Hyundai EV: Hyundai ಇಂದ EV ಕಾರ್ ಓನರ್ ಗಳಿಗೆ ಬಿಗ್ ಆಫರ್! ಕೇವಲ ₹21 ರೂಪಾಯಿಗೆ ಸಿಗಲಿದೆ ಈ ಬೆನಿಫಿಟ್ಸ್.
ಈ ಪ್ಲಾನ್ ಹಿಂದಿನ ಉದ್ದೇಶ ಏನು ಎಂದರೆ ಇನ್ನುಮುಂದೆ ಜನರು ಕಾರ್ ರೇಂಜ್ ಬಗ್ಗೆ ಯೋಚನೆ ಬಿಟ್ಟು, ತಮ್ಮ ಊರಿಗೆ ಮತ್ತು ಬೇರೆ ಬೇರೆ ಊರುಗಳಿಗೆ ಯಾವುದೇ ಚಿಂತೆ ಇಲ್ಲದೇ ಪ್ರಯಾಣ ಮಾಡಬೇಕು, ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ
Hyundai EV: Hyundai ಸಂಸ್ಥೆ ಇದೀಗ ತಮ್ಮ ಗ್ರಾಹಕರಿಗೆ ಒಳ್ಳೆಯ ಅವಕಾಶ ಒಂದನ್ನು ನೀಡುತ್ತಿದೆ. ಭಾರತದ ಎಲ್ಲೆಡೆ Hyundai ಸಂಸ್ಥೆಯು ಮುಖ್ಯ ಹೈವೇಗಳಲ್ಲಿ ಮತ್ತು ಸಿಟಿಗಳಲ್ಲಿ Ultra High Speed EV Charging Network ಗಳನ್ನು ನಿರ್ಮಿಸಿದೆ. ಒಟ್ಟು 11 ಹೊಸ ಅಲ್ಟ್ರಾ ಫಾಸ್ಟ್ ಚರ್ಜಿಂಗ್ ಸ್ಟೇಶನ್ ಗಳನ್ನು ಹೊಂದಿದ್ದು, ಇಲ್ಲಿ ಒಟ್ಟು 3 ಚಾರ್ಜಿಂಗ್ ಪಾಯಿಂಟ್ ಗಳಿವೆ. 3 ಚಾರ್ಜ್ ಪಾಯಿಂಟ್ ಗಳಲ್ಲಿ DC 150 kW, DC 60 kW ಹಾಗೂ DC 30 kW ಚಾರ್ಜಿಂಗ್ ಯೂನಿಟ್ಸ್ ಹೊಂದಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಈ ಪ್ಲಾನ್ ಹಿಂದಿನ ಉದ್ದೇಶ ಏನು ಎಂದರೆ ಇನ್ನುಮುಂದೆ ಜನರು ಕಾರ್ ರೇಂಜ್ ಬಗ್ಗೆ ಯೋಚನೆ ಬಿಟ್ಟು, ತಮ್ಮ ಊರಿಗೆ ಮತ್ತು ಬೇರೆ ಬೇರೆ ಊರುಗಳಿಗೆ ಯಾವುದೇ ಚಿಂತೆ ಇಲ್ಲದೇ ಪ್ರಯಾಣ ಮಾಡಬೇಕು, ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಬೇಕು ಎನ್ನುವುದಾಗಿದೆ. ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ, ಜೊತೆಗೆ ದೆಹಲಿ-ಚಂಡೀಗಢ, ದೆಹಲಿ-ಜೈಪುರ, ಹೈದರಾಬಾದ್-ವಿಜಯವಾಡ, ಮುಂಬೈ-ಸೂರತ್, ಮುಂಬೈ-ನಾಸಿಕ್ ಈ ಹೈವೇಗಳಲ್ಲಿ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಸೌಲಭ್ಯವಿದೆ.
