Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bharat brand rice: ಕೇವಲ 29 ರೂಪಾಯಿಗೆ 1ಕೆಜಿ ಸೂಪರ್ ಕ್ವಾಲಿಟಿ ಅಕ್ಕಿ! ಬಂದೇ ಬಿಡ್ತು ಭಾರತ್ ಬ್ರ್ಯಾಂಡ್ ರೈಸ್! ಖರೀದಿ ಮಾಡಲು ಮುಗಿಬಿದ್ದ ಜನತೆ.

ಇದು ಕೇಂದ್ರ ಸರ್ಕಾರ ತಂದಿರುವ ಅನುಕೂಲ ಆಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಅತಿಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಮೂಲಕ ಗೋಧಿ ಮತ್ತು ಬೇಳೆ ಕಾಳುಗಳ ಮಾರಾಟ ಮಾಡುತ್ತಿದೆ.

Bharat brand rice: ನಮ್ಮ ದೇಶದ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಹಣದುಬ್ಬರ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿರುವ ಕಾರಣ ಸಾಮಾನ್ಯ ಜನರ ಜೀವನಕ್ಕೆ ಕಷ್ಟವಾಗಿದೆ. ಒಂದು ವೇಳೆ ನೀವು ಕೂಡ ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದರೆ ನಿಮಗಾಗಿ ಈ ಗುಡ್ ನ್ಯೂಸ್. ಕೇವಲ 29 ರೂಪಾಯಿಗೆ 1 ಕೆಜಿ ಅಕ್ಕಿ ಸಿಗುವಂಥ ಭಾರತ್ ಬ್ರ್ಯಾಂಡ್ ನ ಅಕ್ಕಿ ಲಾಂಚ್ ಆಗಿದ್ದು, ಈ ಅಕ್ಕಿಯನ್ನು ಆನ್ಲೈನ್, ಆಫ್ಲೈನ್ ಎರಡು ರೀತಿಯಲ್ಲಿ ಖರೀದಿ ಮಾಡಬಹುದು. ಹಾಗಿದ್ದರೆ ಭಾರತ್ ಅಕ್ಕಿ ಎಲ್ಲೆಲ್ಲಾ ಸಿಗುತ್ತೆ? ಸಂಪೂರ್ಣ ಮಾಹಿತಿ ತಿಳಿಸುತ್ತೇವೆ..

ಭಾರತ್ ಬ್ರ್ಯಾಂಡ್ ಅಕ್ಕಿ:

ಇದು ಕೇಂದ್ರ ಸರ್ಕಾರ ತಂದಿರುವ ಅನುಕೂಲ ಆಗಿದೆ. ಈಗಾಗಲೇ ಕೇಂದ್ರ ಸರ್ಕಾರವು ಅತಿಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಮೂಲಕ ಗೋಧಿ ಮತ್ತು ಬೇಳೆ ಕಾಳುಗಳ ಮಾರಾಟ ಮಾಡುತ್ತಿದೆ. ಅದೇ ಸಾಲಿಗೆ ಈಗ ಅಕ್ಕಿಯನ್ನು ತಂದಿದೆ. ಉತ್ತಮ ಗುಣಮಟ್ಟದ ಅಕ್ಕಿ ಕಡಿಮೆ ಬೆಲೆಯಲ್ಲಿ ಜನರಿಗೆ ಸಿಗಲಿದ್ದು, ಇದರಿಂದ ಸಾಮಾನ್ಯ ಜನರಿಗೆ ಅನುಕೂಲ ಆಗಲಿದೆ. ಹಣದುಬ್ಬರದ ವೇಳೆ ಕೇಂದ್ರ ಸರ್ಕಾರದ ಈ ನಿರ್ಧಾರ ಜನರಿಗೆ ಸಂತೋಷ ತಂದಿದೆ.

ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್:

ಕಳೆದ ವರ್ಷ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಇಂದ ಬಂದ Bharat Atta, Bharat Dal ಗಳಿಗೆ ರಾಜ್ಯ ರಾಜಧಾನಿಯಲ್ಲಿ ಬೃಹತ್ ಸ್ವಾಗತ ಸಿಕ್ಕಿದೆ. 2023ರ ಆಗಸ್ಟ್ ಇಂದ 2024ರ ಜನವರಿ ವರೆಗು ಬೆಂಗಳೂರಿನಲ್ಲಿ 2,81,572 ಕೆಜಿ ಭಾರತ್ ದಾಲ್, 1,22,190 ಕೆಜಿ ಭಾರತ್ ಆಟ್ಟಾ ಮಾರಾಟ ಆಗಿದೆ. ಈ ಸಕ್ಸಸ್ ಇಂದ ಸರ್ಕಾರ ಈಗ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ತಂದಿದೆ.

ಜನಕ್ಕೆ ಇಷ್ಟವಾಗಿದೆ ಕ್ವಾಲಿಟಿ:

ಅಷ್ಟು ಕಡಿಮೆ ಬೆಲೆಗೆ ಅಕ್ಕಿ ಕೊಡುತ್ತಾರೆ ಅಂದ್ರೆ ಕ್ವಾಲಿಟಿ ಹೇಗಿರುತ್ತೋ ಎನ್ನುವ ಪ್ರಶ್ನೆ ಉದ್ಭವ ಆಗುವುದು. ಇದನ್ನು ಖುದ್ದು ಜನರೇ ಪರೀಕ್ಷಿಸಿದ್ದಾರೆ. ಭಾರತ್ ಅಕ್ಕಿ ಹೊಂದಿದ್ದ ಮಾರಾಟ ವಾಹನ ಬೆಂಗಳೂರಿನ ವಿಧಾನಸೌಧದ ಬಳಿ ಬಂದ ಕೂಡಲೇ ಸಾಕಷ್ಟು ಜನರು ಬಂದು ಅಕ್ಕಿ ಖರೀದಿ ಮಾಡಿದ್ದು, ಅರ್ಧ ಗಂಟೆಯ 1 ಟನ್ ಅಕ್ಕಿ ಖರೀದಿ ಆಗಿದೆ. ಹಾಗೆಯೇ ಸ್ಥಳದಲ್ಲೇ ಪ್ಯಾಕೆಟ್ ಓಪನ್ ಮಾಡಿ ಅಕ್ಕಿ ಚೆಕ್ ಮಾಡಿ, ಕ್ವಾಲಿಟಿ ತುಂಬಾ ಚೆನ್ನಾಗಿದೆ ಎಂದು ಜನರು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಬೆಂಗಳೂರಿನ ಎಲ್ಲಾ ಮನೆಗಳಿಗೆ ಭಾರತ್ ಅಕ್ಕಿ:

ಭಾರತ್ ಬ್ರ್ಯಾಂಡ್ ಅಕ್ಕಿ ಬೆಂಗಳೂರಿನಲ್ಲಿ ಸರಬರಾಜು ಆಗುತ್ತಿರುವುದು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ವತಿಯಿಂದ. ಯಶವಂತಪುರದ ಗೋಡೌನ್ ಇಂದ ಒಟ್ಟು 50 ಏರಿಯಾಗಳಿಗೆ ಅಕ್ಕಿ ಸರಬರಾಜು ನಡೆಯಲಿದೆ. ಮೊಬೈಲ್ ವ್ಯಾನ್ ಬಳಸಿ ಎಲ್ಲಾ ಮನೆಗಳಿಗೆ ಅಕ್ಕಿ ವಿತರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲೇ ನೀವು ಆನ್ಲೈನ್ ಮೂಲಕ ಅಮೆಜಾನ್, ಫ್ಲಿಪ್ಕಾರ್ಟ್ ನಲ್ಲಿ ಕೂಡ ಅಕ್ಕಿ ಆರ್ಡರ್ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಅಕ್ಕಿ ನಿಮ್ಮ ಮನೆ ಸೇರುತ್ತದೆ.

ಬೆಂಗಳೂರಿನ ಎಲ್ಲೆಲ್ಲಿ ಅಕ್ಕಿ ಸಿಗುತ್ತದೆ?

ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಣ್ಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ವಿತರಣೆ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿದೆ.

1 kg of super-quality rice for just 29 rupees! Bharat Brand Rice!

Leave a comment