Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Fake Loan Apps: ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ ಸಾಲದಿಂದ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆ, ಚೀನಾ ಲೋನ್ ಆಪ್ ಗಳ ಬಗ್ಗೆ ಧ್ವನಿ ಎತ್ತಿದ ಯುವಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ.

ಇದರಿಂದ ಸಲ ಪಡೆದ ಕೆಲವು ವಿದ್ಯಾರ್ಥಿಗಳು ಮತ್ತು, ಯುವಕರು ಮನ ನೊಂದು, ಮನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಕೇಳಿ ಬರುತ್ತಿದೆ,

Fake Loan Apps: ರಾಜ್ಯದಲ್ಲಿ ನಾನಾ ಕಡೆ, ಶಾಲಾ ಮತ್ತು ಕಾಲೇಜ್ ಓದುವ ವಿದ್ಯಾರ್ಥಿಗಳು ಮತ್ತು, ಕೆಲಸ ಇಲ್ಲದೆ ಬೇಸತ್ತ ಕೆಲವು ಯುವಕರು ಧಾವಂತ ಮತ್ತು ಆತುರದಿಂದ ಹಿಂದೆ ಮುಂದೆ ಯೋಚನೆ ಮಾಡದೆ ಆನ್ಲೈನ್ ಮುಖಾಂತರ ಲೋನ್ (Online Loan) ಪಡೆಯುತ್ತಾರೆ, ಅದೇ ರೀತಿ ಲೋನ್ ಆಪ್ ಗಳು, ಯಾವುದೇ ರೀತಿಯ ಪುರಾವೆಗಳನ್ನು ಪರಿಶೀಲನೆ ಮಾಡದೆ ಹಾಗೂ ಹಣ ಪಡೆಯುವವರ ಸಿಬಿಲ್ (CIBIL) ವಿವರ ಮತ್ತು ಹಣ ಕಾಸಿನ ವ್ಯವಸ್ಥೆಯನ್ನು ಚೆಕ್ ಮಾಡದೇ ಲೋನ್ ನೀಡುತ್ತಾರೆ, ವಿದ್ಯಾರ್ಥಿಗಳು ಮತ್ತು ಯುವಕರು, ಅದನ್ನು ಸರಿಯಾದ ಸಮಯದಲ್ಲಿ ಮರು ಪಾವತಿ ಮಾಡುವಲ್ಲಿ ವಿಫಲರಾಗುತ್ತಾರೆ, ಹಾಗು ಇದನ್ನೇ ಗುರಿಯಾಗಿ ಇಟ್ಟುಕೊಳ್ಳುವ ಕೆಲವು ಲೋನ್ ಅಪ್ಲ್ಲಿಕೇಷನ್ ಗಳು ಅಥವಾ ಲೋನ್ ನೀಡುವ ಕೆಲವು ಸಂಸ್ಥೆಗಳು ಸಾಲ ಪಡೆದ ವ್ಯಕ್ತಿಗಳ, ಕೆಲವು ವೈಯ್ಯುಕ್ತಿಕ ಮಾಹಿತಿಗಳನ್ನು ಸಾಲಗಾರನಿಗೆ ಅರಿವಿಗೆ ಬರದಂತೆ ತೆಗೆದು ಕೊಳ್ಳುತ್ತಾರೆ.

ಹಾಗು ಅವರ ವೈಯ್ಯುಕ್ತಿಕ ಮಾಹಿತಿಗಳನ್ನು ಪಡೆದುಕೊಂಡು, ನಾನಾ ರೀತಿಯಲ್ಲಿ ಪೀಡಿಸಲು ಶುರು ಮಾಡುತ್ತಾರೆ ಉದಾಹರಣೆಗೆ ಸಾಲಗಾರನ ಮನೆ ಬಳಿ ಹೋಗಿ ಗಲಾಟೆ ಮಾಡುವುದು, ಸಾಲಗಾರನ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕರೆ ಮಾಡಿ ಸುಳ್ಳು ಮತ್ತು ಅವಹೇಳನ ಕಾರಿ ಮಾತುಗಳನ್ನು ಬಿತ್ತರಿಸುವುದು ಹಾಗು ಅಸಭ್ಯವಾಗಿ ವರ್ತಿಸುವುದು ಹಾಗು ಕೆಟ್ಟ ಮಾತುಗಳಿಂದ ನಿಂದಿಸುವ ಕೆಲಸವನ್ನು ಮಾಡುತ್ತಾರೆ, ಇದರಿಂದ ಸಲ ಪಡೆದ ಕೆಲವು ವಿದ್ಯಾರ್ಥಿಗಳು ಮತ್ತು, ಯುವಕರು ಮನ ನೊಂದು, ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಕೇಳಿ ಬರುತ್ತಿದೆ, ಸಣ್ಣ ಮೊತ್ತದ ಹಣಕ್ಕೆ ಕೈ ಚಾಚಿ, ಮತ್ತೆ ಮರು ಪಾವತಿ ಮಾಡಲಾಗದ ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಂಡರೆ, ಅವರ ಭವಿಷ್ಯವು ಹಾಳಾಗುತ್ತದೆ.

