Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Surya Ghar Yojane : ಪಿಎಮ್ ಸೂರ್ಯ ಘರ್ ಯೋಜನೆ ಶೀಘ್ರದಲ್ಲೇ ಶುರು! ಫ್ರೀ ಕರೆಂಟ್ ಪಡೆಯಲು ಈ ರೀತಿ ಮಾಡಿ

ನಮ್ಮ ದೇಶದಲ್ಲಿ ಎಲೆಕ್ಟ್ರಿಸಿಟಿ ಬಳಕೆ ಕಡಿಮೆಯಾಗಿ, ಸೌರಶಕ್ತಿಯ ಬಳಕೆ ಜಾಸ್ತಿಯಾಗಬೇಕು ಎಂದು ಪಿಎಮ್ ಸೂರ್ಯ ಘರ್ ಯೋಜನೆಯನ್ನು ಘೋಷಿಸಲಾಗಿದೆ.

PM Surya Ghar Yojane : ನಮ್ಮ ದೇಶದಲ್ಲಿ ಎಲೆಕ್ಟ್ರಿಸಿಟಿ ಬಳಕೆ ಕಡಿಮೆಯಾಗಿ, ಸೌರಶಕ್ತಿಯ ಬಳಕೆ ಜಾಸ್ತಿಯಾಗಬೇಕು ಎಂದು ಪಿಎಮ್ ಸೂರ್ಯ ಘರ್ ಯೋಜನೆಯನ್ನು ಘೋಷಿಸಲಾಗಿದೆ. ಸೂರ್ಯಘರ್ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಮನೆಗಳಿಗೆ 300 ಯೂನಿಟ್ ವರೆಗು ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಕೇಂದ್ರ ಸರ್ಕಾರವು ಇದಕ್ಕಾಗಿ ₹75,000 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ. ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲಾಗುತ್ತದೆ.

PM Surya Ghar Yojane:

ಈ ವರ್ಷ 2024-25ನೇ ಸಾಲಿನ ಬಜೆಟ್ ವೇಳೆ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಕೂಡ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಯ ಬಗ್ಗೆ ಘೋಷಿಸಿದ್ದರು. ಈ ಯೋಜನೆಯ ಬಗ್ಗೆ ಖುದ್ದು ಪಿಎಮ್ ನರೇಂದ್ರ ಮೋದಿ ಅವರೇ ಟ್ವಿಟರ್ ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. “ದೇಶದ ಅಭಿವೃದ್ಧಿ ಹಾಗೂ ಜನರ ಅನುಕೂಲಕ್ಕಾಗಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯನ್ನು ಶುರು ಮಾಡುತ್ತಿದ್ದೇವೆ. ಈ ಯೋಜನೆಗಾಗಿ 75,000 ಕೋಟಿಗಳನ್ನು ಮೀಸಲಿಡುವ ಗುರಿ ಹೊಂದಿದ್ದೇವೆ. ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ 1 ಕೋಟಿ ಮನೆಗಳಿಗೆ ಸಿಗಲಿದೆ.. ಎಂದಿದ್ದಾರೆ ಪಿಎಮ್ ಮೋದಿ ಅವರು..

ಪಿಎಮ್ ಮೋದಿ ಅವರು ಹೇಳಿರುವ ಮತ್ತೊಂದು ಮುಖ್ಯವಾದ ವಿಚಾರ ಏನು ಎಂದರೆ, ಯೋಜನೆಯ ಸೌಲಭ್ಯ ಪಡೆಯುವವರಿಗೆ ಸಬ್ಸಿಡಿ ಮೂಲಕ ಸಾಲ ಕೊಡಲಾಗುತ್ತದೆ, ಅವರ ಬ್ಯಾಂಕ್ ಅಕೌಂಟ್ ಗೆ ಹಣ ನೇರವಾಗಿ ವರ್ಗಾವಣೆ ಆಗಲಿದೆ ಎಂದು ಮೋದಿಯವರು ಹೇಳಿದ್ದಾರೆ. “ಫಲಾನುಭವಿಗಳ ಬ್ಯಾಂಕ್ ಅಕೌಂಟ್ ಗೆ ಡೈರೆಕ್ಟ್ ಆಗಿ ಬರುವ ಸಬ್ಸಿಡಿಗಳಿಂದ, ಜಾಸ್ತಿ ಡಿಸ್ಕೌಂಟ್ ಕೊಡುವ ಬ್ಯಾಂಕ್ ನಲ್ಲಿ ಸಾಲ ಸಿಗಲಿದ್ದು, ಈ ಖರ್ಚಿನ ಹೊರೆ ಜನರ ಮೇಲೆ ಬೀಳುವುದಿಲ್ಲ.” ಎಂದಿದ್ದಾರೆ.

ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಪಿಎಮ್ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ನೀವು https://pmsuryaghar.gov.in ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
*ಇಲ್ಲಿ ನಿಮ್ಮ ಫೋನ್ ನಂಬರ್, ಇಮೇಲ್ ಐಡಿ, ಈ ಎಲ್ಲಾ ಡೀಟೇಲ್ಸ್ ಹಾಕಿ ಲಾಗಿನ್ ಮಾಡಬೇಕು.
*ಲಾಗಿನ್ ಮಾಡಿದ ಬಳಿಕ ಸೋಲಾರ್ ಪ್ಯಾನಲ್ ಅಳವಡಿಸಲು ಅರ್ಜಿ ಭರ್ತಿ ಮಾಡಬೇಕು

*ಅರ್ಜಿ ಭರ್ತಿ ಮಾಡಿದ ಬಳಿಕ ಅಪ್ರೂವಲ್ ಆಗುವವರೆಗೂ ಕಾಯಬೇಕು.
*DISCOM ಗೆ ರಿಜಿಸ್ಟರ್ ಆಗಿರುವ ಯಾವುದೇ ಡೀಲರ್ ಗಳಿಂದ ಸೋಲಾರ್ ಪ್ಯಾನಲ್ ಇನ್ಸ್ಟಾಲ್ ಮಾಡಿಸಿಕೊಳ್ಳಬಹುದು.
*ಎಲ್ಲಾ ಇನ್ಸ್ಟಾಲ್ ಮಾಡಿದ ಬಳಿಕ ಮೀಟರ್ ಅಳವಡಿಸಲಾಗುತ್ತದೆ.
*ಇನ್ಸ್ಟಾಲ್ ಮಾಡಿ ಪರಿಶೀಲನೆ ಮಾಡಿದ ಬಳಿಕ, ನಿಮಗೆ ಕಮಿಷನಿಂಗ್ ಸರ್ಟಿಫಿಕೇಟ್ ಕೊಡಲಾಗುತ್ತದೆ.
*ಕಮಿಷನಿಂಗ್ ರಿಪೋರ್ಟ್ ಸಿಕ್ಕ ನಂತರ, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಫಿಲ್ ಮಾಡಬೇಕು.
*ಇದಿಷ್ಟು ಕೆಲಸ ಮಾಡಿದರೆ, 30 ದಿನಗಳ ಒಳಗೆ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ.

Also Read: Sarala Vivaha Scheme: ಸರಳ ವಿವಾಹ ಯೋಜನೆ ಅಡಿಯಲ್ಲಿ ಮದುವೆ ಆಗುವ ಗಂಡು ಹೆಣ್ಣಿಗೆ ಸಿಗಲಿದೆ 50,000 ರೂಪಾಯಿ, ಅವಶ್ಯಕತೆ ಇರುವವರು ಅರ್ಜಿ ಸಲ್ಲಿಸಿ.

Leave a comment