Fixed Deposits : ದೇಶದ ಈ 3 ಬ್ಯಾಂಕುಗಳಲ್ಲಿ ಫಿಕ್ಸಿಡ್ ಡೆಪಾಸಿಟ್ ಮಾಡಿದರೆ ಹೆಚ್ಚು ಬಡ್ಡಿದರವನ್ನು ಪಡೆಯಬಹುದು, ಹೆಚ್ಚು ಲಾಭ ಸುಲಭ ಜೀವನ !!
If you make a fixed deposit in these 3 banks of the country, you can get more interest rate, more profit, easy life!!
ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಉತ್ತಮ ಬಡ್ಡಿ ದರದಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಬಹುದು, ಅವುಗಳಲ್ಲಿ ಪ್ರಮುಖವಾದ ಮತ್ತು ಜನಗಳಿಗೆ ಹೆಚ್ಚು ಲಾಭ ಕೊಡುವ ಬ್ಯಾಂಕ್ ಮತ್ತು ಯೋಜನೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು ಹಾಗಾಗಿ ಇಲ್ಲಿ ಕೆಲವು ಮುಖ್ಯ ಬ್ಯಾಂಕ್ ಮತ್ತು ಯೋಜನೆಗಳನ್ನು ಲಿಸ್ಟ್ ಮಾಡಲಾಗಿದೆ ನೋಡಿ.
1) ಇಂಡಿಯನ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ (Indian Bank Fixed Deposit).
ಭಾರತದಲ್ಲಿ ನಂಬಿಕೆ ಇಡುವ ಮುಖ್ಯ ಬ್ಯಾಂಕುಗಳಲ್ಲಿ ಇಂಡಿಯನ್ ಬ್ಯಾಂಕ್ ಕೂಡ ಒಂದಾಗಿದ್ದು, ದೇಶದ ನಾಗರಿಕರಿಗೆ ಇಲ್ಲಿ ಠೇವಣಿ ಅಂದರೆ ಫಿಕ್ಸೆಡ್ ಡೆಪಾಸಿಟ್ ಮಾಡಲು ಅವಕಾಶ ಮಾಡಿ ಕೊಟ್ಟಿದೆ, IND SUPER 400 DAYS ಎಂಬುವ ಯೋಜನೆಯ ಅಡಿಯಲ್ಲಿ ತಮ್ಮ ಬ್ಯಾಂಕಿನ ಖಾತೆ ದಾರರಿಗೆ ಹೊಸ ಬಡ್ಡಿ ದರದ ಪ್ಲಾನ್ ಅನ್ನು ಘೋಶಣೆ ಮಾಡಿದೆ, IND SUPER 400 DAYS ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7.75 ರಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡಿದರೆ, ಸಾಮಾನ್ಯ ನಾಗರಿಕರಿಗೆ ಶೇಕಡಾ 7.25 ರಷ್ಟು ವಾರ್ಷಿಕ ಬಡ್ಡಿ ದರವನ್ನು ಕೊಡಲಿದೆ, ಈ ಯೋಜನೆಯನ್ನು ಪಡೆದುಕೊಳ್ಲಲು ಕೊನೆಯ ದಿನಾಂಕ ಇದೆ ತಿಂಗಳು ಜೂನ್ 30 ರ ವರೆಗೆ ಮಾತ್ರ.
2) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI “AMRIT KALASH” Scheme 400 Days).
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಉತಮ್ಮವಾದ ಟಾಪ್ ಬ್ಯಾಂಕ್ ಆಗಿದ್ದು, ತಮ್ಮ ಬ್ಯಾಂಕಿಂಗ್ ಖಾತೆದಾರರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ, ಈಗ ಜನ ಸಾಮಾನ್ಯರಿಗೆ ಸಹಾಯವಾಗಲೆಂದು SBI “AMRIT KALASH” Scheme 400 ಡೇಸ್ ಎನ್ನುವ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಹಿರಿಯ ನಾಗರಿಕರಿಗೆ ಶೇಕಡಾ 7.60 ಹಾಗು ಸಾಮಾನ್ಯ ನಾಗರಿಕರಿಗೆ ಶೇಕಡಾ 7.10 ರಷ್ಟು ಬಡ್ಡಿದರವನ್ನು ಕೊಡಲು ಮುಂದಾಗಿದೆ ಇದರ ಅವಧಿ 400 ದಿನಗಳ ವರೆಗೆ ಇದ್ದು, ಇದರ ಸಂಪೂರ್ಣ ಲಾಭವನ್ನು ನೀವು ಪಡೆಯಬಹುದು, ಹಾಗು ಈ ಯೋಜನೆಯನ್ನು ಪಡೆಯಲು ಕೊನೆಯ ದಿನಾಂಕ ಜೂನ್ 30 . ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅತ್ತಿರದ ಬ್ಯಾಂಕ್ ಗೆ ಹೋಗಿ ಪರಿಶೀಲಿಸಿ ಮತ್ತು ನೀವು ಇದನ್ನು ಎಸ್ ಬಿ ಇ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಅಲ್ಲಿ ಕೂಡ ನೋಡಬಹುದು http://sbi.co.in
3) ಎಸ್ ಬಿ ಇ ವಿ ಕೇರ್ (SBI WECARE Deposit Scheme).
ಎಸ್ ಬಿ ಇ ವಿ ಕೇರ್ (SBI WECARE ) ಈ ಯೋಜನೆ ಕೇವಲ ಹಿರಿಯ ನಾಗರಿಗೆ ಮಾತ್ರ ಸೀಮಿತ ವಾಗಿದ್ದು, ಈ ಯೋಜನೆ 5 ರಿಂದ 8, 10, ವರ್ಷಗಳ ವರೆಗೂ ಬರುತ್ತದೆ, ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7.50 ರಷ್ಟು ವಾರ್ಷಿಕ ಬಡ್ಡಿದರವನ್ನು ನೀಡುತ್ತದೆ, ಇನ್ನು ಈ ಯೋಜನೆಯ ಅವಧಿ ಇದೆ ತಿಂಗಳು ಜೂನ್ 30 ರ ವರೆಗೂ ಮಾತ್ರ ಇದೆ, ಆಸಕ್ತಿಯುಳ್ಳ ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು, ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಅತ್ತಿರದ SBI ಬ್ಯಾಂಕ್ ನಲ್ಲಿ ವಿಚರಿಸಬಹುದು ಅಥವಾ SBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಲ್ಲಿ ನೋಡಬಹುದು…