Post letter to state and central government about Fake Loan Apps

ಹಾಗು ಅವರ ತಂದೆ ತಾಯಿಗಳಿಗೆ ತುಂಬಲಾಗದ ನಷ್ಟವಾಗುತ್ತದೆ, ಇದನ್ನು ಹೇಗಾದರೂ ಮಾಡಿ ಕಡಿವಾಣ ಹಾಕಬೇಕು ಎಂಬ ನಿರ್ಣಯದಿಂದ ಹಾಸನದ ವರುಣ್ ಚಕ್ರವರ್ತಿ ಎಂಬುವ ಯುವಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ, ವರುಣ್ ತಾನು ಕಣ್ಣಾರೆ ಕಂಡ ಸನ್ನಿವೇಶಗಳನ್ನು ವಿವರವಾಗಿ ಹೇಳಿ ಕೊಂಡಿದ್ದಾರೆ, ಮತ್ತು ಲೋನ್ ಆಪ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ, ವರುಣ್ ಬರೆದ ಪತ್ರ ಮತ್ತು ಪತ್ರದಲ್ಲಿ ಇರುವ ಪೂರ್ತಿ ವಿವರಣೆ ಕೆಳಗಿನಂತಿವೆ ಪೂರ್ತಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಈ ವಿಚಾರದ ಬಗ್ಗೆ ತಿಳಿಸಿ ಅದಕ್ಕೂ ಮುನ್ನ ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ

Fake Loan Apps ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಕೆಲವು ಚೀನಾ ಲೋನ್ ಆಪ್ ಗಳು ಮೊಬೈಲ್ ಆಪ್ ಗಳ ಮೂಲಕ ಅಮಾಯಕರಿಗೆ, ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಲೋನ್ ನೀಡುತ್ತಿದ್ದು ಕೆಲವು ಲೋನ್ ಆ್ಯಪ್ (Loan Apps) ಕಿರುಕುಳಕ್ಕೆ ಹೆದರಿ ಹಲವಾರು ಜನರು ಆತ್ಮಹತ್ಯೆಗೆ ಮುಂದಾಗುತ್ತಿರುವುದು ವಿದ್ಯಾರ್ಥಿಗಳಿಂದ ನಮ್ಮ ಕಾಂಗ್ರೆಸ್ ಕಚೇರಿಗೆ ದೂರು ಬಂದಿದ್ದು ಚೀನ ಲೋನ್ (China Loan Apps) ಆಪ್ ಗಳ ಅಟ್ಟಹಾಸಕ್ಕೆ ಕಡಿವಣ್ಣಹಾಕಲು ಹಾಗೂ ಆ್ಯಪ್ ಗಳ ಕಿರುಕುಳವನ್ನು ನಿಲ್ಲಿಸಲು ಹಾಗು ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಇಂತಹ ಲೋನ್ ಆ್ಯಪ್ ವಿರುದ್ಧ ನಿರ್ದಾಕ್ಷಿಣೀಯವಾಗಿ ಕಾನೂನು ಕ್ರಮ ಜರಗಿಸಬೇಕು ಈ ಲೋನ್ ಆ್ಯಪ್ ಗಳು ಸಾಲಗಾರರ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ (Aadhaar Card) ಪಾನ್ ಕಾರ್ಡ್ (PAN Card) ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿಯನ್ನು (Personal Information) ಹಾಗು ಅವರ ಫೋಟೋಗಳನ್ನು ಕದ್ದು ಅಶ್ಲೀಲ ರೂಪಕ್ಕೆ ತಿರುಚಿ ಬ್ಲಾಕ್ ಮೇಲ್ (Blackmail) ಮಾಡುವ ಜಾಲಗಳ ವಿರುದ್ಧ ಹಾಗೂ ಸಾಲ ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್ ಕಂಪನಿಗಳು ಸಾಲಗಾರರಿಗೆ ಗೊತ್ತಾಗದಂತೆ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು.

letter to state and central government about Fake Loan Apps

ಸಾಲ ಮರುಪಾವತಿಸಲು (Loan repayment) ವಿಫಲವಾದರೆ ಈ ಲೋನ್ ಅಪ್ಲಿಕೇಶನ್ ಕಂಪನಿಗಳು ಪಿಡಿಸಲು ಅವರ ವೈಯಕ್ತಿಕ ಮಾಹಿತಿಯನ್ನು ಬಳಸುತ್ತಿದೆ ಪ್ರತಿನಿತ್ಯ ನೂರಾರು ಜನರು ಇಂತಹ ಲೋನ್ ಆಪ್ ಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿದ್ದಾರೆ ಸಾಲಗಾರರು ಬಡ್ಡಿಯ ಸಮೇತ ಸಾಲದ ಹಣವನ್ನು ಕಟ್ಟಿದರು ಕೂಡ ಲೋನ್ ಆ್ಯಪ್ ಅಪ್ಲಿಕೇಶನ್ ಕಂಪನಿಗಳು ಮಾರ್ಪಿಂಗ್ ಫೋಟೋಗಳ (Morphing photo) ಸಹಾಯದಿಂದ ಸಾಲಗಾರರನ್ನು ಬೆದುರಿಸಿ ಸುಲಿಗೆ ಮಾಡುತ್ತಿವೆ ಅಮಾಯಕ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.

ಹಾಗೂ ಈ ಆಪ್ ಗಳು ವಿಷ ಇದ್ದಂತೆ ಎಂದು ಜನಗಳು ಅರಿತಿರಬೇಕು ಸಾರ್ವಜನಿಕರಿಗೆ ಯಾವುದೇ ದಾಖಲೆ ಪತ್ರಗಳು ಇಲ್ಲದೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಇಂತಹ ಲೋನ್ ಆ್ಯಪ್ ಗಳ ಬಲೆಗೆ ಬೀಳುತ್ತಿದ್ದಾರೆ ಕರ್ನಾಟಕದ ಜನತೆಯ ಪರವಾಗಿ ಇವುಗಳ ನಿಷೇಧದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ (All India Congress Committee Human Rights Commission Hassan) ಹಾಸನದ ಮಾಜಿ ಜಿಲ್ಲಾಧ್ಯಕ್ಷರು ವರುಣ್ ಚಕ್ರವರ್ತಿ ಅವರು ಮನವಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಯುವಕರೇ ಇದರ ಆಮಿಶಕ್ಕೆ ಯಾರು ಬಲಿಯಾಗಬಾರದು ಯಾವುದೊ ಸಣ್ಣ ಸಮಸ್ಯೆಯನ್ನು ಸರಿ ಮಾಡಲು ಹೋಗಿ ದೊಡ್ಡ ಸಮಸ್ಯೆಗಳಿ ಬಂದಿಯಾಗಬೇಡಿ, ನಿಮ್ಮ ಮನೆಯಲ್ಲಿ ದೊಡ್ಡವರ ಜೊತೆ ಕೂತು ಮಾತನಾಡಿ ಸಮಸ್ಯೆ ಸರಿ ಮಾಡಿಕೊಳ್ಳಿ ಸಲ ಮಾಡಿಕೊಳ್ಳಬೇಡಿ.

letter to state and central government about Fake Loan Apps

Letter to state and central government about Fake Loan Apps

ಓದಲು ಹೆಚ್ಚಿನ ಸುದ್ದಿಗಳು:

New RBI Rules for Loans: ಬ್ಯಾಂಕ್ ನಲ್ಲಿ ಸಾಲ ಮಾಡಿ ಸಾಲ ತೀರಿಸಲು ಕಷ್ಟ ಪಡುತ್ತಿದ್ದರೆ ಚಿಂತೆ ಬಿಟ್ಟುಬಿಡಿ, ಮೊದಲು RBI ನ ಈ ಹೊಸ ರೂಲ್ಸ್ ಅನ್ನು ಇಂದೇ ತಿಳಿಯಿರಿ.

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment