Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2024 Village Accountant Recruitment: 2024ರ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಆರಂಭ! ಆಸಕ್ತರು ಇಂದೇ ಅರ್ಜಿ ಸಲ್ಲಿಸಿ! ಸಂಬಳ 21 ಸಾವಿರ.

ಕಂದಾಯ ಇಲಾಖೆ ಸರ್ಕಾರಕ್ಕೆ ಸೇರಿದ ಇಲಾಖೆ ಆಗಿರುವುದರಿಂದ ಇಲ್ಲಿ ನಿಮಗೆ ಒಳ್ಳೆಯ ವೇತನದ ಹಾಗೂ ಉದ್ಯೋಗಕ್ಕೆ ಭದ್ರತೆ ಎರಡು ಕೂಡ ಇರುತ್ತದೆ.

2024 Village Accountant Recruitment: ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಎನ್ನುವ ಸಮಸ್ಯೆ ದೊಡ್ಡದಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕೂಡ ಪ್ರಯತ್ನ ಪಡುತ್ತಿದೆ, ಅದೇ ನಿಟ್ಟಿನಲ್ಲಿ ಈಗ ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದ್ದು, ಒಟ್ಟು 1000 ಹುದ್ದೆಗಳು ಖಾಲಿ ಇದೆ. ಈ ಹುದ್ದೆಯ ಬಗ್ಗೆ ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು.

ಕಂದಾಯ ಇಲಾಖೆ ಸರ್ಕಾರಕ್ಕೆ ಸೇರಿದ ಇಲಾಖೆ ಆಗಿರುವುದರಿಂದ ಇಲ್ಲಿ ನಿಮಗೆ ಒಳ್ಳೆಯ ವೇತನದ ಹಾಗೂ ಉದ್ಯೋಗಕ್ಕೆ ಭದ್ರತೆ ಎರಡು ಕೂಡ ಇರುತ್ತದೆ. ಹಾಗಾಗಿ ಕಂದಾಯ ಇಲಾಖೆಯ ಗ್ರಾಮಾಧಿಕಾರಿ ಹುದ್ದೆಯಲ್ಲಿ ಆಸಕ್ತಿ ಇರುವವರಿಗೆ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.. ತಪ್ಪದೇ ಓದಿ..

2024 Village Accountant Recruitment ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ:

ಹುದ್ದೆ ಖಾಲಿ ಇರುವ ಇಲಾಖೆ: ಕರ್ನಾಟಕ ಕಂದಾಯ ಇಲಾಖೆ (Karnataka Revenue Department)
ತಿಂಗಳ ವೇತನ: ₹21,400 ಇಂದ ₹42,000 ರೂಪಾಯಿಗಳು
ಕೆಲಸದ ಹೆಸರು :- ಗ್ರಾಮ ಆಡಳಿತ ಲೆಕ್ಕಾಧಿಕಾರಿ
ಖಾಲಿ ಇರುವ ಹುದ್ದೆಗಳ ಸಂಖ್ಯೆ ;- 1000
ಕೆಲಸ ಖಾಲಿ ಇರುವುದು : ಕರ್ನಾಟಕದಲ್ಲಿ

ಖಾಲಿ ಇರುವ ಹುದ್ದೆಗಳ ಪೂರ್ತಿ ವಿವರ:

  1. ಬೆಂಗಳೂರು ನಗರ-31, 
  2. ಬೆಂಗಳೂರು ಗ್ರಾಮಾಂತರ-34, 
  3. ಚಿತ್ರದುರ್ಗ-31, 
  4. ಕೋಲಾರ-43,
  5. ತುಮಕೂರು-71, 
  6. ರಾಮನಗರ-51, 
  7. ಚಿಕ್ಕಬಳ್ಳಾಪುರ-41,
  8. ಶಿವಮೊಗ್ಗ-30,
  9. ಮೈಸೂರು-62,
  10. ಚಾಮರಾಜನಗರ-54, 
  11. ಮಂಡ್ಯ-59,
  12. ಹಾಸನ-53, 
  13. ಚಿಕ್ಕಮಗಳೂರು-23, 
  14. ಕೊಡಗು 6, 
  15. ಉಡುಪಿ 23, 
  16. ದಕ್ಷಿಣ ಕನ್ನಡ 49, 
  17. ಬೆಳಗಾವಿ 62, 
  18. ವಿಜಯಪುರ 7, 
  19. ಬಾಗಲಕೋಟೆ 25, 
  20. ಧಾರವಾಡ 16, 
  21. ಗದಗ 30,
  22. ಹಾವೇರಿ 32, 
  23. ಉತ್ತರ ಕನ್ನಡ 8,
  24. ಕಲಬುರಗಿ 62, 
  25. ರಾಯಚೂರು 8, 
  26. ಕೊಪ್ಪಳ 19, 
  27. ಬಳ್ಳಾರಿ 19, 
  28. ಬೀದರ್ 24, 
  29. ಯಾದಗಿರಿ 10, 
  30. ವಿಜಯನಗರ 13. 
  31. ಒಟ್ಟು 1000 ಹುದ್ದೆಗಳು ಖಾಲಿ ಇದೆ.

ಅಗತ್ಯವಿರುವ ವಿದ್ಯಾರ್ಹತೆ :

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ 12ನೇ ತರಗತಿ ಪೂರ್ಣಗೊಳಿಸಿರಬೇಕು.

ತಿಂಗಳ ವೇತನ :

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸರ್ಕಾರ ನಿಗದಿ ಪಡಿಸಿರುವ ತಿಂಗಳ ವೇತನ ಶ್ರೇಣಿ ₹21,400 ಇಂದ ₹42,000 ರೂಪಾಯಿಗಳ ವರೆಗು ಇರುತ್ತದೆ.

ನಿಗದಿ ಪಡಿಸಿರುವ ವಯೋಮಿತಿ :

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷಗಳ ಒಳಗಿನವರಾಗಿರಬೇಕು.
ಆದರೆ ಇಲ್ಲಿ ವಯೋಮಿತಿ ಸಡಿಲಿಕೆ ಇದೆ..
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ: 5 ವರ್ಷ
Cat-2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ

ಅರ್ಜಿ ಶುಲ್ಕ ಎಷ್ಟು, ಪಾವತಿ ಹೇಗೆ ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ kandaya.karnataka.gov.in ವೆಬ್ಸೈಟ್ ಗೆ ಭೇಟಿ ನೀಡಿ.

2024 village accountant recruitment begins! Interested? Apply online! Salary 21,400

Leave a comment