Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

PM Vishwakarma Yojane : ಸಾಲದ ಜೊತೆಗೆ ಸಿಗಲಿದೆ ಕೌಶಲ್ಯ ತರಬೇತಿ! ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ!

ಈ ಯೋಜನೆಯನ್ನು ಧೋಬಿ, ಕಾರ್ಪೆಂಟರ್, ಕ್ಷೌರಿಕ ಸೇರಿದಂತೆ ಇನ್ನಿತರ 18 ವಿವಿಧ ವರ್ಗಗಳ ಕುಶಲಕರ್ಮಿಗಳಿಗಾಗಿ ಯೋಜನೆಯ ಮೂಲಕ 2 ಲಕ್ಷಗಳವರೆಗು ಸಾಲ, ಜೊತೆಗೆ ಕೆಲಸದ ತರಬೇತಿಯನ್ನು ಕೂಡ ನೀಡಲಾಗುತ್ತಿದೆ.

PM Vishwakarma Yojane : ದೇಶದ ಪಿಎಮ್ ನರೇಂದ್ರ ಮೋದಿ ಅವರು ವಿಶೇಷವಾಗಿ ಕಷ್ಟದಲ್ಲಿರುವವರಿಗೆ ಉಚಿತವಾಗಿ ತರಬೇತಿ ಕೊಟ್ಟು, ಸಾಲ ನೀಡಿ ಸ್ವಂತ ಉದ್ಯೋಗ ಶುರು ಮಾಡುವುದಕ್ಕೆ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಇದು. ಈ ಪಿಎಮ್ ವಿಶ್ವಕರ್ಮ ಯೋಜನೆಯಿಂದ ದೇಶದ ಕೋಟ್ಯಾಂತರ ಕುಶಲಕರ್ಮಿಗಳಿಗೆ ಸಹಾಯ ಆಗಿದೆ. ಈ ಯೋಜನೆಯಲ್ಲಿ ಯಾರೆಲ್ಲಾ ಅರ್ಜಿ ಸಲ್ಲಿಸಿ, ಸಾಲ ಮತ್ತು ತರಬೇತಿಯ ಸೌಲಭ್ಯ ಪಡೆಯಬಹುದು ಎಂದು ತಿಳಿಸುತ್ತೇವೆ ನೋಡಿ..

PM Vishwakarma Yojane :

ಈ ಯೋಜನೆಯನ್ನು ಧೋಬಿ, ಕಾರ್ಪೆಂಟರ್, ಕ್ಷೌರಿಕ ಸೇರಿದಂತೆ ಇನ್ನಿತರ 18 ವಿವಿಧ ವರ್ಗಗಳ ಕುಶಲಕರ್ಮಿಗಳಿಗಾಗಿ ಯೋಜನೆಯ ಮೂಲಕ 2 ಲಕ್ಷಗಳವರೆಗು ಸಾಲ, ಜೊತೆಗೆ ಕೆಲಸದ ತರಬೇತಿಯನ್ನು ಕೂಡ ನೀಡಲಾಗುತ್ತಿದೆ. ಮಾರ್ಕೆಟ್ ನಲ್ಲಿ ಸ್ವಂತವಾಗಿ ಕೆಲಸ ಶುರು ಮಾಡಿದರೆ ಅದರಿಂದ ಏನೆಲ್ಲಾ ಬೆನಿಫಿಟ್ಸ್ ಸಿಗುತ್ತದೆ ಎನ್ನುವುದನ್ನು ಕೂಡ ತಿಳಿಸಲಾಗಿದೆ.

Vishwakarma Yojane Benefits:

ಪಿಎಮ್ ವಿಶ್ವಕರ್ಮ ಯೋಣನೆಗಾಗಿ ಸರ್ಕಾರವು ₹13,000 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಟ್ಟಿದೆ. ಕುಶಲಕರ್ಮಿಗಳಿಗೆ (Artisans and Craftsman) ಗಳಿಗೆ ಇದು ಅದೃಷ್ಟ ಎಂದರೆ ತಪ್ಪಲ್ಲ. ಈ ಯೋಜನೆಯ ಮೂಲಕ ಕುಶಲಕರ್ಮಿಗಳು ಅಪ್ಡೇಟ್ ಆಗುವ ಹಾಗೆ ಮಾಡಬೇಕು, ಈಗಿನ ಕಾಲಕ್ಕೆ ತಕ್ಕ ಹಾಗೆ ಅವರು ಸ್ವಂತ ಉದ್ಯಮ ಮಾಡಬೇಕು ಎನ್ನುವುದು ಉದ್ದೇಶ ಆಗಿದೆ. ಗಾರೆ ಕೆಲಸದಿಂದ ಹಿಡಿದು ಇನ್ನಿತರ 18 ಕುಶಲಕರ್ಮಿ ವರ್ಗಗಳಿಗೆ ತರಬೇತಿ ಕೋಟು, ಮಾರ್ಕೆಟಿಂಗ್ ಟೆಕ್ನಿಕ್ ಗಳನ್ನು ಸಹ ಹೇಳಿಕೊಡಲಾಗುತ್ತದೆ. ಗ್ರಾಮದ ಜನರಿಗೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲ ಆಗಲಿದೆ.

