Free Sewing Machine: ಮಹಿಳೆಯರಿಗಾಗಿ ಮತ್ತೊಂದು ಅದ್ಭುತ ಯೋಜನೆ ಜಾರಿಗೆ! ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ, ತಡ ಮಾಡದೆ ಈ ರೀತಿ ಅರ್ಜಿ ಸಲ್ಲಿಸಿ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತ ಪ್ರಜೆಯಾಗಿರಬೇಕು (Citizen of India), ಹಾಗೆ ಮಹಿಳೆಯ ವಯಸ್ಸು ಕನಿಷ್ಠ 20ರಿಂದ ಗರಿಷ್ಠ 40ರ ಒಳಗೆ ಇರಬೇಕು.
Free Sewing Machine Scheme From Central Government: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ವಿಶೇಷವಾದ ಯೋಜನೆಗಳನ್ನು ಆಗಾಗ ಜಾರಿಗೆ ತರುತ್ತಿರುತ್ತದೆ. ಈ ಯೋಜನೆಗಳ ಮೂಲಕ ದೇಶದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು (Financial status) ಸ್ಥಿರಗೊಳಿಸುವುದು ಮಾತ್ರವಲ್ಲದೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ರಾಜ್ಯದಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ (Shakthi Yojane) ಮತ್ತು ಗೃಹ ಲಕ್ಷ್ಮೀ (Gruha Lakshmi Yojane) ಯೋಜನೆಗಳಿಗೆ ಚಾಲನೆ ನೀಡಲಾಗಿದೆ.
ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು (New Schemes For Females) ಜಾರಿಗೆ ತಂದಿದ್ದಾರೆ. ಇನ್ನು ಈ ಹೊಸ ಯೋಜನೆ ಅಡಿಯಲ್ಲಿ ಪ್ರತಿ ರಾಜ್ಯದ 50 ಸಾವಿರ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು (Free Sewing Machine) ನೀಡಲಾಗುತ್ತದೆ. ಹೌದು, ಪ್ರಧಾನಮಂತ್ರಿಯವರ ಉಚಿತ ಹೊಲಿಗೆ ಯಂತ್ರ ಯೋಜನೆಯ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ.
ಇನ್ನು ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಈ ಯೋಜನೆಗೆ ಯಾರೆಲ್ಲಾ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಬೇಕಾದ ದಾಖಲೆಗಳೇನು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ…
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತ ಪ್ರಜೆಯಾಗಿರಬೇಕು (Citizen of India), ಹಾಗೆ ಮಹಿಳೆಯ ವಯಸ್ಸು ಕನಿಷ್ಠ 20ರಿಂದ ಗರಿಷ್ಠ 40ರ ಒಳಗೆ ಇರಬೇಕು. ಇನ್ನು ಈ ಯೋಜನೆಯ ಲಾಭವನ್ನು ಬಡತನ ರೇಖೆಗಿಂತ ಕಡಿಮೆ (Below Poverty Limit) ಇರುವ ಮಹಿಳೆಯರು ಮಾತ್ರ ಪಡೆಯುತ್ತಾರೆ. ಅರ್ಜಿದಾರರ ವಾರ್ಷಿಕ ಆದಾಯ 1,20,000 ರೂಗಳನ್ನು ಮೀರಿರಬಾರದು. ಇನ್ನು ವಿಧವೆ ಮಹಿಳೆಯರು (A widowed woman) ಸಹ ಈ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಈ ಕೆಳಗಿನಂತಿವೆ;
1.ಅರ್ಜಿದಾರರ ಪಾಸ್ ಪೋರ್ಟ್ ಸೈಜ್ ಫೋಟೋ, (Passport Size Photo),
2.ಜಾತಿ ಪ್ರಮಾಣ ಪತ್ರ, (Caste Certificate),
3.ಪಡಿತರ ಚೀಟಿ ಅಥವಾ ವೋಟರ್ ಐಡಿ, (Voter ID),
4.ಹೊಲಿಗೆ ಕಲಿಕೆ ಪ್ರಮಾಣ ಪತ್ರ, (Sewing Learning Certificate)
5.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ ಅಥವಾ ಕಾರ್ಮಿಕ ಇಲಾಖೆಯಿಂದ ಕುಶಲಕರ್ಮಿ ಗುರುತಿನ ಚೀಟಿಯ ಪ್ರತಿ ಹೊಂದಿರಬೇಕು, (Artisan Identity Card).
ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ;
1.ಈ ಕೆಳಗೆ ನೀಡುವ ಲಿಂಕ್ https://pmmodiyojana.in/free-silai-machine-yojana/ ಉಪಯೋಗಿಸಿಕೊಂಡು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ,
2. ವೆಬ್ಸೈಟ್ ನಲ್ಲಿ ಉಚಿತ ಹೊಲಿಗೆ ಯಂತ್ರದ ಆಯ್ಕೆಯನ್ನು ಕ್ಲಿಕ್ ಮಾಡಿ,
3. ನಂತರ ವೆಬ್ ಸೈಟ್ ನಲ್ಲಿ ಕೇಳಲಾದ ದಾಖಲೆಗಳನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ.
Added another great women’s initiative! Central government distributes free sewing machines.