Top Up Loans: ಮನೆ ಹಳೇದಾಗಿದೆ ರೆಡಿ ಮಾಡಿಸ್ಬೇಕು ಆದರೆ ಏನ್ ಮಾಡೋದು ದುಡ್ಡ್ ಇಲ್ಲ ಅನ್ನೋ ಚಿಂತೆ ಬಿಡಿ, ಈಗಲೇ ಈ ರೀತಿ ಸುಲಭವಾಗಿ ಟಾಪ್ ಅಪ್ ಲೋನ್ ಪಡೆಯಿರಿ
ಇದು ಬ್ಯಾಂಕ್ ನಲ್ಲಿ ಲೋನ್ ಪಡೆದಿರುವವರಿಗಾಗಿ ನೀಡುವ ಒಂದು ಸೌಲಭ್ಯ ಆಗಿದೆ. ಈಗಾಗಲೇ ನೀವು ಹೋಮ್ ಲೋನ್ ಪಡೆದಿದ್ದರೆ, ರೀಚಾರ್ಜ್ ರೀತಿ ಮಾಡಿಸಿ, ಹೆಚ್ಚುವರಿ ಲೋನ್ ಪಡೆಯಬಹುದು.
Top Up Loans: ನಮ್ಮಲ್ಲಿ ಸಾಕಷ್ಟು ಜನರು ಮನೆ ಕಟ್ಟಲು ಹೋಮ್ ಲೋನ್ ಪಡೆದರು ಸಹ, ಲೋನ್ ಇಂದ ಬಂದಿರುವ ಹಣ ಸಾಕಾಗೋದಿಲ್ಲ. ಆ ರೀತಿ ಇದ್ದಾಗ ಬೇರೆ ಕಡೆ ಸಾಲ ಮಾಡಿ ತೊಂದರೆಗೆ ಸಿಲುಕಿಕೊಳ್ಳುವುದು ಉಂಟು. ಆದರೆ ಈಗ ಆ ರೀತಿ ಆಗುವ ಯೋಚನೆ ಇಲ್ಲ. ಏಕೆಂದರೆ ಹೋಮ್ ಲೋನ್ ಮೇಲೆ ಈಗ ಬ್ಯಾಂಕ್ ಇಂದಲೇ ಹೆಚ್ಚುವರಿಯಾಗಿ ಸಾಲ ಪಡೆಯಬಹುದು. ಈ ಒಂದು ಆಯ್ಕೆಯನ್ನು ಟಾಪ್ ಅಪ್ ಲೋನ್ ಎಂದು ಕರೆಯುತ್ತಾರೆ. ಈ ಟಾಪ್ ಲೋನ್ ಅಂದ್ರೆ ಏನು ಎಂದು ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಟಾಪ್ ಅಪ್ ಲೋನ್ ಎಂದರೇನು? (Top Up Loans)
ಇದು ಬ್ಯಾಂಕ್ ನಲ್ಲಿ ಲೋನ್ ಪಡೆದಿರುವವರಿಗಾಗಿ ನೀಡುವ ಒಂದು ಸೌಲಭ್ಯ ಆಗಿದೆ. ಈಗಾಗಲೇ ನೀವು ಹೋಮ್ ಲೋನ್ ಪಡೆದಿದ್ದರೆ, ರೀಚಾರ್ಜ್ ರೀತಿ ಮಾಡಿಸಿ, ಹೆಚ್ಚುವರಿ ಲೋನ್ ಪಡೆಯಬಹುದು. ಈ ಹೆಚ್ಚುವರಿ ಹಣ ನೀಡುವ ಸೌಲಭ್ಯಕ್ಕೆ ಬ್ಯಾಂಕ್ ನಲ್ಲಿ ಟಾಪ್ ಅಪ್ ಲೋನ್ ಎಂದು ಕರೆಯುತ್ತಾರೆ. ಮನೆಯ ಇಂಟೀರಿಯರ್ ಸರಿಪಡಿಸಲು,ಏನಾದರೂ ರಿಪೇರಿ ಕೆಲಸ ಮಾಡಿಸಲು, ಹಾಗೂ ಇನ್ನಿತರ ಕಾರಣಕ್ಕೆ ಹೋಮ್ ಲೋನ್ ಗಳನ್ನು ಪಡೆಯಬಹುದು.
