Swanidhi Yojana: ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡುತ್ತಿರುವ ಈ ಸ್ಕೀಮ್ ನಿಂದ ಯಾವುದೇ ರೀತಿಯ ಖಾತರಿ ಇರದೆ 50,000 ಗಳವರೆಗೆ ಲೋನ್ ಸಿಗುತ್ತದೆ.
ಪ್ರಧಾನಮಂತ್ರಿ ಸ್ವಾನಿಧಿ ಎಂಬ ಹೆಸರಿನ ಸ್ಕೀಮ್ ಆಗಿದ್ದು , ಸ್ವಾವಲಂಬಿ ಭಾರತ ಎಂಬ ಶೀರ್ಷಿಕೆಯ ಇಟ್ಟುಕೊಂಡು ಶುರುವಾದ ಸ್ಕೀಮ್ ಆಗಿದೆ.
Swanidhi Yojana: ಎಲ್ಲರಿಗೂ ತಾವು ಒಂದು ಸ್ವಂತ ಉದ್ಯೋಗ ಮಾಡಿ ತಮ್ಮ ಕಾಲ ಮೇಲೆ ಇರಬೇಕು ಹತ್ತಾರು ಆಸೆ ಇದ್ದೇ ಇರುತ್ತದೆ. ಆದರೆ ಆದರೆ ಅದರೊಂದಿಗೆ ಸ್ವಂತ ಉದ್ಯಮ ಕೈಹಿಡಿಯದೆ ಇದ್ದರೆ ನಮ್ಮನ್ನು ನಾಳಿನ ಬದುಕೇನು ಎಂಬ ಭಯ ಇರುತ್ತದೆ. ಅಷ್ಟೇ ಅಲ್ಲದೆ ಜೊತೆಗೆ. ಇಂದಿನ ಎಲ್ಲಾ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಸ್ವಂತ ಉದ್ಯಮಿ ಸ್ಟಾರ್ಟ್ ಮಾಡಿದರೆ ಬಡ್ಡಿದರ ವರ್ಷಕ್ಕೆ ಸಾಲಕ್ಕಿಂತ ಹೆಚ್ಚಿರುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಣ್ಣ ಜನರ ಅವರಿಗೆ ಸಹಾಯವಾಗಲಿ ಎಂದು ನರೇಂದ್ರ ಮೋದಿ ಸರ್ಕಾರ ಒಂದು ಉತ್ತಮ ಸ್ಕೀಮನ್ನು ಜನರಿಗಾಗಿ ತಂದಿದೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ
ಮನೆ ಅಡ ಇಟ್ಟು ಅಥವಾ ನಿಮ್ಮ ಬಂಗಾರದ ಅಡವಿಟ್ಟು ಕೊಳ್ಳುವ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಈಗ. ಅಥವಾ ಯಾರೋ ಬಡ್ಡಿಗೆ ಹಣ ಕೊಡುತ್ತಾರೆಂದು ಅವರ ಬಳಿ ಹೋಗಿ ಅಂಗಲಾಚುವ ಸ್ಥಿತಿಯು ಇಲ್ಲ . ಯಾವುದೇ ರೀತಿಯ ಹೆಚ್ಚಿನ ಜಂಜಾಟಗಳಿಲ್ಲದೆ ನಿಮ್ಮ ಚಿಕ್ಕಪುಟ್ಟ ಉದ್ದಿಮೆಗಳಿಗೆ 50,000 ವರೆಗೆ ಸಾಲ ತೆಗೆದುಕೊಳ್ಳಬಹುದು.
