Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Agniveer Job Notification 2024: ಭಾರತೀಯ ಸೇನಾ ನೇಮಕಾತಿ ಆರಂಭ! 10ನೇ ತರಗತಿ ಪಾಸ್ ಆದವರಿಗೆ ಕೆಲಸ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಅಗ್ನಿವೀರ್ ಶ್ರೇಣಿಯ ಹುದ್ದೆಗಳಲ್ಲಿ ಸುಮಾರು 3500 ಹುದ್ದೆಗಳು ಖಾಲಿ ಇದೆ. ಈ ಹುದ್ದೆಯ ನೇಮಕಾತಿ ಪ್ರಕ್ರಿಯೆ 3 ವಿವಿಧ ಹಂತಗಳಲ್ಲಿ ನಡೆಯಲಿದೆ..ಅವು ಯಾವುವು ಎಂದರೆ..

Agniveer Job Notification 2024: ಇಂಡಿಯನ್ ಆರ್ಮಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ನೇನಾ ನೇಮಕಾತಿ ಶುರುವಾಗಿದ್ದು, 10ನೇ ತರಗತಿ ಪಾಸ್ ಆಗಿರುವವರಿಗೆ ಅನೇಕ ಪೋಸ್ಟಿಂಗ್ ಖಾಲಿ ಇದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವವರು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

2024ರ ಅಗ್ನಿವೀರ್ ನೇಮಕಾತಿ:

ಇಂಡಿಯನ್ ಏರ್ ಫೋರ್ಸ್ (Indian Air Force) ನಲ್ಲಿ ಪ್ರಸ್ತುತ ಖಾಲಿ ಇರುವ ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ ಶುರು ಮಾಡಲಾಗುತ್ತದೆ. ಸೇನೆಯಲ್ಲಿ ಕೆಲಸ ಮಾಡಿ, ನಮ್ಮ ದೇಶಸೇವೆ ಮಾಡಲು ಆಸಕ್ತಿ ಇರುವ ಯುವ ಪ್ರತಿಭೆಗಳು ತಮ್ಮ ಭವಿಷ್ಯ ಹಾಗೂ ವೃತ್ತಿ ಜೀವನ ರೂಪಿಸಿಕೊಳ್ಳಲು ಇದೊಂದು ಅದ್ಭುತವಾದ ಅವಕಾಶ ಆಗಿದೆ. Indian Air Force ನೂತನವಾಗಿ ಆರಂಭಿಸಿರುವ ಶ್ರೇಣಿ ಅಗ್ನಿವೀರ್ ಹುದ್ದೆ ಆಗಿದ್ದು, ಇದಕ್ಕಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

3500 ಹುದ್ದೆಗಳ ನೇಮಕಾತಿ:

ಅಗ್ನಿವೀರ್ ಶ್ರೇಣಿಯ ಹುದ್ದೆಗಳಲ್ಲಿ ಸುಮಾರು 3500 ಹುದ್ದೆಗಳು ಖಾಲಿ ಇದೆ. ಈ ಹುದ್ದೆಯ ನೇಮಕಾತಿ ಪ್ರಕ್ರಿಯೆ 3 ವಿವಿಧ ಹಂತಗಳಲ್ಲಿ ನಡೆಯಲಿದೆ..ಅವು ಯಾವುವು ಎಂದರೆ..
1. ಆನ್ಲೈನ್ ಲಿಖಿತ ಪರೀಕ್ಷೆ (Online Written Test) – ಸ್ಟೆಪ್ 1
2. DV, ದೈಹಿಕ ಸಾಮರ್ಥ್ಯ ಪರೀಕ್ಷೆ, ಹೊಂದಿಕೊಳ್ಳುವ ಪರೀಕ್ಷೆ – ಸ್ಟೆಪ್ 2
3. ವೈದ್ಯಕೀಯ ಪರೀಕ್ಷೆ (Medical Test)- ಸ್ಟೆಪ್ 3
ಈ ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ.

ಭಾರತೀಯ ವಾಯುಪಡೆಯಲ್ಲಿ (Indian Air Force) ಕೆಲಸ ಮಾಡುವುದಕ್ಕೆ ನಿಮಗೆ ಆಸಕ್ತಿ ಇದ್ದು, ಈ ಹುದ್ದೆಗೆ ಆಗತ್ಯವಿರುವ ಅರ್ಹತೆ ನಿಮಗೆ ಸರಿಹೊಂದುತ್ತದೆ ಎನ್ನುವುದಾದರೆ, ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಅಗ್ನಿವೀರ್ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ವಯೋಮಿತಿ:

ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 21 ವರ್ಷಗಳ ಒಳಗಿರಬೇಕು.