ಮರುಪಾವತಿ ಸಾಮರ್ಥ್ಯ?
ಮಾರ್ಕೆಟ್ ನಲ್ಲಿ ನಿಮ್ಮ ಪ್ರಾಪರ್ಟಿ ಬೆಲೆ ಜಾಸ್ತಿಯಾದರೆ, ನೀವು ಈಗ ಇಎಂಐ ಕಟ್ಟುತ್ತಿರುವ ಸಾಲದಲ್ಲಿ ಹೇಗೆ ಪಾವತಿ ಮಾಡುತ್ತಿದ್ದೀರಾ ಎಂದು ಟ್ರ್ಯಾಕ್ ರೆಕಾರ್ಡ್ ಚೆಕ್ ಮಾಡಲಾಗುತ್ತದೆ. ಇದನ್ನೇ ಮರುಪಾವತಿ ಎಂದು ಹೇಳುತ್ತಾರೆ.
Free Home Scheme: ಮಧ್ಯಮ ವರ್ಗದ ಜನರಿಗೆ ಕೇಂದ್ರದಿಂದ ವಿಶೇಷ ವಸತಿ ಯೋಜನೆ! ನಿಮ್ಮ ಕನಸುಗಳು ನನಸಾಗುವ ಸಮಯ
ಟಾಪ್ ಅಪ್ ಲೋನ್:
ಮನೆಯ ಕೆಲಸಗಳಿಗೆ ಮಾತ್ರವಲ್ಲದೆ ಬೇರೆ ಕೆಲಸಕ್ಕೂ ಟಾಪ್ ಅಪ್ ಹೋಮ್ ಲೋನ್ ಕೊಡಲಾಗುತ್ತದೆ. ವಿದ್ಯಾಭ್ಯಾಸ, ಮದುವೆ, ಹಾಸ್ಪಿಟಲ್ ಬಿಲ್, ಪರ್ಸನಲ್ ಖರ್ಚುಗಳು ಮತ್ತು ಇನ್ನಿತರ ಖರ್ಚುಗಳಿಗೆ ನೀವು ಬ್ಯಾಂಕ್ ಇಂದ ಸಾಲ ಪಡೆಯಬಹುದು. ಈ ಟಾಪ್ ಅಪ್ ಲೋನ್ ಒಂದು ಥರ ಪರ್ಸನಲ್ ಲೋನ್ ಥರವೇ ಕೆಲಸ ಮಾಡುತ್ತದೆ. ಈ ಸಾಲದ ಹಣ ಮರುಪಾವತಿ ಮಾಡಲು ಹೋಮ್ ಲೋನ್ ಗಿಂತಲು ಹೆಚ್ಚಿನ ಸಮಯ ಸಿಗುತ್ತದೆ. ಪ್ರಸ್ತುತ ಹೋಮ್ ಲೋನ್ ಪಾವತಿ ಎಷ್ಟು ಸಮಯ ಇದೆಯೋ, ಅಂದರೆ ಅದೇ ರೀತಿ 30 ವರ್ಷಗಳ ವರೆಗು ಈ ಲೋನ್ ಅವಧಿ ವಿಸ್ತರಣೆ ಮಾಡಬಹುದು.
ಯಾವ ಬ್ಯಾಂಕ್ ನಲ್ಲಿ ಟಾಪ್ ಲೋನ್ ಸಿಗುತ್ತದೆ?
SBI ನಲ್ಲಿ ಟಾಪ್ ಅಪ್ ಲೋನ್ ಸಿಗಲಿದ್ದು, ಮರುಪಾವತಿಗೆ 30 ವರ್ಷ ಸಮಯ ನೀಡಲಾಗುತ್ತದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಲೋನ್ ಮರುಪಾವತಿ 20 ವರ್ಷ ನೀಡಲಾಗುತ್ತದೆ. ಪರ್ಸನಲ್ ಲೋನ್ ಗಿಂತ ಇದು ಒಳ್ಳೆಯ ಆಯ್ಕೆ ಆಗಿದೆ. ಇನ್ನು ಟಾಪ್ ಅಪ್ ಸಾಲಕ್ಕೆ ಹೋಮ್ ಲೋನ್ ಗಿಂತ ಜಾಸ್ತಿ ಬಡ್ಡಿ ಇರುತ್ತದೆ. ಆದರೆ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಲೋನ್ ಗಿಂತ ಕಡಿಮೆ ಬಡ್ಡಿ ಇರುತ್ತದೆ.
