Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪಿಎಮ್ ಸೂರ್ಯೋದಯ ಯೋಜನೆಯಲ್ಲಿ ಮನೆಗೆ ಸೋಲಾರ್ ವಿದ್ಯುತ್ ಪ್ಯಾನೆಲ್ ಸ್ಥಾಪಿಸಲು ಎಷ್ಟು ಜಾಗ ಇರಬೇಕು?

ಸೂರ್ಯೋದಯ ಯೋಜನೆಯ ಮೂಲಕ ಮನೆಗೆ ವಿದ್ಯುತ್ ಉತ್ಪತ್ತಿ ಮಾಡುವುದಕ್ಕೇ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ತಾಪತ್ರಯ ಇರುವುದಿಲ್ಲ,

ದೇಶದ ಪಿಎಮ್ ನರೇಂದ್ರಮೋದಿ ಅವರು ನಮ್ಮ ದೇಶದ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ವರ್ಷ ಪಿಎಮ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿವಸ ಈ ಯೋಜನೆಯ ಬಗ್ಗೆ ಮೋದಿ ಅವರು ಜನರಿಗೆ ತಿಳಿಸಿದರು. ಸೂರ್ಯೋದಯ ಯೋಜನೆಯಲ್ಲಿ ಜನರಿಗೆ ಸಾಕಷ್ಟು ಸೌಲಭ್ಯವಿದೆ..

ಸೂರ್ಯೋದಯ ಯೋಜನೆ:

ಸೂರ್ಯೋದಯ ಯೋಜನೆಯ ಮೂಲಕ ಮನೆಗೆ ವಿದ್ಯುತ್ ಉತ್ಪತ್ತಿ ಮಾಡುವುದಕ್ಕೇ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ತಾಪತ್ರಯ ಇರುವುದಿಲ್ಲ, ಹಾಗೆಯೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡಬಹುದು. ಈ ಯೋಜನೆಯ ಬಗ್ಗೆ ಈ ವರ್ಷದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದರು. ಸೂರ್ಯೋದಯ ಯೋಜನೆಯ ಮೂಲಕ 1 ಕೋಟಿ ಮನೆಗಳಿಗೆ ಸೋಲಾರ್ ಶಕ್ತಿಯ ಸೌಲಭ್ಯ ಕೊಡುವುದಕ್ಕೆ ಸರ್ಕಾರ ಪ್ಲಾನ್ ಮಾಡಿದೆ.

ಯೋಜನೆಗೆ ಸರ್ಕಾರದ ಬಜೆಟ್ ಎಷ್ಟು?

ಈ ವರ್ಷದ ಕೇಂದ್ರದ ಬಜೆಟ್ ನಲ್ಲಿ ಸಚಿವಾಲಯವು ₹26,376 ಕೋಟಿ ರೂಪಾಯಿಗಳನ್ನು ಸೂರ್ಯೋದಯ ಯೋಜನೆಗಾಗಿ ಮೀಸಲಾಗಿ ಇಡಲಾಗಿದೆ. ಕಳೆದ ವರ್ಷ ಈ ಯೋಜನೆಗಾಗಿ ಮೀಸಲಿಟ್ಟಿದ್ದ ಬಜೆಟ್ ಗಿಂತ ₹17,729.46 ರೂಪಾಯಿ ಜಾಸ್ತಿ ಆಗಿದೆ. ಸರ್ಕಾರದ ಮುಖ್ಯ ಗುರಿ ಏನು ಎಂದರೆ 2026ರ ಮಾರ್ಚ್ ತಿಂಗಳ ವೇಳೆಗೆ 40 ಗಿಗಾ ವ್ಯಾಟ್ ವರೆಗು ಸೋಲಾರ್ ಸ್ಥಾಪಿತ ಸಾಮರ್ಥ್ಯ ಜಾಸ್ತಿ ಮಾಡಬೇಕು ಎನ್ನುವುದಾಗಿದೆ.

ಸೋಲಾರ್ ವಿದ್ಯುತ್ ಮೇಲ್ಛಾವಣಿ ಸ್ಥಾಪನೆಗೆ ಎಷ್ಟು ಜಾಗ ಬೇಕು?

1 ಕಿಲೋವ್ಯಾಟ್ ಸೋಲಾರ್ ಸ್ಥಾಪನೆಗೆ 10 ಚದರ ಮೀಟರ್ ವಿಸ್ತೀರ್ಣದಷ್ಟು ಜಾಗ ಬೇಕಾಗುತ್ತದೆ. 1-3 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಸ್ಥಾಪನೆಗೆ 40% ಸಬ್ಸಿಡಿ, 4-10 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಸ್ಥಾಪನೆಗೆ 20% ಸಬ್ಸಿಡಿ ಸರ್ಕಾರದಿಂದ ಸಿಗಲಿದೆ. ಇಲ್ಲಿ ನಿಮಗೆ 60% ಪೂರ್ತಿ ಸಬ್ಸಿಡಿ ಸಿಗಲಿದ್ದು, ದೊಡ್ಡ ಫ್ಯಾಕ್ಟರಿ ಗಳಲ್ಲಿ, ಆಫೀಸ್ ಗಳಲ್ಲಿ ಸೋಲಾರ್ ಪ್ಯಾನೆಲ್ ಸ್ಥಾಪಿಸಿದರೆ, 30 ಇಂದ 40% ವರೆಗು ವಿದ್ಯುತ್ ಬಿಲ್ ವೆಚ್ಚ ಕಡಿಮೆ ಮಾಡಬಹುದು.

ಸೂರ್ಯೋದಯ ಯೋಜನೆಗೆ ಅರ್ಜಿ ಪ್ರಕ್ರಿಯೆ:

*ನಿಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಸ್ಥಾಪಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು..
* http://solarrooftop.gov.in ಇದು ಸರ್ಕಾರದ ನ್ಯಾಷನಲ್ ರೂಫ್ ಟಾಪ್ ವೆಬ್ಸೈಟ್ ಆಗಿದ್ದು,, ಈ ವೆಬ್ಸೈಟ್ ಗೆ ಭೇಟಿ ನೀಡಿ.
*ಇಲ್ಲಿನ ಹೋಮ್ ಪೇಜ್ ನಲ್ಲಿ Apply for Rooftop Solar ಎನ್ನುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
*ಅಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ಬಳಿಕ Next ಆಪ್ಶನ್ ಸೆಲೆಕ್ಟ್ ಮಾಡಿ

*SANDES ಅಪ್ಲಿಕೇಶನ್ ಅನ್ನು ನಿಮ್ಮ ಫೋನ್ ಗೆ ಇನ್ಸ್ಟಾಲ್ ಮಾಡಿ, ಸೂರ್ಯೋದಯ ಯೋಜನೆಗಾಗಿ ಇರುವ QR ಕೋಡ್ ಬಳಸಿ.
*ಈ ಆಪ್ ಗೆ ಫೋನ್ ನಂಬರ್ ಮೂಲಕ, ಓಟಿಪಿ ಪಡೆದು, ಇಮೇಲ್ ಐಡಿಯನ್ನು ಹಾಕಿ ಲಾಗಿನ್ ಮಾಡಿ.
*ಬಳಿಕ ನಿಮಗೆ ಸೋಲಾರ್ ಯೋಜನೆಗೆ ಗ್ರಾಹಕರ ಐಡಿ ಸಿಗುತ್ತದೆ. ಇದೆಲ್ಲವನ್ನು ಬಳಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Leave a comment