SUV Under 6 Lakh: 6 ಲಕ್ಷದಿಂದ ಸಿಗುವ ದಿ ಬೆಸ್ಟ್ SUV Cars! ಅತ್ಯುತ್ತಮ ಮೈಲೇಜ್ ಮತ್ತು ಪರ್ಫಾರ್ಮೆನ್ಸ್!
ಕಡಿಮೆ ಬೆಲೆಯ SUV ಗಳಲ್ಲಿ ಮೊದಲ ಆಯ್ಕೆ ಟಾಟಾ ಪಂಚ್, ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹6.13 ಲಕ್ಷದಿಂದ ₹10.20 ಲಕ್ಷದವರೆಗೂ ಇರುತ್ತದೆ. ಈ ಕಾರ್ 4 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ,
SUV Under 6 Lakh: ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಮಾಡೆಲ್ ಕಾರ್ ಗಳು ಲಾಂಚ್ ಆಗುತ್ತಲೇ ಇರುತ್ತದೆ. ಇನ್ನು ಜನರಿಗೆ ಕೂಡ ಹೊಸ ಕಾರ್ ಮತ್ತು ಬೈಕ್ ಗಳನ್ನು ಖರೀದಿ ಮಾಡಬೇಕು ಎಂದು ಆಸೆ ಇರುತ್ತದೆ, ಆದರೆ ಎಲ್ಲರಿಗೂ ದುಬಾರಿ ಮೊತ್ತದ ಕಾರ್ ಖರೀದಿ ಮಾಡಲು ಆಗೋದಿಲ್ಲ. ಅಂಥವರಿಗೆ 6 ಲಕ್ಷ ರೇಂಜ್ ನಲ್ಲಿ ಸಿಗುವಂಥ SUV ಗಳ ಬಗ್ಗೆ ಇಂದು ತಿಳಿಸಿಕೊಡುತ್ತೇವೆ. ಕಡಿಮೆ ಬೆಲೆಯಲ್ಲಿ ನೀವು ಮನೆಗೆ ಅತ್ಯುತ್ತಮ ಕಾರ್ ತರಬಹುದು. ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
1. Tata Punch: (SUV Under 6 Lakh )
ಕಡಿಮೆ ಬೆಲೆಯ SUV ಗಳಲ್ಲಿ ಮೊದಲ ಆಯ್ಕೆ ಟಾಟಾ ಪಂಚ್, ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹6.13 ಲಕ್ಷದಿಂದ ₹10.20 ಲಕ್ಷದವರೆಗೂ ಇರುತ್ತದೆ. ಈ ಕಾರ್ 4 ವಿಭಿನ್ನ ವೇರಿಯಂಟ್ ಗಳಲ್ಲಿ ಲಭ್ಯವಿದೆ, Pure ಮತ್ತು Adventure ಅದರಲ್ಲಿ ಎರಡು ಆಯ್ಕೆ. ಇನ್ನು 7 ಬಣ್ಣಗಳಲ್ಲಿ ಕಾರ್ ಲಭ್ಯವಿದ್ದು, ಟೊರ್ನಾಡೊ ಬ್ಲೂ, ಕ್ಯಾಲಿಪ್ಸೊ ರೆಡ್, ಅಟಾಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೋನಾ ಗ್ರೇ, ಆರ್ಕಸ್ ವೈಟ್ ಇಷ್ಟು ಬಣ್ಣಗಳ ಆಯ್ಕೆ ಇದೆ..
Engine ಮತ್ತು Brake System:
Tata Punch ನಲ್ಲಿ 1.2 liter ಇಂಜಿನ್ ಹೊಂದಿದ್ದು, ಪೆಟ್ರೋಲ್ ಮತ್ತು CNG ಎರಡು ಆಯ್ಕೆಗಳನ್ನು ಹೊಂದಿದೆ. ವೇರಿಯಂಟ್ ಗಳ ಮೇಲೆ ಅವಲಂಬಿಸಿ 5 ಸ್ಪೀಡ್ ಮ್ಯಾನುವಲ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ವೇರಿಯಂಟ್ 18.8kmpl ಇಂದ 20 kmpl ಮೈಲೇಜ್ ಕೊಡುತ್ತದೆ. CNG ವೇರಿಯಂಟ್ 26.9 km/kg ಮೈಲೇಜ್ ಕೊಡುತ್ತದೆ.
