Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

India vs Australia Under 19 World Cup ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಫೈನಲ್ಸ್ ಪಂದ್ಯ ಸೌತ್ ಆಫ್ರಿಕಾದ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡವು ಈವರೆಗೂ ಅಡಿರುವ 6 ಪಂದ್ಯಗಳಲ್ಲಿ ಒಂದರಲ್ಲೂ ಸೋಲು ಕಾಣದೆ

India vs Australia Under 19 World Cup: ಸೌತ್ ಆಫ್ರಿಕಾದಲ್ಲಿ ಈಗ ಅಂದಷ್ಟೇ 19 ವರ್ಲ್ಡ್ ಕಪ್ ರೋಚಕ ಪಂದ್ಯಗಳು ನಡೆಯುತ್ತಿದೆ. Under19 World cup ಪಂದ್ಯಾವಳಿಯ ಎರಡನೇ ಸೆಮಿಫೈನಲ್ಸ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಫಿನಾಲೆ ತಲುಪಿದ್ದು, ಟೀಮ್ ಇಂಡಿಯಾ ಈಗಾಗಲೇ ಫೈನಲ್ಸ್ ಪ್ರವೇಶ ಮಾಡಿದೆ. Under19 World cup ಫೈನಲ್ಸ್ ನಲ್ಲಿ India vs Australia ನಡುವೆ ಭಾರಿ ರೋಚಕ ಪಂದ್ಯ ನಡೆಯಲಿದೆ..

Finals ನಲ್ಲಿ ಟೀಮ್ ಇಂಡಿಯಾ!

ಈ ಫೈನಲ್ಸ್ ಪಂದ್ಯ ಸೌತ್ ಆಫ್ರಿಕಾದ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡವು ಈವರೆಗೂ ಅಡಿರುವ 6 ಪಂದ್ಯಗಳಲ್ಲಿ ಒಂದರಲ್ಲೂ ಸೋಲು ಕಾಣದೆ ಫೈನಲ್ಸ್ ಗೆ ಬಂದಿರುವುದನ್ನು ನೋಡಿದರೆ ನಮ್ಮ ದೇಶದ ಯುವ ಕ್ರಿಕೆಟ್ ತಂಡ ಎಷ್ಟು ಬಲಿಷ್ಠವಾಗಿದೆ ಎಂದು ಗೊತ್ತಾಗುತ್ತದೆ. ಉದಯ್ ಸಹಾರನ್ ಅವರು ಟೀಮ್ ಇಂಡಿಯಾ ಅಂಡರ್ 19 ತಂಡದ ಕ್ಯಾಪ್ಟನ್ ಆಗಿದ್ದಾರೆ. ಇವರು ಸೌತ್ ಆಫ್ರಿಕಾ ತಂಡವನ್ನು ಸೋಲಿಸಿರುವುದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಚಾರ.

ಆಸ್ಟ್ರೇಲಿಯಾ ಕೂಡ ಸೋಲು ಕಾಣದ ತಂಡ:

ಈ ವರ್ಷದ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ಆಸ್ಟ್ರೇಲಿಯಾ ಕೂಡ ಒಂದೇ ಒಂದು ಪಂದ್ಯವನ್ನು ಸೋಲದೇ ಫೈನಲ್ಸ್ ಗೆ ಬಂದಿದೆ. ಇನ್ನು ಈವರೆಗೂ ಭಾರತದ ಅಂಡರ್ 19 ತಂಡ 9 ಬಾರಿ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ಫಿನಾಲೆ ತಲುಪಿದ್ದು ಅದರಲ್ಲಿ 6 ಸಾರಿ ವರ್ಲ್ಡ್ ಕಪ್ ಗೆದ್ದಿದ್ದಾರೆ. ಆಸ್ಟ್ರೇಲಿಯಾ ತಂಡ 6 ಸಾರಿ ಫೈನಾಲೆ ತಲುಪಿದೆ. ಎರಡು ಸಾರಿ ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಡಿಯಾ ತಂಡಗಳು ಆಡಿದ್ದು, ಆ ಎರಡು ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ವಿಶೇಷ. ಈ ವರ್ಷ ಕೂಡ ಭಾರತವೇ ಗೆಲ್ಲಲಿ ಎನ್ನುವುದು ಎಲ್ಲರ ಆಸೆ..

India vs Australia Finals ಪಂದ್ಯ ಎಲ್ಲಿ? ಯಾವಾಗ ನಡೆಯಲಿದೆ?

ಎಲ್ಲರೂ ಕಾಯುತ್ತಿರುವ ಈ ಪಂದ್ಯ ಫೆಬ್ರವರಿ 11ರಂದು ನಡೆಯಲಿದೆ. ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈ ಪಂದ್ಯವು ಭಾರತದ ಸಮಯಕ್ಕೆ ಭಾನುವಾರ ಮಧ್ಯಾಹ್ನ 1:30 ರಿಂದ ಶುರುವಾಗಲಿದೆ. ಈ ಪಂದ್ಯವನ್ನು ಎಲ್ಲರೂ ಕೂಡ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗಳಲ್ಲಿ ಅಥವಾ ಡಿಸ್ನಿ+ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದು.

Leave a comment