Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Amrit Bharat : ಅಮೃತ್ ಭಾರತ್ ನಲ್ಲಿ ಪ್ರಯಾಣ ಈಗ ಸುಲಭ!ಟಿಕೆಟ್ ದರ ಎಷ್ಟು ಗೊತ್ತಾ?

ನಮ್ಮ ದೇಶದ ಜನರಿಗೆ ಪ್ರಯಾಣ ಮಾಡಲು ಹೆಚ್ಚು ಅನುಕೂಲ ಆಗುವ ಹಾಗೆ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಿದ್ದು, ಈ ರೈಲುಗಳಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Amrit Bharat : ನಮ್ಮ ದೇಶದ ಜನರಿಗೆ ಪ್ರಯಾಣ ಮಾಡಲು ಹೆಚ್ಚು ಅನುಕೂಲ ಆಗುವ ಹಾಗೆ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಿದ್ದು, ಈ ರೈಲುಗಳಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಕಾರಣಕ್ಕೆ ಅಮೃತ್ ಭಾರತ್ ರೈಲಿನ ವಿಚಾರವಾಗಿ ಕೇಂದ್ರ ಸರ್ಕಾರ ಈಗ ಹೊಸದೊಂದು ಸಂತೋಷದ ಸುದ್ದಿಯನ್ನು ನೀಡಿದೆ.

Amrit Bharat

ಕಳೆದ ವರ್ಷ ಡಿಸೆಂಬರ್ 30ರಂದೆ 2 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು ಪಿಎಮ್ ಮೋದಿ ಅವರು.. ಮಾಲ್ಡಾ ಬೆಂಗಳೂರು ಮತ್ತು ದೆಹಲಿ ಅಯೋಧ್ಯೆ ದರ್ಬಂಗಾ ಈ ಮಾರ್ಗದಲ್ಲಿ ವಂದೇ ಅಮೃತ್ ರೈಲುಗಳ ಸಂಚಾರ ನಡೆಯುತ್ತಿದೆ. ಈ ನಡುವೆ ರೈಲ್ವೆ ಮಿನಿಸ್ಟರ್ ಆಗಿರುವ ಅಶ್ವಿನ್ ವೈಷ್ಣವ್ ಅವರು ಅಮೃತ್ ಭಾರತ್ ರೈಲುಗಳ ಬಗ್ಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಈ ಯಶಸ್ಸಿನ ಬಳಿಕ 50 ಅಮೃತ್ ಭಾರತ್ ರೈಲುಗಳ ತಯಾರಿಕೆ ಮತ್ತು ಸಂಚಾರ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.

Amrit Bharat Express:

ಈ ರೈಲಿನಲ್ಲಿ ಬೇರೆ ರೈಲುಗಳಿಗಿಂತ ಹೆಚ್ಚು ವಿಶೇಷತೆಗಳಿವೆ, ಈ ರೈಲು ಒಂದು ಗಂಟೆಗೆ 130 km ವೇಗದಲ್ಲಿ ಚಲಿಸುತ್ತದೆ. ಈ ರೈಲಿನ ಮುಂಭಾಗ ಮತ್ತು ಹಿಂಭಾಗ ಎರಡು ಕಡೆ ಇಂಜಿನ್ ಗಳಿದ್ದು, ಸ್ಲೀಪರ್ ಕೋಚ್ ಮತ್ತು ರಿಸರ್ವೇಷನ್ ಕೋಚ್ ಗಳು, ಹಾಗೂ Air Condition ವ್ಯವಸ್ಥೆ ಇರಲಿದೆ. ಆದರೆ ಇದರಲ್ಲಿ ಆಟೊಮ್ಯಾಟಿಕ್ ಡೋರ್ ಗಳು ಇರುವುದಿಲ್ಲ.

Amrit Bharat Features:

ಈ ರೈಲಿನಲ್ಲಿ ಇನ್ನಷ್ಟು ಒಳ್ಳೆಯ ವಿಶೇಷತೆಗಳಿವೆ.. ಅವು ಫೋನ್ ಚಾರ್ಜಿಂಗ್ ಪಾಯಿಂಟ್, LED ಲೈಟ್, ಊಟದ ಟೇಬಲ್, ಫೋನ್ ಮತ್ತು ವಾಟರ್ ಬಾಟಲ್ ಹೋಲ್ಡರ್, ಹಾಗೆಯೇ ಸೆಕ್ಯೂರಿಟಿಗಾಗಿ CCTV ಸೇವೆ ಇದೆಲ್ಲವೂ ಇದೆ. ಅಷ್ಟೇ ಅಲ್ಲದೇ, ಈ ರೈಲನ್ನು 24 ಗಂಟೆ ಯಾವುದೇ ಸಮಯದಲ್ಲಿ ಸಂಚಾರ ಮಾಡುವುದಕ್ಕಾಗಿ ಡಿಸೈನ್ ಮಾಡಲಾಗಿದೆ. ಈ ರೈಲಿನಲ್ಲಿ ಒಟ್ಟು 22 ಕೋಚ್ ಗಳಿದ್ದು, 800ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ಡಿಸ್ಟನ್ಸ್ ಪ್ರಯಾಣ ಮಾಡಲಿದೆ.

ಈ ಮೊದಲು ಈ ರೈಲಿಗೆ ಬೇರೆ ಹೆಸರು ಇಡಲಾಗಿತ್ತು, ಮೊದಲ ಹೆಸರು ವಂದೇ ಸಾಧಾರಣ್ (Vande Sadharan) ಎಂದು ಇಡಲಾಗಿತ್ತು. ಬಳಿಕ ಅಮೃತ್ ಭಾರತ್ ಎಕ್ಸ್ಪ್ರೆಸ್ ಎಂದು ಇಡಲಾಯಿತು. ಈ ಒಂದು ರೈಲು ತಯಾರಿಕೆಗೆ ಸರ್ಕಾರಕ್ಕೆ 65 ಕೋಟಿ ಖರ್ಚು ಬೀಳುತ್ತದೆ. ಈ ರೈಲಿನ ಕೆಪಾಸಿಟಿ ಬಗ್ಗೆ ಹೇಳುವುದಾದರೆ, 1834 ಜನರು ಖುಷಿಯಾಗಿ ಕೂತು ಪ್ರಯಾಣ ಮಾಡಬಹುದು.

ಈ ರೈಲು ಮೊದಲು ಎಲ್ಲಿ ಸಂಚಾರ ಶುರು ಮಾಡಿದ್ದು ಎಂದು ನೋಡುವುದಾದರೆ, ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಮೊದಲಿಗೆ ಮುಂಬೈ ನ ವಾಡಿ ಬಂದರ್ ಯಾರ್ಡ್ ಗೆ 2023ರ ಆಕ್ಟೊಬರ್ 29ರಂದು ಬಂದಿತು. 2023ರ ನವೆಂಬರ್ 8ರಂದು ಅಹಮದಾಬಾದ್-ಮುಂಬೈ ನಗರಗಳಿಗೆ ಪ್ರಯಾಣ ಶುರುವಾಯಿತು, ಈ ರೀತಿಯಲ್ಲಿ ಪ್ರಯಾಣಿಕರ ಸಂಚಾರ ಸುರಕ್ಷಿತವಾಗಿ ನಡೆಯಿತು. ಜನರಿಗೆ ಅನುಕೂಲ ಆಗುತ್ತಿರುವ ಕಾರಣ ಚೆನ್ನೈನ ಕೋಚ್ ಇಂಟೆಗ್ರೇಟೆಡ್ ಫ್ಯಾಕ್ಟರಿಯಲ್ಲಿ ಸುಮಾರು 400 ಅಮೃತ್ ಭಾರತ್ ರೈಲುಗಳ ನಿರ್ಮಾಣ ನಡೆಯುತ್ತಿದೆ.

ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ತೆಗೆದುಕೊಳ್ಳುವ ಸಮಯ ಕಡಿಮೆ ಆಗಲಿ, ಹಾಗೆಯೇ ಕಡಿಮೆ ಖರ್ಚಿನಲ್ಲಿ ಹೋಗುವ ಹಾಗೆ ಆಗಲಿ ಎಂದು ಅಮೃತ್ ಭಾರತ್ ರೈಲನ್ನು ತಯಾರಿ ಮಾಡಿಕೊಳ್ಳುತ್ತಿದ್ದು, ವೈಷ್ಣವ್ ಅವರು 50 ಅಮೃತ್ ಭಾರತ್ ರೈಲನ್ನು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ ಎಂದು ತಿಳಿಸಿರುವ ವಿಷಯ, ಜನರಿಗೆ ಸಂತೋಷ ತಂದಿದೆ.

Also Read: Investment Ideas : ಈ 3 ಶೇರ್ ಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಹಣ ಡಬಲ್ ಆಗೋದು ಗ್ಯಾರೆಂಟಿ!

Leave a comment