Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

TVS : ಗ್ಲೋಬಲ್ ಲೆವೆಲ್ ನಲ್ಲಿ ಸಾಧನೆ ಮಾಡಿದ ಭಾರತದ ಬ್ರ್ಯಾಂಡ್ ಟಿವಿಎಸ್!

TVS: ನಮ್ಮ ದೇಶದಲ್ಲಿ ಟಿವಿಎಸ್ ಸಂಸ್ಥೆಯ ವಾಹನಗಳಿಗೆ ಒಳ್ಳೆಯ ಹೆಸರು ಮತ್ತು ಬೇಡಿಕೆ ಇದೆ. ಇತ್ತೀಚೆಗೆ ಈ ಸಂಸ್ಥೆ TVS HLX 150 ದ್ವಿಚಕ್ರ ವಾಹನವನ್ನು ಗ್ಲೋಬಲ್ ಮಾರ್ಕೆಟ್ ನಲ್ಲಿ, ಹೊರದೇಶದಲ್ಲಿ ಲಾಂಚ್ ಮಾಡಿತು.

Get real time updates directly on you device, subscribe now.

TVS: ನಮ್ಮ ದೇಶದಲ್ಲಿ ಟಿವಿಎಸ್ ಸಂಸ್ಥೆಯ ವಾಹನಗಳಿಗೆ ಒಳ್ಳೆಯ ಹೆಸರು ಮತ್ತು ಬೇಡಿಕೆ ಇದೆ. ಇತ್ತೀಚೆಗೆ ಈ ಸಂಸ್ಥೆ TVS HLX 150 ದ್ವಿಚಕ್ರ ವಾಹನವನ್ನು ಗ್ಲೋಬಲ್ ಮಾರ್ಕೆಟ್ ನಲ್ಲಿ, ಹೊರದೇಶದಲ್ಲಿ ಲಾಂಚ್ ಮಾಡಿತು. ಅಲ್ಲಿನ ಜನರು ಕೂಡ ಈ ವಾಹನವನ್ನು ಖರೀದಿ ಮಾಡಿ, ಟಿವಿಎಸ್ ಸಂಸ್ಥೆಗೆ ಹತ್ತಿರವಾಗಿದ್ದು, ಹೊರದೇಶದಲ್ಲಿ 3.5 ಮಿಲಿಯನ್ ಗ್ರಾಹಕರನ್ನು ರೀಚ್ ಮಾಡಿರುವುದಾಗಿ ಟಿವಿಎಸ್ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

Table of Contents

TVS

10 ವರ್ಷಗಳ ಹಿಂದೆ TVS HLX ಮೊದಲಿಗೆ ಬಿಡುಗಡೆ ಆಗಿದ್ದು, ಆಫ್ರಿಕಾದಲ್ಲಿ, ಬಳಿಕ ಲ್ಯಾಟಿನ್ ಅಮೆರಿಕಾ ಸೇರಿದಂತೆ 50 ಬೇರೆ ಬೇರೆ ದೇಶಗಳಲ್ಲಿ ಸಿಗುತ್ತದೆ. ಈ ವಾಹನದಲ್ಲಿ ಇಕೋತ್ರಸ್ಟ್ ಇಂಜಿನ್, ಪ್ರೊಟೆಕ್ಷನ್ ಫೀಚರ್ಸ್, ಒಳ್ಳೆಯ ಸಸ್ಪೆನ್ಷನ್, ಸುಂದರವಾದ ಸ್ಟೈಲಿಂಗ್, ಹೊಸ ಗ್ರಾಫಿಕ್ಸ್ ಹಾಗೂ ಒಳ್ಳೆಯ ಕಲರ್ಸ್ ಸಹ ಇದೆ. TVS HLX 150F ನಲ್ಲಿ ಇರುವುದು LED ಹೆಡ್ ಲೈಟ್, ಒಳ್ಳೆಯ ಪವರ್ ಹೊಂದಿದೆ.