ಇನ್ನಿತರ ಫೀಚರ್ಸ್:
ಈ ಕಾರ್ ನಲ್ಲಿ 7 ಇಂಚ್ ಸ್ಕ್ರೀನ್ ಟಚ್ ಡಿಸ್ಪ್ಲೇ, 7 ಇಂಚ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಎಸಿ, ಕ್ರುಸ್ ಕಂಟ್ರೋಲ್ ಮತ್ತು ಇನ್ನಿತರ ಫೀಚರ್ಸ್ ಹೊಂದಿದೆ.. ಇನ್ನು ಭದ್ರತೆ ಬಗ್ಗೆ ಹೇಳುವುದಾದರೆ, ಡ್ಯುಯೆಲ್ ಏರ್ ಬ್ಯಾಗ್, EBD, ABS, TMPS, ರೇರ್ ಡಿಫಾರ್ಗಸ್, ರೇರ್ ಪಾರ್ಕಿಂಗ್ ಸೇನಾರ್ಸ್, ರೇರ್ ವ್ಯೂ ಕ್ಯಾಮೆರಾ ಸೌಲಭ ಹೊಂದಿದೆ.
2. Hyundai Exter:
ಇದು ಕೂಡ ಉತ್ತಮ SUV ಆಯ್ಕೆ ಆಗಿದ್ದು, ಈ ಕಾರ್ ನ ಬೆಲೆ ₹6.13 ಲಕ್ಷದಿಂದ ಶುರುವಾಗಿ, ₹10.28 ಲಕ್ಷದವರೆಗೂ ಎಕ್ಸ್ ಶೋರೂಮ್ ಬೆಲೆ ಹೊಂದಿರುತ್ತದೆ. EX, S, SX, SX (O) ಸೇರಿದಂತೆ 5 ವೇರಿಯಂಟ್ ಗಳನ್ನು ಹೊಂದಿದೆ. ಇನ್ನು ಬಣ್ಣಗಳ ಬಗ್ಗೆ ಹೇಳೋದಾದರೆ, ರೇಂಜರ್ ಖಾಕಿ, ಸ್ಟಾರಿ ನೈಟ್ ಜೊತೆಗೆ 2 ಡ್ಯುಯೆಲ್ ಟೋನ್ ಮತ್ತು 5 ಕಲರ್ಸ್ ಹೊಂದಿದೆ.
Engine ಮತ್ತು Brake System:
ಈ ಕಾರ್ ನಲ್ಲಿ ನಿಮಗೆ 1.2 ಲೀಟರ್ ಪೆಟ್ರೋಲ್ ಮತ್ತು CNG ಎರಡು ಆಯ್ಕೆಯನ್ನು ಹೊಂದಿರುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಎರಡು ಆಯ್ಕೆ ಹೊಂದಿದೆ. 2WD ಟೆಕ್ನಾಲಜಿ ಹೊಂದಿದೆ..ಇನ್ನು ಮೈಲೇಜ್ ಪೆಟ್ರೋಲ್ ವೇರಿಯಂಟ್ ನಲ್ಲಿ 19.2 kmpl ಇಂದ 19.4 kmpl ಮೈಲೇಜ್ ಹೊಂದಿದೆ, CNG ವೇರಿಯಂಟ್ ನಲ್ಲಿ 27.1 km/kg ಮೈಲೇಜ್ ನೀಡುತ್ತದೆ.
ಭಾರತದಲ್ಲಿ ಲಾಂಚ್ ಆಗಿದೆ ಬಹುನಿರೀಕ್ಷಿತ Triumph Scrambler X1200, ಹೇಗಿದೆ ಫೀಚರ್ಸ್?
ಇನ್ನಿತರ ಫೀಚರ್ಸ್:
ಈ ಕಾರ್ ನಲ್ಲಿ 8 ಇಂಚ್ ಸ್ಕ್ರೀನ್ ಟಚ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸಿಂಗಲ್ ಪೇನ್ ಸನ್ ರೂಫ್ ಈ ಎಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿದೆ..ಇನ್ನು ನಿಮ್ಮ ಭದ್ರತೆಗಾಗಿ 6 ಏರ್ ಬ್ಯಾಗ್, ABS, EBD ಸೌಲಭ್ಯವಿದೆ.
3. Renault Kiger:
ಇದು ಒಳ್ಳೆಯ ಬೆಲೆಯ SUV ಆಗಿದ್ದು, ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹6 ಲಕ್ಷದಿಂದ ಶುರುವಾಗಿ ₹11.23 ಲಕ್ಷದವರೆಗೂ ಇರುತ್ತದೆ. ಇಂಜಿನ್ ಬಗ್ಗೆ ಹೇಳೋದಾದರೆ ಇದರಲ್ಲಿ 1 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್, 1 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಹೊಂದಿದೆ. ಈ ಕಾರ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೊಮ್ಯಾಟಿಕ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಒಳಗೊಂಡಿದೆ. ಅಷ್ಟೇ ಅಲ್ಲದೇ 8 ಇಂಚ್ ಸ್ಕ್ರೀನ್ ಟಚ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಹಾಗೂ ಇನ್ನಿತರ ವಿಶೇಷತೆಗಳನ್ನು ಒಳಗೊಂಡಿದೆ.
The best SUV cars from 6 lakhs! Excellent mileage and performance!
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.