Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BPL Ration Card : 2.95 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್! ಯಾವಾಗ ಗೊತ್ತಾ?

ಬಿಪಿಎಲ್ ರೇಷನ್ ಕಾರ್ಡ್ ಇಲ್ಲದೇ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯ ಆಗುವುದಿಲ್ಲ. ಆದರೆ ಇಂದಿಗೂ ಕೂಡ ಕೆಲವರಿಗೆ ರೇಷನ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಆಗುತ್ತಿಲ್ಲ.

BPL Ration Card : ಪ್ರಸ್ತುತ ನಮ್ಮ ಬಳಿ ಇರಬೇಕಾದ ಮುಖ್ಯವಾದ ಗುರುತಿನ ಚೀಟಿ ಎಂದರೆ ಅದು ರೇಷನ್ ಕಾರ್ಡ್. ಹೌದು, ಸರ್ಕಾರದಿಂದ ಸಿಗುವ ಯಾವುದೇ ಪ್ರಯೋಜನವನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಇಲ್ಲದೇ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯ ಆಗುವುದಿಲ್ಲ. ಆದರೆ ಇಂದಿಗೂ ಕೂಡ ಕೆಲವರಿಗೆ ರೇಷನ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಆಗುತ್ತಿಲ್ಲ. ಅಂಥವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ..

BPL Ration Card :

ಪ್ರಸ್ತುತ ಸರ್ಕಾರ ತಂದಿರುವ ಹೊಸ ನಿಯಮದ ಅನುಸಾರ, ಬಿಪಿಎಲ್ ರೇಶನ್ ಕಾರ್ಡ್ ಇಲ್ಲದೇ ಇರುವವರಿಗೆ ಸರ್ಕಾರದಿಂದ ಹೊಸ ಮಾಹಿತಿ ಸಿಕ್ಕಿದ್ದು, ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡೋದು ಹೇಗೆ? ಅದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಹೊಸ ರೇಷನ್ ಕಾರ್ಡ್ ಅನುಕೂಲ:

ಸರ್ಕಾರ ಹೊಸದಾಗಿ ಕೊಡುವ ರೇಷನ್ ಕಾರ್ಡ್ ಗೆ ಅನ್ನಭಾಗ್ಯ ಕಾರ್ಡ್ ಎಂದು ಹೆಸರಿಡಲಾಗಿದ್ದು, ಆ ಕಾರ್ಡ್ ನಲ್ಲಿ ಅನ್ನಭಾಗ್ಯ ಕಾರ್ಡ್ ಎಂದೇ ಬರೆದಿರುತ್ತದೆ. ಹೊಸ ಕಾರ್ಡ್ ನಲ್ಲಿ ರೇಶನ್ ಪಡೆಯುವುದು ಅಥವಾ ಯೋಜನೆಗಳ ಸೌಲಭ್ಯ ಪಡೆಯಲು ಬಯಸುವುದು ಮಾತ್ರವಲ್ಲ, ಇದನ್ನು ನೀವು ಐಡಿ ಪ್ರೂಫ್ ಆಗಿ ಕೂಡ ಬಳಸಬಹುದು. ಬ್ಯಾಂಕ್, ಏರ್ ಪೋರ್ಟ್, ಗವರ್ನಮೆಂಟ್ ಆಫೀಸ್ ಗಳಲ್ಲಿ ಕೂಡ ಬಳಸಬಹುದು. ಈ ಹೊಸ ಕಾರ್ಡ್ ಕುರಿತು ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ವಿತರಣೆ ಶುರು ಮಾಡಲಾಗುತ್ತದೆ.

ಜನರಿಗೆ ಹೊಸ ಭರವಸೆ:

ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವುದು ಅಥವಾ ಸಲ್ಲಿಸುತ್ತಿರುವುದು ಈಗಲ್ಲ.. 2020ರಲ್ಲಿ ಅಂದರೆ 3 ವರ್ಷಗಳ ಹಿಂದೆಯೇ ಹೊಸ ರೇಷನ್ ಕಾರ್ಡ್ ಗಾಗಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೂ ಕೂಡ ಇನ್ನು ಹೊಸ ರೇಶನ್ ಕಾರ್ಡ್ ಸಿಕ್ಕಿಲ್ಲ. ಅವರೆಲ್ಲರೂ ತಮಗೆ ಯಾವಾಗ ಹೊಸ ರೇಶನ್ ಕಾರ್ಡ್ ಸಿಗುತ್ತದೆ ಎಂದು ಕಾಯುತ್ತಿದ್ದಾರೆ, ಅಂಥವರಿಗೆ ಈಗ ಆಹಾರ ಇಲಾಖೆಯ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಗುಡ್ ನ್ಯೂಸ್ ನೀಡಿದ್ದು, 2024ರ ಮಾರ್ಚ್ 31ರ ಒಳಗೆ ಅರ್ಜಿಗಳನ್ನು ಚೆಕ್, ಮಾಡಿ ರೇಶನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ಹೊಸ ರೇಷನ್ ಕಾರ್ಡ್ ಗಾಗಿ ಸರ್ಕಾರಕ್ಕೆ ಸುಮಾರು 2.95 ಲಕ್ಷ ಅರ್ಜಿಗಳು ಬಂದಿದೆ. ಆ ಅರ್ಜಿಗಳ ಪೈಕಿ, ಎಲ್ಲಾ ಅರ್ಜಿಗಳನ್ನು ಮಾರ್ಚ್ 31ರ ಒಳಗೆ ಪರಿಶೀಲಿಸಿ, ಬಳಿಕ ಅರ್ಜಿಗಳ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಎಪಿಎಲ್ ಕಾರ್ಡ್ ವಿತರಣೆ ಮಾಡುವುದಕ್ಕೆ ಕೂಡ ಯಾವುದೇ ತೊಂದರೆ ಎಂದು ಹೇಳಿ, ಅದನ್ನು ಕೂಡ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 10ರ ನಂತರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ, 3 ತಿಂಗಳ ನಂತರ ಅವರ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

Also Read: Kisan Credit Card Loan : ಪಶು ಸಂಗೋಪನೆ ಮಾಡುವವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ನಿಮಗೆ ಕಡಿಮೆ ಬಡ್ಡಿಯಲ್ಲಿ ಸಾಲ!

Leave a comment