Kalyan Jewellers : ಕಲ್ಯಾಣ್ ಜ್ಯುವೆಲರ್ಸ್ ಮಾಲೀಕರಿಂದ ಏಕಾಏಕಿ 3 ರೋಲ್ಸ್ ರಾಯ್ಸ್ ಖರೀದಿ! ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ?
Kalyan Jewellers : ದಕ್ಷಿಣ ಭಾರತದಲ್ಲಿ ಜನರ ನಂಬಿಕೆ ಗಳಿಸಿರುವ ಆಭರಣ ಸಂಸ್ಥೆಗಳಲ್ಲಿ ಒಂದು ಕಲ್ಯಾಣ್ ಜ್ಯುವೆಲರ್ಸ್. ಕಲ್ಯಾಣ್ ಜ್ಯುವೆಲರ್ಸ್ ಮತ್ತು ಕಲ್ಯಾಣ್ ಡೆವೆಲಪರ್ಸ್ ಈ ಎರಡು ಕೂಡ ಇವರದ್ದೇ.
Kalyan Jewellers : ದಕ್ಷಿಣ ಭಾರತದಲ್ಲಿ ಜನರ ನಂಬಿಕೆ ಗಳಿಸಿರುವ ಆಭರಣ ಸಂಸ್ಥೆಗಳಲ್ಲಿ ಒಂದು ಕಲ್ಯಾಣ್ ಜ್ಯುವೆಲರ್ಸ್. ಕಲ್ಯಾಣ್ ಜ್ಯುವೆಲರ್ಸ್ ಮತ್ತು ಕಲ್ಯಾಣ್ ಡೆವೆಲಪರ್ಸ್ ಈ ಎರಡು ಕೂಡ ಇವರದ್ದೇ. ಈ ಸಂಸ್ಥೆಯ ಮಾಲೀಕರ ಹೆಸರು ಟಿ.ಎಸ್. ಕಲ್ಯಾಣರಾಮನ್, ಶ್ರೀಮಂತ ವ್ಯಕ್ತಿಗಳಿಗೆ ಕಾರ್ ಗಳ ಮೇಲೆ ಕ್ರೇಜ್ ಇರುವುದು ಸಹಜ. ಅದೇ ಥರ ಇವರಿಗೂ ಇದ್ದು, ಕಲ್ಯಾಣರಾಮನ್ ಅವರು ಸಹ ಬೆಲೆಬಾಳುವ ಕಾರ್ ಗಳ ಸಂಗ್ರಹ ಹೊಂದಿದ್ದಾರೆ.
Kalyan Jewellers
ಅದೇ ರೀತಿ ಕಲ್ಯಾಣ್ ರಾಮನ್ ಅವರಿಗೂ ಕೂಡ ಕಾರ್ ಕ್ರೇಜ್ ಇದ್ದು, ಅವರು ಸಹ ಆ3 ಐಶಾರಾಮಿ ರೋಲ್ಸ್ ರಾಯ್ಸ್ ಕುಲ್ಲಿನಿನ್ ಎಸ್.ಯು.ವಿ ಕಾರ್ ಖರೀದಿ ಮಾಡಿ, ಅದು ಕಲ್ಯಾಣ್ ಗ್ಯಾರೇಜ್ ಗೆ ತಲುಪಿದೆ. 3 ಕಾರ್ ಗಳನ್ನು ಕಲ್ಯಾಣ್ ಸಂಸ್ಥೆ ಬರಮಾಡಿಕೊಂಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Eisk77 ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ..ವಿಡಿಯೋದಲ್ಲಿ ಎಲ್ಲಾ ಕಾರ್ ಗಳನ್ನು ಕಾಣಬಹುದಾದಗಿದೆ.
ಇನ್ಸ್ಟಾಗ್ರಾಮ್ ಪೋಸ್ಟ್ ನ ಅನುಸಾರ 1 ಬ್ಲ್ಯಾಕ್ ಬ್ಯಾಡ್ಜ್ ಮತ್ತೆರಡು ಸಾಮಾನ್ಯವಾದ ರೋಲ್ಸ್ ರಾಯ್ಸ್ ಕಾರ್ ಗಳನ್ನು ಖರೀದಿ ಮಾಡಲಾಗಿದೆ..ಕೇರಳದಲ್ಲಿ ಈ ಕಾರ್ ಗಳನ್ನು ಸ್ವಾಗತ ಮಾಡಿಕೊಳ್ಳಲಾಗಿದೆ, ಬ್ಲ್ಯಾಕ್ ಬ್ಯಾಡ್ಜ್ ಕಾರ್ ನ ಫಿನಿಶಿಂಗ್ ಮ್ಯಾಗ್ಮಾ ರೆಡ್ ಇಂದ ಆಗಿದೆ. ಸಾಮಾನ್ಯವಾದ ರೋಲ್ಸ್ ರಾಯ್ಸ್ ಗೆ ಮಿಡ್ ನೈಟ್ ಸಫೈರ್ ಮತ್ತು ಡೈಮಂಡ್ ಬ್ಲ್ಯಾಕ್ ಶೇಡ್ ನೀಡಲಾಗಿದೆ. ಬ್ರಿಟಿಷ್ ದೇಶದ ಸಂಸ್ಥೆ ಆಗಿರುವ ರೋಲ್ಸ್ ರಾಯ್ಸ್ , ವಿಶ್ವಾದ್ಯಂತ ಕಾರ್ ಪ್ರೇಮಿಗಳಿಗೆ ಅದ್ಭುತವಾದ ಪ್ರಾಡಕ್ಟ್ ಗಳನ್ನು ನೀಡುದೆ.
