Kisan Credit Card Loan : ಪಶು ಸಂಗೋಪನೆ ಮಾಡುವವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ನಿಮಗೆ ಕಡಿಮೆ ಬಡ್ಡಿಯಲ್ಲಿ ಸಾಲ!
ಕೇಂದ್ರ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುವವರಿಗೆ, ಪಶು ಸಂಗೋಪನೆ ಮಾಡುವವರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ.
Kisan Credit Card Loan : ಕೇಂದ್ರ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುವವರಿಗೆ, ಪಶು ಸಂಗೋಪನೆ ಮಾಡುವವರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆ ಮಾಡುವವರಿಗೆ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ. ಹೈನುಗಾರಿಕೆಗೆ ಅನುಕೂಲ ಆಗುವ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
Kisan Credit Card Loan :
ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಹೈನುಗಾರಿಕೆ ಮಾಡುವವರಿಗೆ ಸಹಾಯ ಮಾಡಲಿದೆ. ಕೋಳಿ, ಕುರಿ, ಹಸು, ಹಂದಿ ಸಂಗೋಪನೆ ಇವುಗಳಿಗೆಲ್ಲಾ ಸರ್ಕಾರವು ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಲಿದ್ದು, 3 ಲಕ್ಷದವರೆಗಿನ ಸಾಲಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ. 10 ಲಕ್ಷದವರೆಗೂ ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಲ ನೀಡಲಾಗುತ್ತದೆ. ಒಂದು ವೇಳೆ ಸಾಲವನ್ನು ಕಿಸಾನ್ ಕ್ರೆಡಿಟ್ ಲೋನ್ ಮೂಲಕ ಪಡೆದರೆ 2% ವರೆಗು ಲೋನ್ ಬಡ್ಡಿದರದಲ್ಲಿ ಡಿಸ್ಕೌಂಟ್ ಸಿಗುತ್ತದೆ. ಹಾಗೆಯೇ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ, ಬಡ್ಡಿದರದ ಮೇಲೆ 3% ಡಿಸ್ಕೌಂಟ್ ಸಿಗುತ್ತದೆ.
ಸರ್ಕಾರದ ವ್ಯಾಪ್ತಿಗೆ ಬರುವ ಯಾವುದೇ ಸಹಕಾರಿ ಬ್ಯಾಂಕ್ ನಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಹೈನುಗಾರಿಕೆ ಮಾಡುವವರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ರೀತಿಯಲ್ಲಿ ರೈತರಿಗೆ ಸಾಲದ ಮೇಲೆ ಒಟ್ಟು 5% ಡಿಸ್ಕೌಂಟ್ ಸಿಗುತ್ತದೆ..ಈ ಯೋಜನೆಯಲ್ಲಿ ಯಾವ ಕೆಲಸಕ್ಕೆ ಎಷ್ಟು ಮೊತ್ತ ಸಾಲ ಸಿಗುತ್ತದೆ ಎಂದು ತಿಳಿಯೋಣ..
ಹೈನುಗಾರಿಕೆ ಸಾಲ:
*ಈ ಯೋಜನೆಯಲ್ಲಿ ಮಿಶ್ರ ತಳಿಗಳ ಹಸುಗಳ ಸಾಕಾಣಿಕೆಗೆ 2 ಹಸುಗಳು ಇದ್ದರೆ, ಒಂದು ಹಸುವಿಗೆ ₹18,000 ರೂಪಾಯಿಯ ಹಾಗೆ, ಎರಡು ಹಸುವಿಗೆ ₹36,000 ರೂಪಾಯಿ ಸಾಲ ಸಿಗುತ್ತದೆ.
*ಎಮ್ಮೆಗಳನ್ನು ಸಾಕಲು, ಒಂದು ಎಮ್ಮೆಗೆ ₹21,000 ರೂಪಾಯಿಗಳ ಹಾಗೆ ಎರಡು ಎಮ್ಮೆಗಳಿಗೆ ₹42,000 ಸಾಲ ಕೊಡಲಾಗುತ್ತದೆ.
ಕುರಿ ಸಾಕಾಣಿಕೆ:
*ಈ ಯೋಜನೆಯಲ್ಲಿ ಕುರಿ ಸಾಕಾಣಿಕೆಗೆ 11 ಕುರಿಗಳ ನಿರ್ವಹಣೆ, 8 ತಿಂಗಳ ಅವಧಿಗೆ, ಒಂದೇ ಕಡೆ ಮೆಯಿಸುವ ಕುರಿಗಳಿಗೆ ₹29,950 ರೂಪಾಯಿ, ಹೊರಗಡೆ ಮೇಯಿಸುವ ಕುರಿಗಳಿಗೆ ₹14,700 ರೂಪಾಯಿ ಸಾಲ ಸಿಗುತ್ತದೆ.