ಕಡಿಮೆ ಬಡ್ಡಿ ಯಾಕೆ?
ಟಾಪ್ ಅಪ್ ಲೋನ್ ಅನ್ನು ನಿಮ್ಮ ಆಸ್ತಿ ಮೌಲ್ಯದ ಆಧಾರದ ಮೇಲೆ ನೀಡುವ ಕಾರಣ, ಬ್ಯಾಂಕ್ ಗೆ ನಿಮ್ಮ ಆಸ್ತಿ ಸೆಕ್ಯೂರಿಟಿ ಆಗಿರುತ್ತದೆ. ಹಾಗಾಗಿ ಟಾಪ್ ಅಪ್ ಲೋನ್ ಗೆ ಬಡ್ಡಿದರ ಕಡಿಮೆ ಇರುತ್ತದೆ.
ಹೋಮ್ ಲೋನ್ vs ಟಾಪ್ ಅಪ್ ಲೋನ್:
SBI ನಲ್ಲಿ ಹೋಮ್ ಲೋನ್ ಲಭ್ಯವಿದ್ದು, ಹೋಮ್ ಲೋನ್ ಬಡ್ಡಿದರ 9.15% ಇಂದ ಶುರುವಾದರೆ, ಟಾಪ್ ಅಪ್ ಲೋನ್ ಬಡ್ಡಿದರ 9.55% ಇಂದ ಶುರುವಾಗುತ್ತದೆ. ಹಾಗೆಯೇ ಇದೇ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ 11.05% ಇಂದ 14.05% ವರೆಗು ಬಡ್ಡಿದರ ಇರುತ್ತದೆ. ಕ್ರೆಡಿಟ್ ಲೋನ್ ಗೆ ಇದಕ್ಕಿಂತ ಹೆಚ್ಚಿನ ಬಡ್ಡಿ ಇರುತ್ತದೆ.
ಟಾಪ್ ಅಪ್ ಲೋನ್ ಹಣವನ್ನು ನೀವು ಮನೆ ರಿಪೇರಿ ಥರದ ಕೆಲಸಗಳಿಗೆ ಖರ್ಚು ಮಾಡಿದರೆ, ಇದರ ಮೇಲೆ ನಿಮಗೆ ತೆರಿಗೆ ಪ್ರಯೋಜನ ಸಿಗುತ್ತದೆ. ಕಾನೂನಿನ ಸೆಕ್ಷನ್ 24 ಪ್ರಕಾರ, 2 ಲಕ್ಷದವರೆಗೂ ತೆರಿಗೆ ಪ್ರಯೋಜನ ಪಡೆಯಬಹುದು. ಪರ್ಸನಲ್ ಲೋನ್ ಗಳಲ್ಲಿ ಈ ಆಯ್ಕೆ ಇರುವುದಿಲ್ಲ. ಇಲ್ಲಿ ನಿಮಗೆ ಬಡ್ಡಿದರ ಕಡಿಮೆ, ಜೊತೆಗೆ ಒಂದು ವೇಳೆ ಟಾಪ್ ಅಪ್ ಲೋನ್ ಮರುಪಾವತಿ ಮಾಡುವುದಕ್ಕೆ ಆಗಲಿಲ್ಲ ಎಂದರೆ, ನಿಮ್ಮ ಆಸ್ತಿಯನ್ನು ಬ್ಯಾಂಕ್ ಪಡೆಯುವುದಿಲ್ಲ, ಬದಲಾಗಿ ಹೋಮ್ ಲೋನ್ ಜೊತೆಗೆ ಇದನ್ನು ಸೇರಿಸಿ, 2 ಇಎಂಐ ಗಳನ್ನು ಪಾವತಿ ಮಾಡುವ ಮಾಡಿಕೊಂಡು ಹೋಗುವ ಸೌಲಭ್ಯ ನೀಡುತ್ತದೆ.
Know the details about top-up loans for your old house reconstruction.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.