ವಿದ್ಯಾರ್ಹತೆ:

ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಬಳಿ ಈ ಕೆಲವು ಶೈಕ್ಷಣಿಕ ಅರ್ಹತೆಗಳು ಇರಬೇಕು. Physics ಹಾಗೂ Maths ವಿಷಯದಲ್ಲಿ 12ನೇ ತರಗತಿ ಪಾಸ್ ಆಗಿರಬೇಕು.

ಹುದ್ದೆಯ ಆಯ್ಕೆ ಪ್ರಕ್ರಿಯೆ:

1. ಆನ್ಲೈನ್ ಪರೀಕ್ಷೆ
2. ದೈಹಿಕ ಸಾಮರ್ಥ್ಯ ಪರೀಕ್ಷೆ
3. ವೈದ್ಯಕೀಯ ಪರೀಕ್ಷೆ

ವೇತನ ಶ್ರೇಣಿ:

ಅಗ್ನಿವೀರ್ ಹುದ್ದೆಗೆ ಪ್ರತಿ ತಿಂಗಳು ಸಿಗಬಹುದಾದ ವೇತನ ಶ್ರೇಣಿ, ಪ್ರತಿ ತಿಂಗಳು ₹21,000 ಆಗಿರುತ್ತದೆ. ಅಭ್ಯರ್ಥಿಗಳು ವಾರ್ಷಿಕ ಸೇವಾನಿಧಿ ಪ್ಯಾಕೇಜ್ ಅನ್ನು ಪೂರ್ತಿ ಮಾಡಿದರೆ, ₹10,04,000 ರೂಪಾಯಿ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ:

ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಕೆ 2024ರ ಜನವರಿ 17ರಿಂದ ಶುರುವಾಗಿದ್ದು, ಕೊನೆಯ ದಿನಾಂಕ 2024ರ ಫೆಬ್ರವರಿ 6 ಆಗಿರುತ್ತದೆ. ಈ ದಿನಾಂಕದ ಒಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು..

ಅರ್ಹತೆಯ ಮಾನದಂಡ:

ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಈ ಕೆಲವು ಅರ್ಹತೆಗಳು ಇರಲೇಬೇಕು
*ಅಭ್ಯರ್ಥಿಯ ಭಾರತದ ಪ್ರಜೆಯೇ ಆಗಿರಬೇಕು
*ಅಭ್ಯರ್ಥಿಯ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು (SC/ST/OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಆದ ನಂತರ)
*ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, 10ನೇ ತರಗತಿ, ಡಿಪ್ಲೊಮಾ, ITI, BE ಅಥವಾ Btech ಪೂರ್ತಿಮಾಡಿರಬೇಕು.

ಅಧಿಕೃತ ವೆಬ್ಸೈಟ್:

ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ವಾಯುಪಡೆಯ ಅಧಿಕೃತ ಲಿಂಕ್ ಗೆ ಭೇಟಿನೀಡಿ.. https://agnipathvayu.cdac.in/
ಈ ವೆಬ್ಸೈಟ್ ಗೆ ಲಾಗಿನ್ ಆಗಿ ನೀವೇ ಹುದ್ದೆಗೆ ಅಪ್ಲೈ ಮಾಡಬಹುದು.

ಅರ್ಜಿ ಶುಲ್ಕ:

ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸಿ, ಎಲ್ಲಾ ವರ್ಗದವರು ₹550 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಮಹಿಳೆಯರಿಗೆ ವಿನಾಯಿತಿ ಇರುತ್ತದೆ.

ಅಗತ್ಯವಿರುವ ದಾಖಲೆಗಳು:

*12ನೇ ತರಗತಿ ಮಾರ್ಕ್ಸ್ ಕಾರ್ಡ್
*ಐಡೆಂಟಿಟಿ ಪ್ರೂಫ್ ಆಗಿ ಆಧಾರ್ ಕಾರ್ಡ್ (Aadhar Card), ಪ್ಯಾನ್ ಕಾರ್ಡ್ (Pan Card), ಇತ್ಯಾದಿ..
*ವಾಸಸ್ಥಳ ಪುರಾವೆ
*ಕ್ಯಾಸ್ಟ್ ಸರ್ಟಿಫಿಕೇಟ್ (Caste Certificate)
*Passport Size Photo
*ಸಹಿ(Signature)

ಅರ್ಜಿ ಸಲ್ಲಿಕೆಯ ಲಿಂಕ್:

https://agnipathvayu.cdac.in/avreg/candidate/login

ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳು ನಿಮಗೆ ಹೊಂದಿಕೆಯಾಗಿ, ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗಿದ್ದರೆ, ಅರ್ಜಿ ಸಲ್ಲಿಸಿ.

Agniveer Job Notification 2024

Leave a comment