗಳ ಪಿನ್ ನಂಬರ್ ಕ್ರಿಯೆಟ್ ಮಾಡಿ. ಬಳಿಕ Submit ಮಾಡಿ.
ಹಂತ 6: ಈಗ Select Beneficiary ಎನ್ನುವ ಆಯ್ಕೆ ನೋಡುತ್ತೀರಿ, ಇಲ್ಲಿ ನೀವು ಸೇರಿಸಿರುವ ಫಲಾನುಭವಿಯನ್ನು ಸೆಲೆಕ್ಟ್ ಮಾಡಿ.
ಹಂತ 7: ಬಳಿಕ mPIN ನಂಬರ್ ಹಾಕಿ, login ಮಾಡಿ.
ಹಂತ 8: ಇಲ್ಲಿ ಕಾಣುವ Payment Status ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 9: ಇಲ್ಲಿ Gruhalakshmi DBT Check ಎನ್ನುವ ಆಯ್ಕೆ ಕಾಣುತ್ತದೆ.
ಹಂತ 10: ಅದನ್ನು ಸೆಲೆಕ್ಟ್ ಮಾಡಿದರೆ, ನಿಮ್ಮ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ತಿಂಗಳ ಹಣ ಯಾವಾಗ ಬಂದಿದೆ ಎನ್ನುವುದರ ಪೂರ್ತಿ ಮಾಹಿತಿ ಸಿಗುತ್ತದೆ. ಈ ಮೂಲಕ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
Gruha Lakshmi Scheme Status Check