ಯೋಜನೆಗೆ ಅರ್ಹತೆ ಪಡೆಯುವ ಕುಶಲಕರ್ಮಿ ವರ್ಗಗಳು ಯಾವುವು?

ಮರಗೆಲಸ ಮಾಡುವವರು, ಶಾಸ್ತ್ರಕಾರರು, ಕಮ್ಮಾರರು, ಕೊಡಲಿ ಟೂಲ್ ಕಿಟ್ ಮಾಡುವವರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಗಾರೆ ಕೆಲಸದವರು, ಮೇಸ್ತ್ರಿಗಳು, ಬುಟ್ಟಿ ಚಾಪೆ ಪೋರಕೆ ತಯಾರಿಸುವವರು, ಗೊಂಬೆ ತಯಾರಿಸುವವರು, ಕ್ಷೌರಿಕರು, ಹೂ ಕಟ್ಟುವವರು, ಧೋಬಿಗಳು, ದರ್ಜಿಗಳು, ಮೀನುಗಾರಿಕೆ ಮಾಡುವವರು.. ಈ ಎಲ್ಲರೂ ಕೂಡ ಪಿಎಮ್ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ವಿಶ್ವಕರ್ಮ ಯೋಜನೆಯ ಲಾಭಗಳು:

ಈ ಯೋಜನೆಯಲ್ಲಿ ತರಬೇತಿ ಪಡೆಯುವವರಿಗೆ ಪಿಎಮ್ ವಿಶ್ವಕರ್ಮ ಸರ್ಟಿಫಿಕೇಟ್ ಜೊತೆಗೆ ಐಡಿ ಕಾರ್ಡ್ ಕೊಡಲಾಗುತ್ತದೆ. ಅವರು ಕಲಿತಿರುವ ಕೌಶಲ್ಯಕ್ಕೆ ಅನುಗುಣವಾಗಿ ₹10,000 ಮೌಲ್ಯದ ಟೂಲ್ ಕಿಟ್ ಕೊಡಲಾಗುತ್ತದೆ. ಅಭ್ಯರ್ಥಿಗಳಿಗೆ ಒಂದು ವಾರಗಳ ತರಬೇತಿ ಸಿಗುತ್ತದೆ. ಜೊತೆಗೆ 500 ರೂಪಾಯಿ ಸ್ಟೈಪಂಡ್ ಸಿಗುತ್ತದೆ. ತರಬೇತಿ ವೇಳೆ ಅಭ್ಯರ್ಥಿಗಳಿಗೆ ಈಗಿನ ಪರಿಕರಗಳು, ಆರ್ಥಿಕ ವಿಚಾರ, ಮಾರ್ಕೆಟಿಂಗ್, ಉಡುಮಶೀಲತೆ ಇದೆಲ್ಲದರ ಬಗ್ಗೆ ಕಲಿಸಲಾಗುತ್ತದೆ.

ಒಂದು ವಾರದ ಬೇಸಿಕ್ ತರಬೇತಿ ನಂತರ 2 ವಾರಗಳ ಎಕ್ಸ್ಪರ್ಟ್ ತರಬೇತಿಯನ್ನು ನೀಡಲಾಗುತ್ತದೆ. ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಏರಲು, ಎಸ್ಕ್ಪರ್ಟ್ ತರಬೇತಿ ಸಹಾಯ ಮಾಡುತ್ತದೆ. ಬೇಸಿಕ್ ಸ್ಕಿಲ್ ಮಾತ್ರ ಕಲಿಯುವವರಿಗೆ 1 ಲಕ್ಷ ಸಾಲ ಕಡಿಮೆ ಬಡ್ಡಿಯಲ್ಲಿ ಸಿಗುತ್ತದೆ. ಎಕ್ಸ್ಪರ್ಟ್ ಲೆವೆಲ್ ತರಬೇತಿ ಪಡೆದು, ಡಿಜಿಟಲ್ ಆಗಿ ಕೆಲಸ ಕಲಿತಿರುವವರಿಗೆ, ಈ ಮೊದಲು ಮಾಡಿದ ಸಾಲವನ್ನು ಮರುಪಾವತಿ ಮಾಡಿರುವವರಿಗೆ, 2 ಲಕ್ಷದವರೆಗೂ ಸಾಲ ನೀಡಲಾಗುತ್ತದೆ. ನಿಮ್ಮ ಪ್ರಾಡಕ್ಟ್ ಗಳು ಮಾರ್ಕೆಟ್ ಗೆ ತಲುಪಲು ಸಹಾಯ ಮಾಡಲಾಗುತ್ತದೆ. ನಿಮ್ಮ ಪ್ರಾಡಕ್ಟ್ ಗಳನ್ನು Ecommerce Site ಹಾಗೂ JEM platform ಮೂಲಕ ಪ್ರಚಾರ ಮಾಡಲಾಗುತ್ತದೆ.

Also Read: Aadhar Update: ಆಧಾರ್ ಕಾರ್ಡ್ ನವೀಕರಣಕ್ಕೆ ಕೊನೆಯ ಎಚ್ಚರಿಕೆ!

Leave a comment