ಈ ಸ್ಕೀಮ್ ನ ಬಗ್ಗೆ ವಿವರ (Swanidhi Yojana)
ಪ್ರಧಾನಮಂತ್ರಿ ಸ್ವಾನಿಧಿ ಎಂಬ ಹೆಸರಿನ ಸ್ಕೀಮ್ ಆಗಿದ್ದು , ಸ್ವಾವಲಂಬಿ ಭಾರತ ಎಂಬ ಶೀರ್ಷಿಕೆಯ ಇಟ್ಟುಕೊಂಡು ಶುರುವಾದ ಸ್ಕೀಮ್ ಆಗಿದೆ. 2020ರಲ್ಲಿ ಕರೋನಾ ಅಲೆಯಲ್ಲಿ ತತ್ತರಿಸಿ ಹೋದ ಸಣ್ಣ ಪುಟ್ಟ ವ್ಯಾಪಾರಿಗಳ ಸಹಾಯಕ್ಕೆ ನಿಂತ ಸರ್ಕಾರ, ಬೀದಿ ವ್ಯಾಪಾರ ಮಾಡುವ ಸಣ್ಣ ಪುಟ್ಟ ಜನರಿಗೆ ಮೊದಲು ಹತ್ತು ಸಾವಿರ ರೂಪಾಯಿ ಸಿಗುತ್ತದೆ. ಸರಿಯಾಗಿ ನೀವು ರೂ.10,000ಗಳನ್ನು ಹಿಂದಿರುಗಿಸಿದರೆ, 20 ಸಾವಿರ ರೂಪಾಯಿಗಳನ್ನು ನೀನು ಸಾಲವಾಗಿ ಪಡೆಯಬಹುದು. ನಂತರ ಮತ್ತೆ ನೀವು 20,000 ತೀರಿಸಿದ ನಂತರ ನೀವು 50,000ಗಳನ್ನು ಪಡೆಯಲು ಸಾಧ್ಯ.
ಸರ್ಕಾರ ನೀಡುವ ರಿಯಾಯಿತಿ ಹಣದ ವಿವರ (Swanidhi Yojana)
ಯಾವುದೇ ಖಾತರಿಯಿಲ್ಲದೆ 50,000 ಗಳು ವರೆಗೆ ಮೂರು ಹಂತಗಳಲ್ಲಿ ನಿಮಗೆ ಸರ್ಕಾರ ಹಣ ನೀಡುವುದರ ಜೊತೆಗೆ ರಿಯಾಯಿತಿ ಹಣ ಸಹ ಸಿಗುತ್ತದೆ. ನೀವು ಲೋನ್ ತೆಗೆದುಕೊಂಡ ಸರಿಯಾದ ಸಮಯಕ್ಕೆ ಹಿಂತಿರುಗಿಸಿದರೆ ನಿಮಗೆ ಲೋನ್ ನ ಇಂಟರೆಸ್ಟ್ ಮೇಲೆ ಏಳು ಪರ್ಸೆಂಟ್ ಹಣ ಸಿಗುತ್ತದೆ. ನೀವು ಯಾವುದೇ ಆನ್ಲೈನ್ ಪೇಮೆಂಟ್ ಮಾ ಲೋನ್ ಮರುಪಾವತಿಸಿದರೆ, ಒಂದು ಸಾವಿರ ರೂಪಾಯಿ ತನಕ ಕ್ಯಾಶ್ಬ್ಯಾಕನ್ನು ಪಡೆಯಬಹುದು.
ಅಪ್ಲಿಕೇಶನ್ ಹಾಕುವುದು ಹೇಗೆ?
1.https://pmsvanidhi.mohua.gov.in/ ಈ ಸೈಟ್ ಗೆ ಹೋಗಿ
2. ಅಪ್ಲೈ ಲೋನ್ 10K (apply lone 10k ) ಅಥವಾ ಅಪ್ಲೈ ಲೋನ್ 20K (apply lone 20k ) ಅಥವಾ ಅಪ್ಲೈ ಲೋನ್ 50K (apply lone 50k ) ಅನ್ನುವ ಆಪ್ಷನ್ ನಲ್ಲಿ ನಿಮಗೆ ಬೇಕಾದ ಲೋನ್ ಅನ್ನು ಆಯ್ಕೆ ಮಾಡಿ
3. ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಹಾಗೂ ಕೆಳಗೆ ಕಾಣುವ ಕ್ಯಾಪ್ತ (captha ) ಒತ್ತಿ
4. ಮೊಬೈಲ್ ಗೆ ಬಂದ OTP ಹಾಕಿ
5. ನಿಮ್ಮ ಆಧಾರ್ ಸಂಖ್ಯೆ ನಿಮ್ಮ ಬ್ಯಾಂಕ್ ಡೀಟೈಲ್ಸ್ ಹಾಕಿ
6. ನಂತರ ನಿಮಗೆ ಮೊಬೈಲ್ ಗೆ ಅರ್ಜಿ ಹಾಕಿರುವ ಬಗ್ಗೆ ಮೆಸೇಜ್ ಬರುತ್ತದೆ.
Steps to get loan from Swanidhi Yojana
ಓದಲು ಹೆಚ್ಚಿನ ಸುದ್ದಿಗಳು:
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.