ಈ ಚಾರ್ಜ್ ಪಾಯಿಂಟ್ ಗಳಲ್ಲಿ Hyundai ಮತ್ತು ಬೇರೆ ಕಾರ್ ಗಳು ಸಹ ಚಾರ್ಜಿಂಗ್ ಸೌಲಭ್ಯ ಪಡೆಯಬಹುದು. ಚಾರ್ಜ್ ಆಗುವಾಗ ಸಮಯ ಕಳೆಯುವುದಕ್ಕೆ ಅಲ್ಲಿಯೇ ಕಾಫಿ ಶಾಪ್, ರೆಸ್ಟೋರೆಂಟ್ ಸಹ ಲಭ್ಯವಿರುತ್ತದೆ. ಇಲ್ಲಿ ಗ್ರಾಹಕರು ಅತ್ಯಂತ ಫಾಸ್ಟ್ ಚಾರ್ಜಿಂಗ್ ಅನುಭವ ಹೊಂದುತ್ತಾರೆ. Hyundai IONIQ 5 ಕಾರ್ ಓನರ್ ಗಳಿಗೆ ಗುಡ್ ನ್ಯೂಸ್ ಇದ್ದು, ಈ ಕಾರ್ 10% ಇಂದ 80% ವರೆಗು ಚಾರ್ಜ್ ಆಗಲು ಕೇವಲ 21 ನಿಮಿಷ ಸಾಕು. ಇನ್ನು ಚಾರ್ಜ್ ಮಾಡಿಸುವುದಕ್ಕೆ ಬೆಲೆ ಎಷ್ಟು ಎಂದರೆ, 30 kw ಚಾರ್ಜರ್ ನಲ್ಲಿ ಚಾರ್ಜ್ ಮಾಡುವುದಕ್ಕೆ 1 ಯೂನಿಟ್ ಗೆ ₹18 ರೂಪಾಯಿ. 60 kw ಚಾರ್ಜರ್ ನಲ್ಲಿ ಪ್ರತಿ ಯೂನಿಟ್ ಚಾರ್ಜಿಂಗ್ ಗೆ ₹21 ರೂಪಾಯಿ ಆಗಿರುತ್ತದೆ. 150 kw ಚಾರ್ಜರ್ ನಲ್ಲಿ ಚಾರ್ಜ್ ಗೆ 1 ಯೂನಿಟ್ ಗೆ ₹24 ರೂಪಾಯಿ ಆಗಿರುತ್ತದೆ..
ಇಲ್ಲಿ ನೀವು ಚಾರ್ಜ್ ಮಾಡಿಸುವುದಕ್ಕೆ My Hyundai App ಮೂಲಕ ಚಾರ್ಜಿಂಗ್ ಪಾಯಿಂಟ್ ಬುಕ್ ಮಾಡಬೇಕಾಗುತ್ತದೆ.. ಹತ್ತಿರದ ಚಾರ್ಜ್ ಸ್ಟೇಶನ್ ಹುಡುಕುವುದು, ಚಾರ್ಜ್ ಸ್ಲಾಟ್ ಪ್ರೀ ಬುಕಿಂಗ್, ಡಿಜಿಟಲ್ ಪೇಮೆಂಟ್, ಚಾರ್ಜಿಂಗ್ ಸ್ಟೇಟಸ್ ಇದೆಲ್ಲವನ್ನಿ App ಮೂಲಕ ಮಾಡಬಹುದು. Hyundai ಮತ್ತು ಬೇರೆ ಕಾರ್ ಓನರ್ ಗಳು ಕೂಡ App ಬಳಸಬಹುದು. ಈ ವರ್ಷ ಇನ್ನು 10 ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ Hyundai.
ಭಾರತದ ಎಲ್ಲಾ ಕಡೆ ವಿಸ್ತರಿಸುವ ಪ್ಲಾನ್ ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಜೊತೆಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು, ಇನ್ನು 3 ವರ್ಷಗಳಲ್ಲಿ 100 ಚಾರ್ಜಿಂಗ್ ಸ್ಟೇಶನ್ ಗಳನ್ನು ತೆರೆಯಲಾಗುತ್ತದೆ. ಈ ಬಗ್ಗೆ Hyundai ಸಂಸ್ಥೆಯ ಕಾರ್ಪೊರೇಟ್ ಪ್ಲಾನಿಂಗ್ ಕಾರ್ಯನಿರ್ವಾಹಕ ನಿರ್ದೇಶಕ ಜೀ ವಾನ್ ರ್ಯು ಅವರು ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಹೊಸತನ್ನು ರಚಿಸಿ, ಮುಂದಕ್ಕೆ ತೆಗೆದುಕೊಂಡು ಹೋಗಲು ಶ್ರಮ ವಹಿಸುತ್ತೇವೆ.. ನಮ್ಮ ಗ್ರಾಹಕರಿಗೆ ಬೇಕಾದ್ದನ್ನು ನೀಡುವ ಕಡೆಗೆ ಗಮನ ಹರಿಸಿದ್ದೇವೆ. EV ಓನರ್ ಗಳಿಗೆ ಉತ್ತಮ ಅನುಭವ ನೀಡಲು ಬಯಸಿದೆ Hyundai ಎಂದು ತಿಳಿಸಿದ್ದಾರೆ.
A big offer from Hyundai for EV car owners! These benefits will be available for just 21 rupees.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.