Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Udyogini Loan Scheme: ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ ₹3 ಲಕ್ಷದವರೆಗು ದಾಖಲೆರಹಿತ ಸಾಲ! ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್!

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಇದೀಗ ಮಹಿಳೆಯರಿಗೆ ಸ್ವಂತ ಉದ್ಯಮ ಶುರು ಮಾಡಲು ಅನುಕೂಲ ಆಗುವ ಹಾಗೆ ಉದ್ಯೋಗಿನಿ ಯೋಜನೆಯನ್ನು ಶುರು ಮಾಡಲಾಗಿದೆ.

Udyogini Loan Scheme: ದೇಶದ ಹಾಗೂ ರಾಜ್ಯದ ಮಹಿಳೆಯರು ಆರ್ಥಿಕವಾಗಿ ಉತ್ತಮ ಸ್ಥಾನ ತಲುಪಬೇಕು, ಮಹಿಳಾ ಸಬಲೀಕರಣ ನಡೆಯಬೇಕು ಎಂದು ಮಹಿಳೆಯರಿಗೆ ಸಪೋರ್ಟ್ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂಥಾದ್ದೊಂದು ವಿಶೇಷವಾದ ಯೋಜನೆಯಲ್ಲಿ ನಿಮಗೆ 3 ಲಕ್ಷದವರೆಗು, ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಸಾಲ ಯೋಜನೆ ಯಾವುದು? ಮಹಿಳೆಯರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ನೋಡಿ..

ಉದ್ಯೋಗಿನಿ ಯೋಜನೆ:

2023ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಇದೀಗ ಮಹಿಳೆಯರಿಗೆ ಸ್ವಂತ ಉದ್ಯಮ ಶುರು ಮಾಡಲು ಅನುಕೂಲ ಆಗುವ ಹಾಗೆ ಉದ್ಯೋಗಿನಿ ಯೋಜನೆಯನ್ನು ಶುರು ಮಾಡಲಾಗಿದೆ. ರಾಜ್ಯದ ಪ್ರಮುಖ ಬ್ಯಾಂಕ್ ಗಳಲ್ಲಿ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಮಹಿಳೆಯರು ಸಣ್ಣದಾಗಿ ಸ್ವಂತ ಉದ್ಯಮ ಶುರು ಮಾಡಲು, ಸಾಲ ಸೌಲಭ್ಯ ನೀಡಲಾಗುತ್ತದೆ. ಸಹಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಇಲ್ಲೆಲ್ಲಾ ಸುಲಭವಾಗಿ ಉದ್ಯೋಗಿನಿ ಯೋಜನೆಯ ಮೂಲಕ ಸಾಲ ಪಡೆಯಬಹುದು.

ಉದ್ಯೋಗಿನಿ ಯೋಜನೆಯ ವಿಶೇಷತೆಗಳು:

ಉದ್ಯೋಗಿನಿ ಯೋಜನೆಯ ಸೌಲಭ್ಯವೂ SC/ST ವರ್ಗದವರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿ ಇದ್ದು, ಅವುಗಳು ಏನೇನು ಎಂದು ನೋಡುವುದಾದರೆ..

SC/ST ವರ್ಗದವರಿಗೆ ಉದ್ಯೋಗಿನಿ ಯೋಜನೆಯ ಮಾನದಂಡ:

ವಾರ್ಷಿಕ ಆದಾಯ ಮಿತಿ: ₹2,00,00 ಲಕ್ಷ ರೂಪಾಯಿಗಳು
ಘಟಕದ ಖರ್ಚು: 1 ಲಕ್ಷದಿಂದ 3 ಲಕ್ಷದವರೆಗು
ಸಹಾಯಧನ: 50% ಇರುತ್ತದೆ.

ಸಾಮಾನ್ಯ ವರ್ಗದವರಿಗೆ ಉದ್ಯೋಗಿನಿ ಯೋಜನೆ ಮಾನದಂಡ:

ವಾರ್ಷಿಕ ಆದಾಯ ಮಿತಿ: ₹1,50,000 ಲಕ್ಷ ರೂಪಾಯಿಗಳು
ಘಟಕದ ಖರ್ಚು: ಮ್ಯಾಕ್ಸಿಮಮ್ 3 ಲಕ್ಷ ರೂಪಾಯಿಗಳು
ಸಹಾಯಧನ: 30% ಇರುತ್ತದೆ.

ಉದ್ಯೋಗಿನಿ ಸಾಲ ಪಡೆಯಲು ಅರ್ಹತೆ:

 • ಜೆನೆರಲ್ ಕ್ಯಾಟಗರಿ ಹಾಗೂ ವಿಶೇಷ ವರ್ಗದ ಮಹಿಳೆಯರ ವಾರ್ಷಿಕ ಆದಾಯ ಒಂದೂವರೆ ಲಕ್ಷಕ್ಕಿಂತ ಕಡಿಮೆ ಇರಬೇಕು.
 • 18 ರಿಂದ 55 ವರ್ಷಗಳ ಮಹಿಳೆಯರು ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
 • ಅರ್ಜಿ ಹಾಕುವ ಮಹಿಳೆಯರ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಎನ್ನುವುದು ಗಮನದಲ್ಲಿರಲಿ.

ಯಾವ ಬ್ಯುಸಿನೆಸ್ ಶುರು ಮಾಡಲು ಸಾಲ ಸಿಗುತ್ತದೆ?

 1. ಮಸಾಲೆ ಪದಾರ್ಥ ತಯಾರಿಕೆ
 2. ಗಿಡಗಳ ನರ್ಸರಿ ಶುರು ಮಾಡಲು
 3. ಬೆಡ್ ಶೀಟ್ ತಯಾರಿಕೆಗೆ
 4. ರೇಷನ್ ಅಂಗಡಿ ತೆರೆಯಲು
 5. ಬಳೆ ತಯಾರಿಕೆಗೆ
 6. ಕಾಫಿ ಪುಡಿ, ಟೀ ಪುಡಿ ತಯಾರಿಕೆಗೆ
 7. ಗಿಫ್ಟ್ ಶಾಪ್
 8. ಬ್ಯೂಟಿ ಪಾರ್ಲರ್ ಶುರು ಮಾಡಲು
 9. ಫೋಟೋ ಸ್ಟುಡಿಯೋ
 10. ಚಿನ್ನ ಗಿರವಿ ಅಂಗಡಿ
 11. ಬುಕ್ ಬೈಂಡಿಂಗ್
 12. ಪ್ಲಾಸ್ಟಿಕ್ ವಸ್ತುಗಳ ಮಾರಾಟ ಅಂಗಡಿ
 13. ಐಸ್ ಕ್ರೀಮ್ ಅಂಗಡಿ
 14. ಮಡಿಕೆ ಅಂಗಡಿ
 15. ಡೈರಿ ಅಥವಾ ಕೋಳಿ ಸಾಕಣಿಕೆ
 16. ದಿನಬಳಕೆ ವಸ್ತುಗಳ ಅಂಗಡಿ
 17. ಟೇಲರ್ ಅಂಗಡಿ
 18. ಕಬ್ಬಿನ ವ್ಯಾಪಾರ
 19. ಹತ್ತಿ ದಾರ ತಯಾರಿಕೆ
 20. ಹೂವಿನ ಅಂಗಡಿ
 21. ಕೇಟರಿಂಗ್ ಬಿಸಿನೆಸ್
 22. ಸೋಪ್ ತಯಾರಿಕೆ
 23. ಆಹಾರ ಮತ್ತು ಎಣ್ಣೆ ಅಂಗಡಿ
 24. ಟೀ ಟ್ಯಾಪ್
 25. ಧೂಪದ್ರವ್ಯವನ್ನು ತಯಾರಿಕೆ
 26. ಕರಕುಶಲ ವಸ್ತುಗಳ ವ್ಯಾಪಾರ
 27. ತೆಂಗಿನಕಾಯಿ ವ್ಯಾಪಾರ
 28. ಟ್ರಾವೆಲ್ ಏಜೆನ್ಸಿ
 29. ಬೇಕರಿ
 30. ಸ್ವೀಟ್ ಶಾಪ್
 31. ರೇಷ್ಮೆ ನೇಯ್ಗೆ
 32. ಚಪ್ಪಲಿ ತಯಾರಿಕೆ ಮತ್ತು ವ್ಯಾಪಾರ
 33. STD ಬೂತ್
 34. ಕ್ಯಾಂಡಲ್ ತಯಾರಿಕೆ
 35. ಹಳೆಯ ಪೇಪರ್ ಮಾರ್ಟ್ ಸಂಸ್ಥೆ
 36. ಮೆಡಿಕಲ್ ಲ್ಯಾಬ್
 37. ಸ್ಟೇಷನರಿ ಶಾಪ್
 38. ಹಪ್ಪಳ ವ್ಯಾಪಾರ
 39. ತರಕಾರಿ ಮತ್ತು ಹಣ್ಣಿನ ಅಂಗಡಿ
 40. ಕಂಪ್ಯೂಟರ್ ಟ್ರೇನಿಂಗ್ ಸೆಂಟರ್
 41. ಕ್ಯಾಂಟೀನ್ ಅಥವಾ ಧಾಬಾ
 42. ನ್ಯೂಸ್ ಪೇಪರ್
 43. ಮ್ಯಾಗಜೀನ್ ಅಂಗಡಿ
 44. ಪಾನ್ ಮತ್ತು ಸಿಗರೇಟ್
 45. ಕ್ಲಿನಿಕ್
 46. ಟ್ಯುಟೋರಿಯಲ್
 47. ಮಟನ್ ಮತ್ತು ಚಿಕನ್ ಅಂಗಡಿ
 48. ಹಾಸಿಗೆ ವ್ಯಾಪಾರ
 49. ಆಹಾರ ವ್ಯಾಪಾರ,
 50. ಡ್ರೈ ಕ್ಲೀನಿಂಗ್
 51. ಚಾಪೆ ನೇಯುವ ವ್ಯಾಪಾರ
 52. ಗ್ರಂಥಾಲಯ. ಇವುಗಳನ್ನು ತೆರೆಯಲು ಸಾಲ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು:

 • 2 passport-size photos
 • ಆಧಾರ್ ಕಾರ್ಡ್
 • Birth Certificate
 • BPL Ration Card Copy
 • Income Certificate
 • Caste Certificate
 • Bank Passbook Details
 • ಆಧಾರ್ ಸೀಡಿಂಗ್ ಆಗಿರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಆಸಕ್ತಿ ಇರುವ ಜನರು ಅಗತ್ಯವಿರುವ ದಾಖಲೆಗಳ ಜೊತೆಗೆ ನಿಮ್ಮ ಹತ್ತಿರದ ಬಾಪೂಜಿ ಕೇಂದ್ರ, ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಕೇಂದ್ರಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

From the Udyogini Loan Scheme, women will get a loan of Rs 3 lakh to start their own business!

Leave a comment