Also Read: Solar Panel Subsidy : ಮನೆ ಮೇಲೆ ಸೌರ ಫಲಕ ಅಳವಡಿಸಿ 40% ಸಬ್ಸಿಡಿ ಪಡೆಯಿರಿ!
ಇನ್ನು ಕಲ್ಯಾಣರಾಮನ್ ಅವರು ಈಗಾಗಲೇ 3 ರೋಲ್ಸ್ ರಾಯ್ಸ್ ಹೊಂದಿದ್ದು, ಇದೀಗ ಮತ್ತೆ 3 ಕಾರ್ ಖರೀದಿ ಮಾಡಿದ್ದಾರೆ.. ಕಲ್ಯಾಣರಾಮನ್ ಅವರ ಬಳಿ ಈಗಾಗಲೇ Rolls Royce Phantom series 1 and Phantom series 2 ಇದೆ. ಅದರ ಜೊತೆಗೆ ಈಗ ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಕಲಿನಿನ್ ಮತ್ತು ಸಾಮಾನ್ಯ ಕುಲ್ಲಿನಿನ್ ಅನ್ನು ಖರೀದಿ ಮಾಡಿದ್ದಾರೆ. ಈ ಹೊಸ SUV ಕಾರ್ ಅನ್ನು ಗ್ರಾಹಕರ ಅಗತ್ಯಕ್ಕೆ ತಕ್ಕ ಹಾಗೆ ಕಸ್ಟಮೈಸ್ ಮಾಡಲಾಗುತ್ತದೆ, ಅದಕ್ಕೆ ತಕ್ಕ ಹಾಗೆ ಬೆಲೆ ಸಹ ಹೆಚ್ಚುಕಡಿಮೆ ಆಗುತ್ತದೆ..
Rolls Royce features:
ಈ ಕಾರ್ ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಕಾರ್ ನಲ್ಲಿ 6.75 ಲೀಟರ್ ಟ್ವಿನ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಇದೆ. 569 bhp ಪವರ್ ಮತ್ತು 850 nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ಶುರುವಾಗುವುದೇ 6.95 ಕೋಟಿಯಿಂದ ಶುರುವಾಗುತ್ತಾರೆ. ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ದುಬಾರಿ ಕಾರ್ ಆಗಿದ್ದು, ಇದರ ಬೆಲೆ 10 ಕೋಟಿ ರೂಪಾಯಿ ಆಗಿದೆ. ಈ ಕಾರ್ ನಲ್ಲಿ ಅದೇ ಥರ ಇಂಜಿನ್ ಇದೆ, ಆದರೆ ಹೆಚ್ಚು ಪವರ್ ಹಾಗೂ ಟಾರ್ಕ್ ಹೊಂದಿದೆ.
ಬ್ಲ್ಯಾಕ್ ಬ್ಯಾಡ್ಜ್ ಕಲಿನಿನ್ ಕಾರ್ ಸಾಮಾನ್ಯ ವರ್ಷನ್ ಗಿಂತ 29ps ಪವರ್ ಮತ್ತು 50nm ಟಾರ್ಕ್ ಹೆಚ್ಚಾಗಿ ಉತ್ಪಾದನೆ ಮಾಡುತ್ತದೆ. ಇತ್ತೀಚೆಗೆ ಅಂಬಾನಿ ಫ್ಯಾಮಿಲಿ ಕೂಡ ಈ ಕಾರ್ ಖರೀದಿ ಮಾಡಿತ್ತು. ಇನ್ನು ಬಾಲಿವುಡ್ ನಲ್ಲಿ ಈ ಕಾರ್ ಇರುವುದು ಶಾರುಖ್ ಖಾನ್ ಅವರ ಹತ್ತಿರ ಮಾತ್ರ.
Also Read: Government Scheme : ಬಡವರ ಬಂಧು ಒಂದು ದಿನದಲ್ಲಿ ಸಾಲ ಯೋಜನೆ!! ಸಿಎಂ ನಿಂದ ಭರ್ಜರಿ ಚಾಲನೆ