ಇದರ ಹ್ಯಾಂಡಲ್ ಜೊತೆಗೆ ಹಿಂಭಾಗದಲ್ಲಿ ಲೋಡ್ ಕ್ಯಾರಿಯರ್ ಹೊಂದಿದೆ. ಟ್ಯೂಬ್ ಲೆಸ್ ಟೈರ್ ಗಳು, ಸೆಮಿ ಡಿಜಿಟಲ್ ಸ್ಪೀಡೋಮೀಟರ್ ಅನಲಾಗ್, ಡಿಜಿಟಲ್ ಟೆಕ್ ಇದೆಲ್ಲವೂ ಇದೆ. ಈ ವಾಹನದ ಥೀಮ್ ಬ್ಲ್ಯಾಕ್ ಆಗಿದ್ದು, 3 ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ಹೊಸ ಗ್ರಾಫಿಕ್ಸ್ ಸಹ ಇದೆ, ಜೊತೆಗೆ Eco Charging port ಜೊತೆಗೆ ಸೀಟ್ ಸ್ಟೈಲ್ ಸಹ ಬೇರೆ ಥರ ಇದೆ. IOC technology ಇರುವ ಹೊಸ ಇಕೋ ಇಕೊ ಥ್ರಸ್ಟ್ ಇಂಜಿನ್ ಇದ್ದು, ಒಳ್ಳೆಯ ಪವರ್ ಇದೆ.

Also Read: Kawasaki Z900 : ಬೈಕ್ ಪ್ರಿಯರನ್ನು ಆಕರ್ಷಿಸಲು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Kawasaki Z900! ಬೆಲೆ ಎಷ್ಟು ಗೊತ್ತಾ?

TVS HLX 150F

ಫ್ಯುಲ್ ಯುಸೇಜ್ ಚೆನ್ನಾಗಿದ್ದು, ಬಹಳ ಸಮಯದವರೆಗು ಇರಲಿದೆ ಇಂಜಿನ್ ಲೈಫ್. ಟಿವಿಎಸ್ ಸಂಸ್ಥೆಯ ಇಂಟರ್ನ್ಯಾಷನಲ್ ಬ್ಯುಸಿನೆಸ್ ನ ಅಧಿಕಾರಿ ಆಗಿರುವ ರಾಹುಲ್ ನಾಯಕ್ ಅವರು ಈ ಬಗ್ಗೆ ಮಾತನಾಡಿ 3.5 ಮಿಲಿಯನ್ ಮೈಲಿಗಲ್ಲು ತಲುಪಿರಿಯುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. 2013 ರಲ್ಲಿ TVS HLX 150F ಅನ್ನು ಶುರು ಮಾಡಿದ್ದು, 6 ವರ್ಷಗಳಲ್ಲಿ ಮಿಲಿಯನ್ ಗ್ರಾಹಕರನ್ನು ಸಂಪಾದಿಸಿತು, ಇನ್ನು 4 ವರ್ಷಗಳ ಒಳಗೆ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ.

ಟಿವಿಎಸ್ ಇಂಜಿನಿಯರಿಂಗ್, ಅದರ ಕ್ವಾಲಿಟಿ, ಸರ್ವಿಸ್ ಎಲ್ಲದರಲ್ಲೂ ಗ್ರಾಹಕರ ನಂಬಿಕೆ ಗಳಿಸಿದೆ. ಈ ವೇಳೆ ನಿಮ್ಮ ಬ್ಯುಸಿನೆಸ್ ಪಾರ್ಟ್ನರ್ಸ್, ಸಿಬ್ಬಂದಿಗಳು, ಮತ್ತು ಡೀಲರ್ ಗಳಿಗೆ ಧನ್ಯವಾದ ಹೇಳುತ್ತೇವೆ.. ಈಗ ನಾವು ಮೈಲಿಗಲ್ಲನ್ನು ಆಚರಣೆ ಮಾಡುತ್ತಿದ್ದೇವೆ, TVS HLX 150F ಈಗಾಗಲೇ ಯುರೋಪ್, ಆಫ್ರಿಕಾ ಅಮೆರಿಕಾ ಸೇರಿದಂತೆ 80 ದೇಶಗಳಲ್ಲಿ ಸೇಲ್ಸ್ ಆಗುತ್ತಿದೆ. ಈ ರಫ್ತು ಕಂಪನಿಯ ಆದಾಯದ ಸುಮಾರು 25% ಹೊಂದಿದೆ. ಮುಂದಿನ ದಿನಗಳಲ್ಲಿ ನಾವು ಜನರಿಗೆ ಇನ್ನಷ್ಟು ಸೇವೆಗಳನ್ನು ಒದಿಗಿಸುತ್ತೇವೆ.. ಎಂದು ಹೇಳಿದ್ದಾರೆ..

Also Read: Kalyan Jewellers : ಕಲ್ಯಾಣ್ ಜ್ಯುವೆಲರ್ಸ್ ಮಾಲೀಕರಿಂದ ಏಕಾಏಕಿ 3 ರೋಲ್ಸ್ ರಾಯ್ಸ್ ಖರೀದಿ! ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ?

Get real time updates directly on you device, subscribe now.

Leave a comment