Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Under-19 World Cup: ಅಂಡರ್ 19 ವಿಶ್ವಕಪ್ ನಲ್ಲಿ ಸೋತ ಭಾರತ! ಅಭಿಮಾನಿಗಳಲ್ಲಿ ನಿರಾಸೆ!

ಭಾರತದ ವಿರುದ್ಧ 79 ರನ್ ಗಳ ಭರ್ಜರಿ ಜಯ ಸಾಧಿಸಿದೆ ಆಸ್ಟ್ರೇಲಿಯಾ. ಅಂಡರ್ 19 ವರ್ಲ್ಡ್ ಕಪ್ ಶುರುವಾಗಿದ್ದು 1988ರಲ್ಲಿ, ಮೊದಲ ಸೀಸನ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು,

Get real time updates directly on you device, subscribe now.

Under-19 World Cup: ಅಂಡರ್ 19 ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಗಿದಿದೆ. ಈ ವರ್ಷದ ಫೈನಲ್ಸ್ ಪಂದ್ಯ ನಡೆದಿದ್ದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ. ಈ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾದ ಸೋಲು ಕಂಡಿದೆ. ಈ ರೀತಿಯಲ್ಲಿ ಆಸ್ಟ್ರೇಲಿಯಾ ತಂಡವು ಬರೋಬ್ಬರಿ 14 ವರ್ಷಗಳ ನಂತರ ಅಂಡರ್ 19 ವಿಶ್ವಕಪ್ ಟೂರ್ನಿ ಗೆದ್ದು ಬೀಗಿದೆ, ಇತ್ತ ಭಾರತ ತಂಡದ ಅಭಿಮಾನಿಗಳು ಬೇಸರಗೊಂಡಿದ್ದಾರೆ..

ಭಾರತದ ವಿರುದ್ಧ 79 ರನ್ ಗಳ ಭರ್ಜರಿ ಜಯ ಸಾಧಿಸಿದೆ ಆಸ್ಟ್ರೇಲಿಯಾ. ಅಂಡರ್ 19 ವರ್ಲ್ಡ್ ಕಪ್ ಶುರುವಾಗಿದ್ದು 1988ರಲ್ಲಿ, ಮೊದಲ ಸೀಸನ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು, ನಂತರ 2002 ರಲ್ಲಿ ಮತ್ತು 2010ರಲ್ಲಿ ಅಂಡರ್ 19 ವರ್ಲ್ಡ್ ಕಪ್ ಚಾಂಪಿಯನ್ ಆಗಿತ್ತು. ಈ ವರ್ಷ ಮತ್ತೆ ಚಾಂಪಿಯನ್ ಆಗಿದೆ. 2012 ಮತ್ತು 20218ರಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ಸ್ ತಲುಪಿತ್ತು, ಆದರೆ ಆ ಫೈನಲ್ಸ್ ನಲ್ಲಿ ಟೀಮ್ ಇಂಡಿಯಾದ ವಿರುದ್ಧ ಸೋತಿತ್ತು.

ಕಳೆದ ವರ್ಷ ಓಡಿಐ ವರ್ಲ್ಡ್ ಕಪ್ ನಡೆದಿದ್ದು ಕೂಡ ಇದೇ 2 ತಂಡಗಳ ನಡುವೆಯೇ ಆಗಿತ್ತು. ಓಡಿಐ ವರ್ಲ್ಡ್ ಕಪ್ ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ, ಫೈನಲ್ಸ್ ತಲುಪಿತು, ಆದರೆ ಎದುರಾಳಿ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ಮನೆ ತಲುಪಿತ್ತು.. ಇದರಿಂದ ಭಾರತದ ಎಲ್ಲಾ ಜನರ ಕನಸಿಗೆ ತಣ್ಣೀರು ಎರಚಿದ ಹಾಗೆ ಆಗಿತ್ತು. ಈ ಮೂಲಕ 6ನೇ ಬಾರಿ ಚಾಂಪಿಯನ್ ಆಗಿದೆ ಆಸ್ಟ್ರೇಲಿಯಾ..ಅಂಡರ್ 19 ವರ್ಲ್ಡ್ ಕಪ್ ನಲ್ಲಿ 4ನೇ ಬಾರಿ ಆಸ್ಟ್ರೇಲಿಯಾ ವರ್ಲ್ಡ್ ಚಾಂಪಿಯನ್ ಆಗಿದೆ.

ಭಾರತದ ಅಂಡರ್ 19 ಟೀಮ್ ಕಳೆದ 8 ವರ್ಷಗಳಲ್ಲಿ ಎಲ್ಲಾ ವರ್ಷವೂ ಐಸಿಸಿ ಅಂಡರ್ 19 ವರ್ಲ್ಡ್ ಚಾಂಪಿಯನ್ಶಿಪ್ ನಲ್ಲಿ ಫೈನಲ್ಸ್ ಗೆ ಬಂದಿದೆ. 2016ರಲ್ಲಿ ಫೈನಲ್ಸ್ ನಲ್ಲಿ ವಿಂಡೀಸ್ ವಿರುದ್ಧ, 2020ರ ಫೈನಲ್ಸ್ ನಲ್ಲಿ ಬಾಂಗ್ಲಾದೇಶದ ವಿರುದ್ಧ, 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2022ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ಸ್ ಗೆದ್ದಿತ್ತು ಭಾರತ. 2000 ಇಸವಿಯಲ್ಲಿ ಮೊಹಮ್ಮದ್‌ ಕೈಫ್‌ ಕ್ಯಾಪ್ಟನ್ಸಿಯಲ್ಲಿ, 2008ರಲ್ಲಿ ವಿರಾಟ್‌ ಕೊಹ್ಲಿ ಅವರ ಕ್ಯಾಪ್ಟನ್ಸಿಯಲ್ಲಿ, 2012ರಲ್ಲಿ ಉನ್ಮುಕ್‌ ಚಂದ್‌ ಕ್ಯಾಪ್ಟನ್ಶಿವಲ್ಲಿ ಚಾಂಪಿಯನ್‌ ಆಗಿದ್ದ ಭಾರತ ತಂಡ 2006ರಲ್ಲಿ ಪಾಕಿಸ್ತಾನ್ ವಿರುದ್ಧ ಫೈನಲ್ ನಲ್ಲಿ ಸೋತಿತು.

ನಿನ್ನೆ ನಡೆದ ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿ, 50 ಓವರ್ ನಲ್ಲಿ 253 ರನ್ಸ್ ಗಳಿಸಿತು, 7 ವಿಕೆಟ್ ಕಳೆದುಕೊಂಡಿತ್ತು. ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಅದ್ಭುತವಾಗಿತ್ತು. ಭಾರತ ತಂಡವನ್ನು 43ನೇ ಓವರ್ ನಲ್ಲಿ 179 ರನ್ಸ್ ಗೆ ಆಲ್ ಔಟ್ ಮಾಡಲಾಯಿತು..ಈ ರೀತಿ ಗೆದ್ದು 4ನೇ ಸಾರಿ ಚಾಂಪಿಯನ್ ಆಗಿದೆ ಆಸ್ಟ್ರೇಲಿಯಾ ತಂಡ.

India lost in the Under-19 World Cup! Disappointed in the fans!

Get real time updates directly on you device, subscribe now.

Leave a comment