*21 ಕುರಿಗಳನ್ನು 8 ತಿಂಗಳ ಅವಧಿಗೆ ಸಾಕಲು, ಒಂದೇ ಕಡೆ ಸಾಕುವ ಕುರಿಗಳಿಗೆ ₹57,200 ರೂಪಾಯಿ ಕೊಡಲಾಗುತ್ತದೆ, ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ₹28,200 ರೂಪಾಯಿ ಸಾಲ ಸಿಗುತ್ತದೆ.
*10 ಕುರಿಮರಿಗಳ ದೇಹದ ತೂಕ ಹೆಚ್ಚಿಸಲು, ₹13,120.. 20 ಕುರಿಮರಿಗಳ ದೇಹದ ತೂಕ ಹೆಚ್ಚಿಸಲು ₹26,200 ರೂಪಾಯಿ ಕೊಡಲಾಗುತ್ತದೆ.
ಮೇಕೆ ಸಾಕಾಣಿಕೆ:
*ಈ ಯೋಜನೆಯಲ್ಲಿ ಕುರಿ ಸಾಕಾಣಿಕೆಗೆ 11 ಮೇಕೆಗಳ ನಿರ್ವಹಣೆ, 8 ತಿಂಗಳ ಅವಧಿಗೆ, ಒಂದೇ ಕಡೆ ಮೆಯಿಸುವ ಕುರಿಗಳಿಗೆ ₹29,950 ರೂಪಾಯಿ, ಹೊರಗಡೆ ಮೇಯಿಸುವ ಕುರಿಗಳಿಗೆ ₹14,700 ರೂಪಾಯಿ ಸಾಲ ಸಿಗುತ್ತದೆ.
*21 ಕುರಿಗಳನ್ನು 8 ತಿಂಗಳ ಅವಧಿಗೆ ಸಾಕಲು, ಒಂದೇ ಕಡೆ ಸಾಕುವ ಕುರಿಗಳಿಗೆ ₹57,200 ರೂಪಾಯಿ ಕೊಡಲಾಗುತ್ತದೆ, ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ₹28,200 ರೂಪಾಯಿ ಸಾಲ ಸಿಗುತ್ತದೆ.
ಹಂದಿ ಸಾಕಾಣಿಕೆ:
*10 ಹಂದಿಗಳ ದೇಹದ ತೂಕ ಹೆಚ್ಚಿಸಲು, 8 ತಿಂಗಳ ಅವಧಿಗೆ ₹60,000 ರೂಪಾಯಿ ಸಾಲ ಕೊಡಲಾಗುತ್ತದೆ.
ಕೋಳಿ ಸಾಕಾಣಿಕೆ:
*ಮಾಂಸಕ್ಕಾಗಿ ಸಾಕುವ ಕೋಳಿಗಳಿಗೆ ಒಂದು ಕೋಳಿಗೆ ₹80 ರೂಪಾಯಿಯ ಹಾಗೆ, 1000 ಕೋಳಿಗಳ ಸಾಕಣಿಕೆಗೆ ₹80,000 ರೂಪಾಯಿ ನೀಡಲಾಗುತ್ತದೆ.
*ಮೊಟ್ಟೆಗಳಿಗಾಗಿ ಸಾಕುವ ಕೋಳಿಗಳಿಗೆ ಒಂದು ಕೋಳಿಗೆ ₹180 ರೂಪಾಯಿಯ ಹಾಗೆ ₹1000 ಕೋಳಿಗಳಿಗೆ ₹1,80,000 ರೂಪಾಯಿ ಸಾಲ ನೀಡಲಾಗುತ್ತದೆ.
ಮೊಲ ಸಾಕಾಣಿಕೆ:
60 ಮೊಲಗಳನ್ನು ಸಾಕಲು ₹50,000 ವರೆಗು ಸಾಲ ಪಡೆಯಬಹುದು.
ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆಯ ಮೂಲಕ ಸಾಲ ಪಡೆಯಲು 31/3/2024 ಕೊನೆಯ ದಿನಾಂಕ ಆಗಿರುತ್ತದೆ.
ಅಗತ್ಯವಿರುವ ದಾಖಲೆಗಳು:
*ಫಿಲ್ ಮಾಡಿರುವ ಅಪ್ಲಿಕೇಶನ್ ಫಾರ್ಮ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋಸ್
ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು 8277100200 ಈ ನಂಬರ್ ಗೆ ಕರೆಮಾಡಿ.
Also Read: PM Vishwakarma Yojane : ಸಾಲದ ಜೊತೆಗೆ ಸಿಗಲಿದೆ ಕೌಶಲ್ಯ ತರಬೇತಿ! ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ!